ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮಟ್ಟದ ಸಮಾರೋಪ ಶಿಬಿರ | ಬರಗಾಲ,ಕ್ಷಾಮ ಸರ್ಕಾರಗಳ ಸೃಷ್ಟಿ-ಯಶವಂತ ಆರೋಪ

ಶಹಾಪುರ : ವಾಡಿಕೆಗಿಂತ ಮಳೆ ಕಡಿಮೆ ಆದ ಸಂದರ್ಭದಲ್ಲಿ ಉಂಟಾಗುವ ಬರಗಾಲ,ಕ್ಷಾಮ ಹಾಗೂ ಆಹಾರ ಆಭಾವಗಳಿಗೆ ಸರ್ಕಾರಗಳ ಜನ ವಿರೋಧಿ ಧೋರಣೆಗಳೇ ಕಾರಣ.ಸರ್ಕಾರಗಳು ತಮ್ಮ ವೈಪಲ್ಯ ಮರೆಮಾಚಲು ಪ್ರಕೃತಿಯನ್ನು ದೂಷಿಸುತ್ತಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಹೇಳಿದರು. ರಸ್ತಾಪೂರದಲ್ಲಿಂದು ಮೂರು ದಿನಗಳ ರಾಜ್ಯ ಅಧ್ಯಯನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ರಾಜ್ಯದಾದ್ಯಂತ ತೀವ್ರ ಬರಗಾಲ ರಾಜ್ಯದ ಜನತೆಯನ್ನು ಭಾದಿಸುತ್ತಿರುವಾಗ ಸಮರೋಪಾದಿಯಲ್ಲಿ ಬರಗಾಲ ಪರಿಹಾರ ಮಾಡಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಅಧ್ಯಯನ ಪ್ರವಾಸದ ನೆಪದಲ್ಲಿ ಕಾಲಹರಣ ಮಾಡುತ್ತಿವೆ. ಬರಗಾಲ ಪರಿಹಾರದ ಕ್ರಮವಾಗಿ ಉದ್ಯೋಗ ಖಾತರಿ ಕೆಲಸ ,ರೇಷನ್ ವಿತರಣೆಯಲ್ಲಿ ಹೆಚ್ಚಳ, ಮೇವು ,ಕುಡಿಯುವ ನೀರು ಒದಗಿಸುವ ಕೆಲಸವನ್ನು ನಿರ್ಲಕ್ಷಿಸುತ್ತಿವೆ ಎಂದು ಆಪಾದಿಸಿದರು.

ನರೇಗಾ ಯೋಜನೆಯಲ್ಲಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ನಿರ್ಧಿಷ್ಠ ವಿಧಾನಗಳ ಮೂಲಕ ಕೈಗಳನ್ನು ಶುಚಿಯಾಗಿ ತೊಳೆಯುವ ಅಭ್ಯಾಸವನ್ನು ರೂಡಿಸಿಕೊಂಡು ಪ್ರತಿನಿತ್ಯ ಅನುಸರಿಸಬೇಕು ಎಂದು ತಿಳಿಸಿದರು. ಇಂತಹ ವಿಧಾನದಿಂದ ಶೇ.30 ರಷ್ಟು ಭೇದಿ, ಅತಿಸಾರದಂತ ಕಾಯಿಲೆ, ಶೇ.20 ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯ ರೋಗಗಳನ್ನು ಕಡಿಮೆ ಮಾಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು ಎಂದು ತಿಳಿಸಿದರು.

ಪ್ರತಿಯೊಬ್ಬರು ಪ್ರತಿದಿನ ಮಲವಿರ್ಜನೆ ಬಳಿಕ, ಊಟ ಮಾಡುವ ಮೊದಲು, ಇತರೆ ಕೆಲಸ ಮಾಡಿದ ನಂತರ ಹಾಗೂ ಮಕ್ಕಳು ಶೌಚಕ್ಕೆ ಹೊಗಿ ಬಂದ ಮೇಲೆ, ಶುಚಿ ಮಾಡಿದ ನಂತರ ತಾಯಂದಿರು ಕೈಗಳನ್ನು ವಯಸ್ಸಾದ ಅಸಹಾಯರಿಗೆ ಶೌಚದ ವ್ಯವಸ್ಥೆಗೆ ಸಹಕರಿಸಿದ ಬಳಿಕ ಪ್ರತಿಯೊಬ್ಬರು ಕಡ್ಡಾಯವಾಗಿ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು.ಕೈತೊಳೆಯುವ ವಿಧಾನಗಳ ಮೂಲಕ ಪರಸ್ಪರ ಕೈಗಳಿಂದ ಬೆರಳುಗಳ ಸಂದಿಯಲ್ಲಿ ಹೆಬ್ಬೆರಳಿನ ಸುತ್ತ ಉಗುರುಗಳ ತುದಿಯಲ್ಲಿ ಉಜ್ಜುವ ಮೂಲಕ ಕೈಗಳನ್ನು ತೊಳೆಯಬೇಕು ಅಂದಾಗ ನಮ್ಮ ಕೈ ಶುಚಿಯಾಗಿರಲು ಸಾಧ…
ಪ್ರಕೃತಿ ದೂಷಿಸುತ್ತಾ ಕಾಲ ಹರಣ ಮಾಡುವುದು ನಾಗರಿಕ ಸರ್ಕಾರಗಳಿಗೆ ಶೋಭೆ ತರುವುದಿಲ್ಲ. ಅಣೆಕಟ್ಟುಗಳಲ್ಲಿ ನೀರಿಲ್ಲದೆ ನೀರಾವರಿ ಪ್ರದೇಶಗಳಲ್ಲಿ ಬೆಳೆ ಒಣಗುತ್ತಿವೆ.ಮಳೆ ಆಶ್ರಿತ ಪ್ರದೇಶದಲ್ಲಿ ಗುಳೇ ಹೋಗುವ ಪರಿಸ್ಥಿತಿ ಉದ್ಭವವಾಗಿದೆ.ಉದ್ಯೋಗ ಖಾತರಿ ಹಾಗೂ ಸಾರ್ವತ್ರಿಕ ಪಡಿತರ ವ್ಯವಸ್ಥೆ ಎಲ್ಲರಿಗೂ ದೊರಕಿಸಲು ರಾಜ್ಯಾದ್ಯಂತ ರೈತ ಸಂಘ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಬಗರ್ ಹುಕಂ ಹಾಗೂ ಅರಣ್ಯ ಸಾಗುವಳಿ ರೈತರನ್ನು ಒಕ್ಕಲೆಬ್ಬಿಸಬಾರದು. ವಿದ್ಯುತ್ ಖಾಸಗೀಕರಣ ವಿರೋಧಿಸಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಕನಿಷ್ಟ ಎಂಟು ಗಂಟೆಗಳ ಕಾಲ ತ್ರಿ ಪೇಸ್ ವಿದ್ಯುತ್ ಪೂರೈಕೆ ಮಾಡಬೇಕು.ಕೂಡಲೇ ಅನ್ಯಾಯದ ಭೂ ಸ್ವಾಧೀನ ನಿಲ್ಲಿಸಬೇಕು.ಬಳಕೆಯಾಗದಿರುವ ಕೆಐಎಡಿಬಿ ಭೂ ಸ್ವಾಧೀನದ ಭೂಮಿಯನ್ನು ರೈತರಿಗೆ ನೀಡಬೇಕು. ಮಳೆ ಆಶ್ರಿತ ಹಾಗೂ ಗೇಣಿ ರೈತರ ಹಿತರಕ್ಷಣೆಗೆ ವಿಶೇಷ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಉಪಾಧ್ಯಕ್ಷ ಬಸವರಾಜ ಮಾತನಾಡಿ, ರೈತಾಪಿ ಬೇಸಾಯ ಪದ್ದತಿಯನ್ನು ಕಡೆಗಣಿಸಿ ಕಂಪನಿ ಬೇಸಾಯ ಪದ್ದತಿ ಜಾರಿ ಮಾಡುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ.ಕೃಷಿ ಭೂಮಿ ರೈತರ ಕೈಯಲ್ಲಿ ಉಳಿದರೆ ಮಾತ್ರ ದೇಶದ ಜನರಿಗೆ ಆಹಾರದ ಭದ್ರತೆ. ಇಲ್ಲದಿದ್ದರೆ ಭಾರತವು ಹಸಿವಿನ ಸಾಮ್ರಾಜ್ಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಚನ್ನಪ್ಪ ಆನೇಗುಂದಿ,ಕೃಷಿ ಕೂಲಿಕಾರರ ರಾಜ್ಯ ಉಪಾಧ್ಯಕ್ಷ ದಾವಲ್ ಸಾಬ್ ನದಾಫ್, ಬೀಮರಾಯ ಪೂಜಾರಿ, ಎಸ್ ಎಂ ಸಾಗರ್ ,ಮಲ್ಲಣ್ಣಗೌಡ, ಹೆಚ್ ಆರ್ ನವೀನ್ ಕುಮಾರ್, ಶಾಂತಾರಾಮ ನಾಯಕ, ಜಿ ನಾಗರಾಜ, ಎನ್ ಎಲ್ ಭರತ್ ರಾಜ್ ,ಜೈಲಾಲ ತೋಟದಮನಿ, ಡಾ.ಸಾಯಬಣ್ಣ ಗುಡುಬಾ ಮುಂತಾದವರು ಇದ್ದರು.

About The Author