ಕನ್ನಡ ನಾಮಫಲಕ ಹಾಕಲು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಆಗ್ರಹ

ಶಹಾಪುರ : ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷೆ ಮತ್ತು ಕಲಿಕೆಗೆ ಮೊದಲ ಆದ್ಯತೆ ನೀಡಬೇಕು. ನಗರಸಭೆ ವ್ಯಾಪ್ತಿಯಲ್ಲಿ ಬರುವ ವ್ಯವಹಾರಿಕ ಅಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್, ಸರಕಾರಿ ಕಚೇರಿಗಳಲ್ಲಿ, ಕಂಪ್ಯೂಟರ್ ತರಬೇತಿ ಕೇಂದ್ರಗಳಲ್ಲಿ ಕನ್ನಡ ನಾಮಪಲಕಗಳನ್ನು ಕಡ್ಡಾಯವಾಗಿ ಹಾಕಬೇಕೆಂದು ತಹಶೀಲ್ದಾರರು ಆದೇಶ ಹೊರಡಿಸಬೇಕೆಂದು ತಾಲೂಕು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಮಿತಿಯ ಸದಸ್ಯರು ಇಂದು ತಹಶಿಲ್ದಾರರಿಗೆ ಮನವಿ ಮಾಡಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಮಲ್ಲಯ್ಯ ಸ್ವಾಮಿ ಇಟಗಿ ಮಾತನಾಡಿ, ರಾಷ್ಟ್ರೀಯ ಬ್ಯಾಂಕುಗಳಲ್ಲಿಯೂ ಕೂಡ ಸಿಬ್ಬಂದಿಯವರು ಕನ್ನಡ ಭಾಷೆಯಲ್ಲಿ ಮಾತನಾಡುತ್ತಿಲ್ಲ. ಇದರಿಂದ ಗ್ರಾಹಕರಿಗೆ ರೈತರಿಗೆ ತೊಂದರೆಯಾಗುತ್ತಿದೆ.ರಾಜ್ಯದ ದೊಡ್ಡ ಹಬ್ಬವಾದ ಕನ್ನಡ ರಾಜ್ಯೋತ್ಸವ ನವೆಂಬರ್ ಒಂದರAದು ಆಚರಿಸಲಿದ್ದು, ಅಂದಿನ ದಿನದೊಳಗೆ ತಾಲೂಕಿನಾದ್ಯಂತ ಕನ್ನಡ ನಾಮಪಲಕವನ್ನು ಹಾಕಲು ಕಡ್ಡಾಯವಾಗಿ ಆದೇಶ ಹೊರಡಿಸಬೇಕೆಂದು ತಹಶೀಲ್ದಾರರಿಗೆ ತಿಳಿಸಿದರು.ಕನ್ನಡ ಪರ ಒಕ್ಕೂಟದ ಸದಸ್ಯರಾದ ವೆಂಕಟೇಶ ಬೋನೇರ್,ಮೌನೇಶ್ ಹಳಿಸಗರ, ಸಿದ್ದುಪಟ್ಟೇದಾರ, ಸುಭಾಷ್ಪ ಹೋತಪೇಟ, ಮಲ್ಲನಗೌಡ ರಾಯಚೂರು, ಭೀಮನಗೌಡ ಕಟ್ಟಿಮನಿ, ಪ್ರದೀಪ್ ಕಟ್ಟಿಮನಿ, ಶಿವು ಶಿರವಾಳ ಸೇರಿದಂತೆ ಇತರರು ಇದ್ದರು

About The Author