ನರೇಗಾ ಸಾಮಗ್ರಿ ವೆಚ್ಚದಲ್ಲಿ ಅವ್ಯವಹಾರ | ಅಧಿಕಾರಿಗಳ ಅಮಾನತ್ತಿಗೆ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹ

ಶಹಾಪುರ : ಶಹಪುರ ಮತ್ತು ವಡಗೇರ ತಾಲೂಕಿನ ಅರಣ್ಯ ಇಲಾಖೆಯ ವ್ಯಾಪ್ತಿಯ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ 94ಲಕ್ಷಕ್ಕೂ ಹೆಚ್ಚು ಸಾಮಗ್ರಿ ವೆಚ್ಚದಲ್ಲಿ ಅವ್ಯವಹಾರ ನಡೆದಿದ್ದು, ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಶಿವಪುತ್ರ ಜವಳಿ ಆಗ್ರಹಿಸಿದರು. ತಾಲೂಕು ಪಂಚಾಯಿತಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿಯು ಧರಣಿ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಅರಣ್ಯ ಖಾತೆ ಸಚಿವರಾದ ಈಶ್ವರ ಖಂಡ್ರೆಯವರಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

2021-22,2022- 23ನೇ ಸಾಲಿನ ಎರಡು ವರ್ಷಗಳಲ್ಲಿ ಹಳಿಸಗರ ನರ್ಸರಿ ಎಂಬ ಹೆಸರಿನಡಿ ನರ್ಸರಿ ಫಾರ್ಮ್ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ಶಹಾಪುರ ಮತ್ತು ವಡಗೇರಾ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಬದಿ ಸಸಿ ನೇಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣದ ಅವ್ಯವಹಾರ  ನಡೆದಿದೆ ಎಂದರು.ರಸ್ತಾಪುರ,ಬೀರನಕಲ್ ತಾಂಡ, ಇಬ್ರಾಂಪುರದ ಸರಕಾರಿ ಸ್ಥಳ,ಅಣಬಿ ಗ್ರಾಮದಿಂದ ಮುಡುಭೋಳ ಗ್ರಾಮದ ರಸ್ತೆಯ ಮಾರ್ಗ,ಹುರಸಗುಂಡಗಿ, ಬಿದರಾಣಿ ಸೇರಿದಂತೆ ಅನೇಕ ಗ್ರಾಮಗಳ ರಸ್ತೆ ಬದಿ ಗಿಡಗಳನ್ನು ನೆಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಗುತ್ತಿಗೆದಾರರ ಹೆಸರಿಗೆ ಸಾಮಗ್ರಿ ಹಣವನ್ನು ವರ್ಗಾವಣೆ ಮಾಡಲಾಗಿದೆ. ಕೂಡಲೇ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ,ವಲಯ ಅರಣ್ಯ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು  ಆಗ್ರಹಿಸಿದರು.

ಚಂದಪ್ಪ ಮುನಿಯಪ್ಪ, ಶಿವಲಿಂಗ ಹಸನಾಪೂರ,ಮಲ್ಲಿಕಾರ್ಜುನ ಹುರಸಗುಂಡಗಿ, ಮರೆಪ್ಪ ಕ್ರಾಂತಿ,ಎಮ್ ಪಟೇಲ್ ಖಾಜಾ ಅಜ್ಮೀರ್ ತಿಪ್ಪಣ್ಣ ಶೆಳ್ಳಗಿ  ರಂಗಸ್ವಾಮಿ ಶೇಖರ್ ಮಂಗಳೂರ್ ವಾಸು ಕೋಗಿಲ್  ಸಂತೋಷ ಗುಂಡಳ್ಳಿ ಶರಬಣ್ಣ ರಸ್ತಾಪೂರ್ ಶ್ರೀಮಂತ ಸಿಂಗನಳ್ಳಿ ನಾಗರಾಜ ಹುರಸಗುಂಡಗಿ ಭೀಮಶಂಕರ್ ಗುಂಡಳ್ಳಿ ವೀರಭದ್ರಪ್ಪ ತಳವಾರಗೇರಾ ಸಂದೀಪ ಹೊಸ್ಮನಿ ಮಲ್ಲಪ್ಪ ತಡಬಿಡಿ ನಿಂಗಪ್ಪ ತಡಿಬಿಡ ಬಸಲಿಂಗಪ್ಪ ನಾಗರಾಜ ದೋರನಳ್ಳಿ ಬಲಭೀಮ ಬೇವಿನಳ್ಳಿ  ಹೊನ್ನಯ್ಯ ಪೂಜಾರಿ ಶರಣಪ್ಪ ಕೊಂಬಿನ್ ಕುರಕುಂದ ಪುರುಷೋತ್ತಮ ಬಬಲಾದ ಲಕ್ಷ್ಮಣ ಮೇತ್ರಿ ಪಾಲ್ಗೊಂಡಿದ್ದರು.

About The Author