ತಾಲೂಕು ಅಭಿವೃದ್ಧಿ ಮತ್ತು ರೈತರ ಸಮಸ್ಯೆಗಳ ಪರ ಹಗಲಿರುಳು ಹೋರಾಟಕ್ಕೆ ಸಿದ್ಧ : ಹಗರಟಗಿ

ವಡಗೇರಾ : ರೈತರ ಸಮಸ್ಯೆಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ಜಯ ಸಿಗುತ್ತದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ಯಾದಗಿರಿ ಜಿಲ್ಲಾಧ್ಯಕ್ಷರಾದ ಮಲ್ಲಣ್ಣಗೌಡ ಹಗರಟಗಿ ಹೇಳಿದರು. ವಡಗೇರಾ ತಾಲೂಕು ಹಾಗೂ ನಗರ ಘಟಕದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಹಲವಾರು ಸಮಸ್ಯೆಗಳು ತಾಂಡವಾಡುತ್ತಿದ್ದು, ಅವುಗಳ ಸುಧಾರಣೆ ತರುವ ನಿಟ್ಟಿನಲ್ಲಿ ಹಂತ ಹಂತವಾಗಿ ಹೋರಾಟ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಹಾಗೂ ಕಾಲುವೆಗಳ ನೀರಿನ ಸಮಸ್ಯೆ ಹೆಚ್ಚಾಗಿದ್ದು, ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಇದರ ಕುರಿತಾಗಿ ಹೋರಾಟ ಹಮ್ಮಿಕೊಳ್ಳಿ ನಿಮ್ಮ ಬೆಂಬಲಕ್ಕೆ ನಾವಿರುತ್ತೇವೆ ಎಂದರು. ಜಿಲ್ಲಾ ಉಪಾಧ್ಯಕ್ಷ ವೆಂಕೋಬ ಕಟ್ಟಿಮನಿ ದೇವೇಂದ್ರಪ್ಪ ಕೋಲ್ಕಾರ, ಮಣಿ ಪಾಲ್ ರೆಡ್ಡಿ, ಶಿವಶರಣಪ್ಪ ತಡಿಬಿಡಿ, ಶಿವರಾಜ್ ತೇಕರಾಳ, ಗುರುನಾಥ್ ರೆಡ್ಡಿ, ಸೋಪಣ್ಣ ಹಳಿಸಗರ, ಶರಣು ಖಾನಾಪುರ, ವೆಂಕಟೇಶ್ ಆಲ್ದಾಳ, ದೇವು ಆವಂಟಿ ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪದಾಧಿಕಾರಿಗಳು 

ಶರಣು ಜಡಿ ಗೌರವ ಅಧ್ಯಕ್ಷ, ವಡಗೇರಾ ತಾಲೂಕು ಅಧ್ಯಕ್ಷ ವಿದ್ಯಾಧರ್, ಜಾಕಾ ಉಪಾಧ್ಯಕ್ಷ ವೆಂಕಟೇಶ್ ಇಟಗಿ ಅಯ್ಯಪ್ಪ ನಾಟೇಕಾರ ರಾಘವೇಂದ್ರ ಗೊಂದೆನೂರ ಪ್ರಧಾನ ಕಾರ್ಯದರ್ಶಿ ಹಳ್ಳೆಪ್ಪ ತೇಜೇರ ಸಂಘಟನಾ ಕಾರ್ಯದರ್ಶಿ ನಿಂಗಪ್ಪ ಕುರಿಕಳ್ಳಿ ಶಿವು ಗೂನಾಲ ಸತೀಶ್ ಪೂಜಾರಿ ಸಹ ಕಾರ್ಯದರ್ಶಿ  ಮಲ್ಲು ದಾಸರ ಸಂಚಾಲಕ ಮರಲಿಂಗ ಗೋನಾಲ ಕಾರ್ಯದರ್ಶಿ ಮಲ್ಲಪ್ಪ ನಾಟೇಕಾರ ಖಜಾಂಚಿ ನಾಗರಾಜ್ ಸ್ವಾಮಿ ಕೊರ್ ಕಮಿಟಿಯ ಪ್ರಮುಖರಾದ ಕೃಷ್ಣ ಟೇಲರ್ ಶಂಕ್ರಪ್ಪ ಸಾಹುಕಾರ ಕರುಣಗಿ ಮಹಿಬೂಬ್ ಖುರೇಶಿ ನಗರ ಘಟಕದ ಪದಾಧಿಕಾರಿಗಳಾದ ಮಲ್ಲು ಬಾಡದ ಸೈದು ಬೂದಿನಾಳ ತಿರುಮಲ ಮುಸ್ತಾಜೀರ್ ಚಂದ್ರು ಕಾಡಮನೂರ ರಾಘು ಗುತ್ತೇದಾರ್ ಶಿವರೆಡ್ಡಿ ರವಿ ಮೈಬುಬ್ ಸೈದಾಪುರ್ ಯಲ್ಲಪ್ಪ ಸುಬಾನ ಮೌನೇಶ್ ಆಯ್ಕೆಯಾದರು.

Leave a Reply

Your email address will not be published. Required fields are marked *