ಕಲ್ಬುರ್ಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಭೇಟಿ

ಕಲ್ಬುರ್ಗಿ : ಇಂದು ಕಲ್ಬುರ್ಗಿ ನಗರದಲ್ಲಿ ಕಲಬುರ್ಗಿ ಯಾದಗಿರಿ ಜಿಲ್ಲಾ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ  ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಗೋನಾಯಕ್ ರವರನ್ನು ಯಾದಗಿರ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥರಡ್ಡಿ ದರ್ಶನಾಪೂರ ಮೊದಲ ಬಾರಿಗೆ ಭೇಟಿ ಮಾಡಿ ಬ್ಯಾಂಕಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಎಂ. ನಾರಾಯಣ ವರಿಗೆ ಗೌರವ ಸನ್ಮಾನ ಮಾಡಲಾಯಿತು.  ಪಿ ಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರದಾ ಶಾಂತಗೌಡ ಸಾದ್ಯಪೂರ, ಜಿಲ್ಲಾ ಸಹಕಾರ ಸಂಘಗಳು ಜಿಲ್ಲಾ ನಿಬಂಧಕರು ಯಾದಗಿರಿ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಖಾಸಿಭಾಯಿ ಪಾರಗೊಂಡ, ಸಹಕಾರ ಸಂಘಗಳ ಸಿಬ್ಬಂದಿಯವರು ಇದ್ದರು.

Leave a Reply

Your email address will not be published. Required fields are marked *