ವಡಗೇರಾ ಪಟ್ಟಣಕ್ಕೆ ಬಸ್ ಡಿಪೋ ನಿರ್ಮಿಸಲು ಮನವಿ

ವಡಗೇರಾ : ವಡಗೇರಾ ಪಟ್ಟಣವು ತಾಲೂಕ ಕೇಂದ್ರವಾಗಿ ಸುಮಾರು ವರ್ಷಗಳು ಕಳೆದರೂ ಪಟ್ಟಣದಲ್ಲಿ ಬಸ್ ಡಿಪೋ ನಿರ್ಮಾಣವಾಗಿಲ್ಲ. ಬಸ್ ಡಿಪೋ ಘಟಕವನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಲ್ಯಾಣ ಕರ್ನಾಟಕ ಸಂಚಾಲಕ ಶರಣು ಇಟಗಿ  ಶಾಸಕ ಚನ್ನಾರೆಡ್ಡಿ ತುನ್ನೂರು ರವರಿಗೆ ಮನವಿ ಸಲ್ಲಿಸಿದರು. ಪಟ್ಟಣದಲ್ಲಿ ತಹಶೀಲ್ದಾರ್ ಕಾರ್ಯಾಲಯ,ಇತರ ಸರಕಾರಿ ಕಚೇರಿಗಳು ಆರಂಭಿಸಬೇಕಿದೆ. ಸುತ್ತಲಿನ ಗ್ರಾಮದ ಸಾರ್ವಜನಿಕರು  ತಮ್ಮ ಕಾರ್ಯಗಳ ನಿಮಿತ್ಯ ಪಟ್ಟಣಕ್ಕೆ ಬರುತ್ತಾರೆ. ಸರಿಯಾದ ಸಮಯಕ್ಕೆ ತಮ್ಊಮ ಗ್ರಾಮಗಳಿಗೆ ತಲುಪಬೇಕಾದರೆ ಯಾದಗಿರಿ ಶಹಾಪುರ ಘಟಕದ  ಬಸ್ಸುಗಳಿಗಾಗಿ  ಕಾಯಬೇಕಾಗಿದೆ ಎಂದರು.ಸಕ್ಕರೆ ಕಾರ್ಖಾನೆ, ಮುರಾರ್ಜಿ ಹಾಗೂ ಇನ್ನಿತರ ವಸತಿ ಶಾಲೆಗಳು ಇರುವುದರಿಂದ ಸಾರ್ವಜನಿಕರು  ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಬಸ್ಸಿನ ಸೌಕರ್ಯವಾಗಬೇಕಿದೆ ಎಂದರು.

Leave a Reply

Your email address will not be published. Required fields are marked *