ವಿಶ್ವ ಕೈ ತೊಳೆಯುವ ದಿನಾಚರಣೆ | ಸ್ವಚ್ಛವಾದ ಕೈಗಳಿಂದ ಆರೋಗ್ಯ ಕಾಪಾಡಲು ಸಾಧ್ಯ : ಶಿವಕುಮಾರ

ಶಹಾಪೂರ : ಅಶುದ್ಧ ಕೈಗಳಿಂದ ಊಟ ಮಾಡುವ ಮೂಲಕ ರೋಗ ತರುವ ಸೂಕ್ಷ್ಮಾಣು ಜೀವಿಗಳು ನಮ್ಮ ದೇಹದೊಳಗೆ ನೇರವಾಗಿ ಪ್ರವೇಶ ಮಾಡಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವದರಿಂದ ನಮ್ಮ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೋಳೆದುಕೊಳ್ಳಬೇಕು ಎಂದು ಸ್ವಚ್ಛ ಭಾರತ ಮಿಷನ್ ಜಿಲ್ಲಾ ಐಇಸಿ ಸಮಾಲೋಚಕರಾದ ಶಿವಕುಮಾರ ಹೇಳಿದರು.

ಜಿಲ್ಲಾ ಪಂಚಾಯತ ಯಾದಗಿರಿ, ತಾಲೂಕ ಪಂಚಾಯತ ಶಹಾಪುರ ಹಾಗೂ ಗ್ರಾಮ ಪಂಚಾಯತ ರಸ್ತಾಪೂರ ಇವರ ಸಹಯೋಗದಲ್ಲಿ ವಿಶ್ವ ಕೈತೋಳೆಯುವ ದಿನಾಚರಣೆ ಅಂಗವಾಗಿ ಸೆ.15ರಂದು ರಸ್ತಾಪೂರ ಗ್ರಾಮದ ಹಸಿರು ಸರೋವರದ ದಡದಲ್ಲಿ ಹಮ್ಮಿಕೊಂಡ ಸ್ವಚ್ಛತೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ  ಮಾತನಾಡಿದರು.

ನರೇಗಾ ಯೋಜನೆಯಲ್ಲಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ನಿರ್ಧಿಷ್ಠ ವಿಧಾನಗಳ ಮೂಲಕ ಕೈಗಳನ್ನು ಶುಚಿಯಾಗಿ ತೊಳೆಯುವ ಅಭ್ಯಾಸವನ್ನು ರೂಡಿಸಿಕೊಂಡು ಪ್ರತಿನಿತ್ಯ ಅನುಸರಿಸಬೇಕು ಎಂದು ತಿಳಿಸಿದರು. ಇಂತಹ ವಿಧಾನದಿಂದ ಶೇ.30 ರಷ್ಟು ಭೇದಿ, ಅತಿಸಾರದಂತ ಕಾಯಿಲೆ, ಶೇ.20  ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯ ರೋಗಗಳನ್ನು ಕಡಿಮೆ ಮಾಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು ಎಂದು ತಿಳಿಸಿದರು.

ಪ್ರತಿಯೊಬ್ಬರು ಪ್ರತಿದಿನ ಮಲವಿರ್ಜನೆ ಬಳಿಕ, ಊಟ ಮಾಡುವ ಮೊದಲು, ಇತರೆ ಕೆಲಸ ಮಾಡಿದ ನಂತರ ಹಾಗೂ ಮಕ್ಕಳು ಶೌಚಕ್ಕೆ ಹೊಗಿ ಬಂದ ಮೇಲೆ, ಶುಚಿ ಮಾಡಿದ ನಂತರ ತಾಯಂದಿರು ಕೈಗಳನ್ನು  ವಯಸ್ಸಾದ ಅಸಹಾಯರಿಗೆ ಶೌಚದ ವ್ಯವಸ್ಥೆಗೆ ಸಹಕರಿಸಿದ ಬಳಿಕ ಪ್ರತಿಯೊಬ್ಬರು ಕಡ್ಡಾಯವಾಗಿ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು.ಕೈತೊಳೆಯುವ ವಿಧಾನಗಳ ಮೂಲಕ ಪರಸ್ಪರ ಕೈಗಳಿಂದ ಬೆರಳುಗಳ ಸಂದಿಯಲ್ಲಿ ಹೆಬ್ಬೆರಳಿನ ಸುತ್ತ ಉಗುರುಗಳ ತುದಿಯಲ್ಲಿ ಉಜ್ಜುವ ಮೂಲಕ ಕೈಗಳನ್ನು ತೊಳೆಯಬೇಕು ಅಂದಾಗ ನಮ್ಮ ಕೈ ಶುಚಿಯಾಗಿರಲು ಸಾಧ್ಯ ಎಂದು ಮಾಹಿತಿ ನೀಡಿದರು.

ಶುದ್ಧವಾದ ನಮ್ಮ ಕೈಗಳು ಮೂಗು,ಬಾಯಿಯ ಸ್ಪರ್ಶದಿಂದ ನೇರವಾಗಿ ನಮ್ಮ ದೇಹದೋಳಗೆ ಸೋಕ್ಷಾಣು, ವೈರಾಣುಗಳು ದೇಹ ಪ್ರವೇಶ ಮಾಡವುದಿಲ್ಲ. ಇದರಿಂದ ಆರೋಗ್ಯದಿಂದ ಇರಬಹುದು. ನಮ್ಮ ಆರೋಗ್ಯದ ಭವಿ಼ಷ್ಯ ನಮ್ಮ ಅಂಗೈಯಲ್ಲಿದೆ. ಇದಕ್ಕಾಗಿ ನಾವು ಪ್ರತಿದಿನ 7 ವಿಧಾನಗಳ ಮೂಲಕ ಕೈಗಳನ್ನು ಸಾಬೂನಿನಿಂದ ತೊಳೆಯುವ ಅಭ್ಯಾಸಗಳನ್ನು ರೂಡಿಸಿಕೊಂಡು ಶುಚಿಯಾಗಿರುವ ಕೈಗಳ ವ್ಯಾಪ್ತಿಗೆ ನಾವು ಸೇರೊಣ ಎಂದು ಪ್ರತಿಜ್ಞೆ ಮಾಡಬೇಕಾಗಿದೆ ಎಂದು ತಿಳಿಸಿದರು.ಈ ಮಧ್ಯೆ ಏಳು ವಿಧಾನಗಳನ್ನು ಅನುಸರಿಸಿ ಸಾಬೂನುನಿಂದ ಕೈ ತೊಳೆಯುವುದರ ಕುರಿತು ಪ್ರತ್ಯೇಕ್ಷವಾಗಿ ತೋರಿಸಲಾಯಿತು.ಈ ವೇಳೆ ನರೇಗಾ ಯೋಜನೆ ಐಇಸಿ ಸಂಯೋಜಕ ಬಸಪ್ಪ,ಗ್ರಾಮ ಪಂಚಾಯಿತಿ ಡಿಇಓ ದೇವನಂದ, ಕರವಸೂಲಿಗಾರ ಮಲ್ಲಣ್ಣ, ಪರಮಣ್ಣ ಬೇಕು ಆಂಜನೇಯ, ಕಾಯಕ ಬಂದು ಮಲ್ಲು ಹಾಗೂ ನರೇಗಾ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.

About The Author