ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿಗೆ ಚಾಲನೆ | ಪದವೀಧರ ಕ್ಷೇತ್ರದ ಚುನಾವಣೆ ಸವಾಲಾಗಿ ಸ್ವೀಕರಿಸೋಣ : ಅಮರನಾಥ ಪಾಟೀಲ್

ಶಹಾಪುರ: ಕಾರ್ಯಕರ್ತರ ಭದ್ರ ನೆಲೆಯಾಗಿರುವ ಬಿಜೆಪಿ ಪಕ್ಷ ಅಧಿಕಾರವಿದ್ದಾಗಲೂ ಅಧಿಕಾರದಲ್ಲಿ ಹಿನ್ನಡೆಯಾದಾಗಲೂ ಧೃತಿಗೆಡದೆ ಪಕ್ಷ ಸಂಘಟನೆಯ ಕಾರ್ಯದಲ್ಲಿ ಮತ್ತು ಪಕ್ಷದ ಕರೆಬಂದಾಗ ಸಜ್ಜಾಗುವ ಕಾರ್ಯಪಡೆಯಿರುವುದು ದೊಡ್ಡಶಕ್ತಿ.ಪದವೀಧರ ಕ್ಷೇತ್ರದ ಚುನಾವಣೆ ಸವಾಲಾಗಿ ಸ್ವೀಕರಿಸೋಣ ಎಂದು ಯಾದಗಿರಿ ಜಿಲ್ಲಾ ಪ್ರಭಾರಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ ಕಾರ್ಯಕರ್ತರಿಗೆ ಕರೆ ನೀಡಿದರು.ನಗರದ ಭಾರತೀಯ ಜನತಾ ಪಾರ್ಟಿಯ ಮತಕ್ಷೇತ್ರದ ಕಾರ್ಯಾಲಯದಲ್ಲಿ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ನೋಂದಣಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಮಯ ಕಡಿಮೆಯಿರುವುದರಿಂದ ಕಾರ್ಯಕರ್ತರು ಪರಿಶ್ರಮವಹಿಸಿ ಗ್ರಾಮೀಣ ನಗರದಲ್ಲಿ ಪದವೀಧರರನ್ನು ಗುರುತಿಸಿ ನಿಯಮಾವಳಿಗನ್ವಯ ನೋಂದಣಿ ಮಾಡಿಸಬೇಕು ಎಂದರು.

 ” ಶಹಾಪುರ ನಗರದ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ನೋಂದಣಿ ಸಭೆಗೆ ಚಾಲನೆ ನೀಡಲಾಯಿತು “

ಅಮೀನರೆಡ್ಡಿ ಯಾಳಗಿ ಮಾತನಾಡಿ, ಕಾರ್ಯಕರ್ತರು ಕ್ರೀಯಾಶೀಲರಾಗಿ ನೋಂದಣಿ ಕಾರ್ಯದ ಯಶಸ್ಸಿಗೆ ಶ್ರಮಿಸೋಣ, ಎಲ್ಲರ ಜೊತೆ ಸದಾಕಾಲ ನಾನಿರುವೆ ಎಂದರು.ವಿಭಾಗೀಯ ಸಂಫಟನಾ ಪ್ರಧಾನ ಕಾರ್ಯದರ್ಶಿ ಅರುಣ ಬಿನ್ನಾಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಡಾ.ಚಂದ್ರಶೇಖರ ಸುಬೇದಾರ ಹೆಚ್.ಸಿ.ಪಾಟೀಲ, ಸುರೇಶ ಸಜ್ಜನ, ಪ್ರಭುಗೌಡ ಅಭೀಶಾಳ, ವೆಂಕಟರೆಡ್ಡಿ ಅಬ್ಬೆತುಮಕೂರ ಹಾಗೂ ನಗರ ಮಂಡಲ ಅಧ್ಯಕ್ಷರಾದ ದೇವಿಂದ್ರಪ್ಪ ಕೋನೇರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜುಗೌಡ ಪಾಟೀಲ ಉಕ್ಕಿನಾಳ, ರಾಜಶೇಖರ ಗೂಗಲ್, ಬಸವರಾಜ ಅರುಣಿ, ರಂಗಪ್ಪ ಜಿರಲೆ, ಶರಣಬಸವ ಮಂಡಗಳ್ಳಿ, ವೆಂಕಟೇಶ ಜಾಧವ, ಅಡಿವೆಪ್ಪ ಜಾಕಾ, ರಾಘವೇಂದ್ರ ಯಕ್ಷಂತಿ, ಚಂದ್ರಶೇಖರ ಯಾಳಗಿ, ಸೋಪಣ್ಣ ಸಗರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

About The Author