ಪಡಿತರ ಕಾರ್ಡ್ ತಿದ್ದುಪಡಿಗೆ ಸರ್ವರ್‌ ಸಮಸ್ಯೆ ಕಾಲಾವಕಾಶಕ್ಕಾಗಿ ಕರವೇ ಒತ್ತಾಯ

ವಡಗೇರಾ : ವಡಗೇರಾ ತಾಲೂಕಿನಾದ್ಯಂತ ಬಿಪಿಎಲ್.ಪಡಿತರ ಕಾರ್ಡ್  ತಿದ್ದುಪಡಿ  ಹಾಗೂ ಸೇರ್ಪಡೆಗೆ ಜಿಲ್ಲಾಡಳಿತ ದಿನಾಂಕ 11ರಿಂದ 13 ವರೆಗೆ ಕಾಲಾವಕಾಶ ನೀಡಿದೆ. ಆದರೆ ಬಹುತೇಕ  ಗ್ರಾಮಗಳ ಗ್ರಾಮ ಒನ್ ಕೇಂದ್ರಗಳಲ್ಲಿ ಸರ್ವರಿಲ್ಲದೆ  ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.ಆದ್ದರಿಂದ ಸರ್ಕಾರ ಇನ್ನು ಕಾಲಾವಕಾಶ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ ಮನಿ ಮಾಡಿದ್ದಾರೆ.
ಮಕ್ಕಳು ಮಹಿಳೆಯರು ಅಂಗವಿಕಲರು  ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ.ಬೆಂಗಳೂರು ಪುಣೆ ಹೀಗೆ ದೂರದ ಪಟ್ಟಣಗಳಿಂದ ಸೇರ್ಪಡೆ  ಮಾಡಲು ಬಂದಿರುವ ಕಾರ್ಮಿಕರಿಗೆ ತೊಂದರೆಯಾಗಿದೆ. ಅಧಿಕಾರಿಗಳು  ಕಾಟಾಚಾರಕ್ಕೆ ತಿದ್ದುಪಡಿಗೆ ಮೂರು ದಿನಗಳೂ ಕಾಲಾವಕಾಶ ನೀಡಿದರೆ ಸಾಲದು.ಕನಿಷ್ಠ 10 ದಿನಗಳವರೆಗಾದರು ತಿದ್ದುಪಡಿಗೆ ಅವಕಾಶ ನೀಡಬೇಕು.ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ವಯಸ್ಸಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಡಳಿತದ ಕಚೇರಿ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

Leave a Reply

Your email address will not be published. Required fields are marked *