ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ | ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಮುಳುಗಿದೆ ಅಮಿನ್ ರೆಡ್ಡಿ ಆರೋಪ

ಶಹಾಪುರ : ರಾಜ್ಯದಲ್ಲಿ ಮಳೆ ಅಭಾವದಿಂದ ಬರಗಾಲ ಆವರಿಸಿದೆ. ರೈತರಿಗೆ ಇದುವರೆಗೂ ಪರಿಹಾರ ಧನ ಬಂದಿಲ್ಲ. ಇದನ್ನು ಬಿಟ್ಟು ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಜೆಪಿ ಮುಖಂಡ ಅಮಿನ್ ರೆಡ್ಡಿ ಯಾಳಗಿ ಆರೋಪಿಸಿದರು. ನಗರದ ಬಸವೇಶ್ವರ ವೃತ್ತದಿಂದ ಚರಬಸವೇಶ್ವರ ಕಮಾನಿನವರೆಗೆಬಿಜೆಪಿ ಕಾರ್ಯಕರ್ತರನ್ನೊಳಗೊಂಡು ಬೃಹತ್ ಪ್ರತಿಭಟನೆ ಉದ್ದೇಶ ಮಾತನಾಡಿದರು. ರಾಜ್ಯ ಸರಕಾರ ರೈತರಿಗೆ ಸರಿಯಾಗಿ ವಿದ್ಯುತ್ ಒದಗಿಸುತ್ತಿಲ್ಲ. ರೈತರಿಗೆ ಪ್ರೀ ಪೇಸ್ ವಿದ್ಯುತ್ ಇಲ್ಲದೆ ಕಂಗಾಲಾಗಿದ್ದಾರೆ. ಬೆಳೆದ ಬೆಳೆಗಳು ಒಣಗುತ್ತಿವೆ. ನೀರಿನ ಅಭಾವ ರಾಜ್ಯದಲ್ಲಿ ಕಾಡುತ್ತಿದೆ. ಸರಿಯಾದ ಪ್ರಮಾಣದಲ್ಲಿ ಈ ವರ್ಷ ಮಳೆ ಆಗಿಲ್ಲ. ಇದನ್ನು ಪರಿಹರಿಸದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಕಾಮ ಮಾತನಾಡಿ, ಕಾಂಗ್ರೆಸ್ ಸರಕಾರ ಕಲಾವಿದರ ಹಣದಲ್ಲಿಯೂ ಕೂಡ ಕಮಿಷನ್ ಕೇಳುತ್ತಿದೆ ಎಂದರೆ ನಾಚಿಕೆಯಾಗಬೇಕು. ಕೆಪಿಸಿಸಿ ಎಂದರೆ ಕಳ್ಳರ ಪಕ್ಷ ಎಂದರ್ಥ. ಶೌಚಾಲಯದಲ್ಲೂ ಕಮಿಷನ್ ಬಿಡುತ್ತಿಲ್ಲ ಕಾಂಗ್ರೆಸ್ ನವರು ಎಂದು ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಮುಖಂಡರಾದ ಬಸವರಾಜ ವಿಭೂತಿಹಳ್ಳಿ, ನಗರ ಮಂಡಲ ಅಧ್ಯಕ್ಷರಾದ ದೇವೇಂದ್ರಪ್ಪ ಕೊನೇರ, ಗ್ರಾಮೀಣ ಮಂಡಲ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ, ಕಾಂಗ್ರೆಸ್ ಹಿರಿಯ ಮುಖಂಡರಾದ ಶಿವರಾಜ ದೇಶಮುಖ, ಚಂದ್ರಶೇಖರ ಕೊಲ್ಲೂರು, ಯಲ್ಲಪ್ಪ ವನದುರ್ಗ, ರಾಜಶೇಖರ ಗೂಗಲ್, ಮಹೇಶ ರಸ್ತಾಪುರ, ಉಮೇಶ್ ಮಹಾಮನಿ, ಬಸವರಾಜ, ರಂಗಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 

About The Author