ಕೊಂಕಲ್ ವಲಯ ಸಾಹಿತ್ಯ ಘಟಕದ ಪದಾಧಿಕಾರಿಗಳು ನೇಮಕ | ಕೊಂಕಲ್ ಗ್ರಾಮ ಕಲೆಗಾರರ ಬೀಡು : ಮಲ್ಲಿಕಾರ್ಜುನ ಕರಿಕಳ್ಳಿ ಅಭಿಮತ

ವಡಗೇರಾ : ತಾಲೂಕಿನ ಕೊಂಕಲ್ ಗ್ರಾಮದಲ್ಲಿ ವಡಗೇರಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕರಿಕಳ್ಳಿ ನೇತೃತ್ವದಲ್ಲಿ ಕೊಂಕಲ್ ವಲಯ ಘಟಕದ ಪದಾಧಿಕಾರಿಗಳು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಕರಿಕಳ್ಳಿ ಮಾತನಾಡಿ, ಕನ್ನಡ ಭಾಷೆ ನೆಲ ಜಲ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳಿಸುವುದರ ಜೊತೆಗೆ  ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಕೊಂಕಲ್ ವಲಯ ಘಟಕ ನೇಮಕ ಮಾಡಲಾಗಿದೆ. ಈ ಗ್ರಾಮವು ಸಗರ ನಾಡಿನಲ್ಲಿಯೇ ಅತಿ ಹೆಚ್ಚು ಸಾಹಿತಿ ಕವಿ ಕಲೆಗಾರರನ್ನು ಹೊಂದಿದ ಬಿಡು. ತಾಲೂಕಿನಲ್ಲಿ ಈ ಗ್ರಾಮವು ಅತಿ ಹೆಚ್ಚು  ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನು ಹೊಂದಿದ್ದು, ನಾಡು ನುಡಿ ಭಾಷೆ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ. ಎಲೆ ಮರಿ ಕಾಯಿಯಂತೆ ಇರುವ ಕವಿ ಸಾಹಿತಿ ಕಲೆಗಾರ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದರು.
ಹಿರಿಯ ಸಾಹಿತಿ ಡಾ. ಎಸ್. ಎಸ್ .ಗುಬ್ಬಿ ಮಾತನಾಡಿ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಬಲಕ್ಕೆ ನಾನು ಸದಾ ಇರುತ್ತೇನೆ ನಮ್ಮೂರಿನಲ್ಲಿ ಕವಿ ಸಾಹಿತಿಗಳು ಹೆಚ್ಚಾಗಿದ್ದಾರೆ ಇದು ನನಗೆ ಹೆಮ್ಮೆಯ ವಿಷಯ ಎಂದರು.ಪ್ರೊಫೆಸರ್ ವೆಂಕಣ್ಣ ಡೊಣ್ಣೆಗೌಡ, ರಾಯಚೂರು ಜಿಲ್ಲೆಯ ಸಹಕಾರಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ಪಾಟೀಲ್ ಕೋದಂಡ,ಕಸಾಪ ಕಾರ್ಯದರ್ಶಿ ಸಾಹೇಬ್ ರೆಡ್ಡಿ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಸಾಪ ಗೌರವ ಕಾರ್ಯದರ್ಶಿ ಬಸವರಾಜ್ ಸೊನ್ನದ,ಕಸಾಪ  ಸಂಘಟನಾ ಕಾರ್ಯದರ್ಶಿ ಅಶೋಕ್ ಮುಸ್ತಾಜಿರ್, ಹೈಯಾಳ ವಲಯ ಅಧ್ಯಕ್ಷ ಆನಂದ್ ಗುಬ್ಬಿ,ಪಜಾ. ಪ್ರತಿನಿಧಿ ಮರೇಪ್ಪ ಖ್ಯಾತನಾಳ,ಪಪಂ ಪ್ರತಿನಿಧಿ ವಾಸುದೇವ್ ಮರಕಲ್, ಕರವೇ ಮುಖಂಡರುಗಳಾದ ಶರಣು ಇಟಿಗಿ, ರಂಗಯ್ಯ ಮುಸ್ತಾಜೀರ್, ಉಪನ್ಯಾಸಕ ಚಂದ್ರಶೇಖರ, ಅಂಬಣ್ಣ ಕಾವಲಿ, ಸೈಯದ್ ಅಲಿ,ಶಾಂತಪ್ಪ ಗೊಂದನೂರ, ಬೀರಪ್ಪ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸದಸ್ಯರು ಹಾಗೂ ಗ್ರಾಮದ ಮುಖಂಡರು ಮತ್ತು ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀನಿವಾಸ್ ಮಡಿವಾಳ ನಿರೂಪಿಸಿ ವಂದಿಸಿದರು.

ನೂತನ ಪದಾಧಿಕಾರಿಗಳು

ಮಲ್ಲಿಕಾರ್ಜುನ್ ಕವಲಿ ಅಧ್ಯಕ್ಷರು,ಬಸವರಾಜ್ ಕಲೆಗಾರ ಗೌರವ ಕಾರ್ಯದರ್ಶಿ, ಹೊನ್ನಪ್ಪ ದಾಳಿ ಗೌರವ ಕೋಶ್ಯಾಧ್ಯಕ್ಷ,ಇಂದಿರಾ ದೇವಿ ಮಹಿಳಾ ಪ್ರತಿನಿಧಿ, ಪರಶುರಾಮ್ ಪರಿಶಿಷ್ಟ ಜಾತಿ ಪ್ರತಿನಿಧಿ, ಮಲ್ಲಪ್ಪ ಕಾವಲಿ ಪರಿಶಿಷ್ಟ ಪಂಗಡ ಪ್ರತಿನಿಧಿ, ಮಾಳಿಂಗರಾಯ ನಾಗರಾಳ ಹಿಂದುಳಿದ ವರ್ಗದ ಪ್ರತಿನಿಧಿ, ಚಂದಾಸಾಬ್  ರಂಗಂಪೇಟೆ ಅಲ್ಪಸಂಖ್ಯಾತರ ಪ್ರತಿನಿಧಿ, ಚೌಡಯ್ಯ ಬಾಹುರ, ಸಂಘಟನಾ ಕಾರ್ಯದರ್ಶಿ, ನಿಂಗಪ್ಪ ಸಿಂಗಾರಿ ಸಂಘಟನಾ ಕಾರ್ಯದರ್ಶಿ, ಪ್ರಕಾಶ ಬೂದೂರು ಸಂಘಟನಾ ಕಾರ್ಯದರ್ಶಿ, ನಿಂಗಪ್ಪ ವರಿಕೇರಿ ಶಿಕ್ಷಣ ವಲಯ ಪ್ರತಿನಿಧಿ.ಯ, ಅಮರಣ್ಣ  ಶಿಕ್ಷಣ ಕ್ಷೇತ್ರ ಸ್ಥಳೀಯ ಪ್ರತಿನಿಧಿ,ಭೀಮಣ್ಣ ಮಡಿವಾಳ ಶಿವಕುಮಾರ ಗುಬ್ಬಿ ಕಾರ್ಯಕಾರಿ ಸಮಿತಿ ಸದಸ್ಯರು, ಗೌರವ ಸಲಹೆಗಾರರಾಗಿ ಪತ್ರಕರ್ತರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರಾದ ಮಲ್ಲಪ್ಪ ಸಂಕೀನ್ ನೇಮಕವಾಗಿದ್ದಾರೆ. 

About The Author