ಮಹಾಶೈವ ಧರ್ಮಪೀಠಕ್ಕೆ ಬೀರಪ್ಪ ಶಂಭೋಜಿಯವರ ಭೇಟಿ,ಸನ್ಮಾನ

ಗಬ್ಬೂರು( ಅ.12,2023 ) : ಸಾಹಿತಿ,ಸಂಘಟಕ,ಪ್ರಕಾಶಕ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬೀರಪ್ಪ ಶಂಭೋಜಿ ಅವರು ಇಂದು ಮಹಾಶೈವ ಧರ್ಮಪೀಠಕ್ಕೆ ಭೇಟಿ ನೀಡಿದರು.ಜಿಲ್ಲೆಯ ಹಿರಿಯ ಸಾಹಿತಿ,ನಿವೃತ್ತ ಪ್ರಾಂಶುಪಾಲರಾದ ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಬರೆದಿರುವ  ರಾಜಯೋಗಿ ಚಿದಾನಂದ ಅವಧೂತರ ಚರಿತೆ ಮತ್ತು ಕೃತಿಗಳು ಹಾಗೂ ಶ್ರೀ ಅಂಬಾದೇವಿ ಕ್ಷೇತ್ರದರ್ಶನ’ ಕೃತಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರಿಂದ ಮುನ್ನುಡಿ ಬರೆಯಿಸುವ ಉದ್ದೇಶದಿಂದ ಕೃತಿಯ ಪ್ರತಿಯನ್ನು ಕೊಡಲು ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದರು.ಕ್ಷೇತ್ರಕ್ಕೆ ಆಗಮಿಸಿದ ಬೀರಪ್ಪ ಶಂಭೋಜಿಯವರನ್ನು ಪೀಠಾಧ್ಯಕ್ಷರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಪೀಠಾಧ್ಯಕ್ಷರ ಕೃತಿಗಳನ್ನು ಸಾಂದರ್ಭಿಕ ನೆನಪಿಗಾಗಿ ನೀಡಲಾಯಿತು.ಬೀರಪ್ಪ ಶಂಭೋಜಿಯವರು ತಮ್ಮ ಒಡೆತನದ ಶ್ರೀನಿಧಿ ಪ್ರಕಾಶನದಿಂದ ಪ್ರಕಟಗೊಂಡ ‘ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮುಕ್ತಿ ಸೋಪಾನಗಳು’ ಮತ್ತು ‘ ವಚನದೀಪ್ತಿ’ ಕೃತಿಗಳನ್ನು ಶ್ರೀಪೀಠಕ್ಕೆ ಸಮರ್ಪಿಸಿದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಸುಲ್ತಾನಪುರ ಗಂಗಾಧರ ಶಾಂತಾಶ್ರಮದ ಅಧ್ಯಕ್ಷರಾದ ಶರಣಪ್ಪಗೌಡ ಶರಣರು,ಬಾಬುಗೌಡ ಯಾದವ,ರಂಗನಾಥ ಮಸೀದಪುರ,ಯಲ್ಲಪ್ಪ ಕರಿಗಾರ , ತಿಪ್ಪಯ್ಯ ಭೋವಿ,ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *