ಯಾದಗಿರಿ ಜಿಲ್ಲೆಯ ರೈತರಿಗೆ ಬರ ಪರಿಹಾರ ನೀಡುವಂತೆ ಕರಣ ಸುಬೇದಾರ ಆಗ್ರಹ

ಶಹಾಪುರ : ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ಮಳೆ ವೈಫಲ್ಯದಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.ಅದರಲ್ಲೂ ನೀರಾವರಿ ಪ್ರದೇಶ ಇಲ್ಲದೆ ರೈತರು ಮಳೆಯನ್ನೇ ಆಧಾರವಾಗಿಟ್ಟುಕೊಂಡ ರೈತರು ಬೆಳೆದ ಬೆಳೆ ಮಳೆ ಬಾರದೆ ರೈತರು ತೊಂದರೆ ಅನುಭವಿಸುವಂತಾಗಿದೆ. ಬರ ಘೋಷಣೆಯಾದರೂ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡಲು ಮುಂದೆ ಬರುತ್ತಿಲ್ಲ. ಇದು ರೈತ ವಿರೋಧಿ ಸರ್ಕಾರ ಎಂದು ಬಿಜೆಪಿ ಯುವ   ಮುಖಂಡರಾದ ಕರಣ ಸುಬೇದಾರ ಆರೋಪಿಸಿದ್ದಾರೆ.
 ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ರಾಜ್ಯದ 195 ಬರಗಾಲ ಪೀಡಿತ ತಾಲ್ಲೂಕುಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿ  ತಿಂಗಳಾದರೂ ಪರಿಹಾರ ಘೋಷಿಸಿಲ್ಲ. ತಕ್ಷಣ  ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಪರಿಹಾರ ನೀಡಬೇಕು.ಈಗಾಗಲೇ ಸರ್ಕಾರ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಆದಷ್ಟು ಬೇಗ ರೈತರಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ತಿಳಿಸಿದರು.ಕೃಷಿ ಸಚಿವರು ಕಲಬುರಗಿ ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.ಅದೇ ರೀತಿ ಯಾದಗಿರಿ  ಜಿಲ್ಲೆಯ ಮಾಹಿತಿ ಪಡೆದುಕೊಂಡು,ರೈತರು ಬೆಳೆದ
ಹತ್ತಿ, ತೊಗರಿ, ಮೆಣಸಿನಕಾಯಿ ಮುಂತಾದ ಮುಂಗಾರು ಬೆಳೆಗಳು ಮಳೆ ಬಾರದೆ ಕೆಲ ಪ್ರದೇಶಗಳಲ್ಲಿ ಹಾನಿಯಾಗಿವೆ. ಅದರಲ್ಲೂ ತೊಗರಿ ಬೆಳೆಗೆ ಈ ಬಾರಿ ಕೀಟಭಾದೆ ಆವರಿಸಿದೆ. ಇದರಿಂದ ತೊಗರಿ ಬೆಳೆ ನಷ್ಟವಾಗಿದೆ.ರೈತರು ಸಾಲ ಮಾಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಿದ್ದು,ಬೆಳೆದು ಬೆಳೆ ಬಾರದಿದ್ದರೆ ಮಾಡಿದ ಸಾಲ ಮರು ಪಾವತಿ ಮಾಡುವುದು ಕಷ್ಟವಾಗುತ್ತದೆ.
ಪ್ರಸಕ್ತ ಸಾಲಿನ ರೈತರು ಬೆಳೆಯ  ಸಾಲ  ಬಡ್ಡಿ ಸಮೇತ ಸಂಪೂರ್ಣ ಮನ್ನಾ ಮಾಡಬೇಕು.ಇತರ ಬೆಳೆಗಳಿಗೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಉಚಿತವಾಗಿ ವಿತರಿಸಬೇಕು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರದ ಖಜಾನೆ ಖಾಲಿ ಮಾಡುತ್ತಿದ್ದಾರೆ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

About The Author