ಶ್ರಮಕ್ಕೆ ಸಿಕ್ಕ ಗೌರವ | ಕಾಯಕ ಜೀವಿಗೆ ದೊರೆತ ಸ್ಥಾನ | ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾಗಿ ಎಂ ಈರಣ್ಣ ಮಾನ್ವಿ ಆಯ್ಕೆ

ಬಸವರಾಜ ಕರೇಗಾರ
basavarajkaregar@gmail.com

ರಾಯಚೂರು : ರಾಜ್ಯದಲ್ಲಿ ಅತಿ ದೊಡ್ಡ ಸಮುದಾಯ ಕುರುಬ ಸಮುದಾಯ, ದೇಶದಲ್ಲಿಯೇ 12 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಕುರುಬ ಸಮುದಾಯ, ಹಲವಾರು ರಾಜ್ಯದಲ್ಲಿ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದೆ. ಕರ್ನಾಟಕದಲ್ಲಿ ಕುರುಬ ಸಮುದಾಯ ರಾಜಕೀಯ ನೆಲೆಯನ್ನು ಕಂಡುಕೊಂಡಿದ್ದು, ಅಂತಹ ದೊಡ್ಡ ಸಮುದಾಯದ ಕರ್ನಾಟಕ ರಾಜ್ಯಧ ರಾಜ್ಯಾಧ್ಯಕ್ಷರಾಗಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಉದ್ಯಮಿ,ಪ್ರಥಮ ದರ್ಜೆ ಗುತ್ತಿಗೆದಾರರು,ಮೈಕೋ ಕನ್ಸ್ಟ್ರಕ್ಷನ್ ಕಂಪನಿಯ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಎಂ ಈರಣ್ಣ( ಮಾನ್ವಿ) ಅವರನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದೆ.

ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಕುರುಬ ಸಮುದಾಯಕ್ಕೆ ಇದೊಂದು ಸಂತಸದ ವಿಷಯ. ಉಳಿದ ಅವಧಿಯಲ್ಲಿ ರಾಜ್ಯದ ಕುರುಬ ಸಮುದಾಯದವರು ಒಗ್ಗೂಡಿಸಿಕೊಂಡು, ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿ, ಸಮಾಜದ ಪ್ರೀತಿ ವಾತ್ಸಲ್ಯಕ್ಕೆ ಎಂ ಈರಣ್ಣನವರು ಪಾತ್ರರಾಗಬೇಕಾಗಿದೆ ಎಂದು ಯಾದಗಿರಿಗೆ ಜಿಲ್ಲೆಯ ಸಮಾಜದ ಮುಖಂಡರಾಸ ಬಸವರಾಜ ಅತ್ನೂರು ಹೇಳಿದ್ದಾರೆ.

ಕುರುಬ ಸಮುದಾಯದ ಬಡ ಕುಟುಂಬದಲ್ಲಿ ಜನಿಸಿದ ಎಂ ಈರಣ್ಣನವರು, ತನ್ನ ಕಾಯಕ ಜೀವಿಯಾಗಿ ಸಮಾಜದ ಬೆನ್ನೆಲುಬಾಗಿ ರಾಜಕೀಯ ಮುತ್ಸದ್ದಿಯಾಗಿ ಇಂದು ಬೆಳೆದು ನಿಂತಿದ್ದಾರೆ. ಸಮಾಜದ ಹಲವಾರು ಜನರಿಗೆ ಇಂದಿನವರೆಗೂ ಸಹಾಯಗೈದಿದ್ದು, ಸಮಾಜದ ಜೊತೆಗೆ ಹಿಂದುಳಿದ ಇತರ ಶೋಷಿತ ಸಮಾಜದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದ್ದಾರೆ.ಗುತ್ತಿಗೆದಾರರಾಗಿ ತನ್ನದೇ ಆದ ಮೈಕ್ರೋ ಕನ್ಸ್ಟ್ರಕ್ಷನ್ ಕಂಪನಿಯನ್ನು ಸ್ಥಾಪಿಸಿಕೊಂಡು ಬೆಳೆದ ಈರಣ್ಣನವರು, ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಬೆಳೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಲ್ಲಿ ಗುರುತಿಸಿಕೊಂಡ ಎಂ ಈರಣ್ಣನವರು ಸಮಾಜದ ಒಳಿತಿಗಾಗಿ ಮಾನ್ವಿ ನಗರದ ವಸತಿ ನಿಲಯವನ್ನು ಸ್ಥಾಪಿಸಿ, ಸಮಾಜದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಸೌಲಭ್ಯವನ್ನು ಒದಗಿಸಿ ಕೊಟ್ಟಿದ್ದಾರೆ. ಜನಪರ ಕೆಲಸಗಳಲ್ಲಿ ನಿರತರಾದ ಎಂ ಈರಣ್ಣನವರು ಜಿಲ್ಲೆಯಲ್ಲಿ ಹಲವು ಜನಪರ ಕೆಲಸವನ್ನು ಮಾಡಿದ್ದಾರೆ. ಸಾಮೂಹಿಕ ವಿವಾಹ, ಧನಸಹಾಯ ಮದುವೆ ಸಂದರ್ಭದಲ್ಲಿ ಧನಸಹಾಯ ಮಾಡಿದ ಹಲವಾರು ಉದಾಹರಣೆಗಳಿಗೆ.ಸದಾ ಸಮಾಜದ ಜೊತೆಗೆ ಇತರ ಶೋಷಿತ ಸಮುದಾಯಗಳಲ್ಲಿಯೂ ಎಮ್ ಈರಣ್ಣನವರ ಹೆಸರು ಇದೆ. ರಾಜ್ಯಾಧ್ಯಕ್ಷ ಸ್ಥಾನ ಇಂದು ದೊರಕಿರುವುದು ಸಂತಸದ ವಿಷಯ.

 

ನನಗೆ ಸಿಕ್ಕ ಅವಧಿಯಲ್ಲಿ ಸಮಾಜದ ಒಳಿತಿಗಾಗಿ ಜನಪರ ಕಾರ್ಯಗಳನ್ನು ಮಾಡುತ್ತೇನೆ. ರಾಜ್ಯಾಧ್ಯಕ್ಷ ಸ್ಥಾನ ದೊರಕಿರುವುದರಿಂದ ಜವಾಬ್ದಾರಿ ಹೆಚ್ಚಿದೆ.ರಾಜ್ಯದ ಎಲ್ಲಾ ಕುರುಬ ಸಮಾಜದವರ ಸಹಕಾರ ನನಗಿರಲಿ. ಸಮಾಜದ ಒಳಿತಿಗಾಗಿ ಸಾಧ್ಯವಾದಷ್ಟು ಕೆಲಸವನ್ನು ನಿರ್ವಹಿಸುವೆ. ತಮ್ಮ ಸಮಸ್ಯೆಗಳಿಗೆ ನಾನು ಸ್ಪಂದಿಸುವೆ. ಸಮಾಜಕ್ಕೆ ಯಾವತ್ತಿಗೂ ರಾಜ್ಯದ ಕುರುಬ ಸಮಾಜದವರ ಚಿರಋಣಿಯಾಗಿರುವೆ.

ಎಂ ಈರಣ್ಣ ಮಾನ್ವಿ
ನೂತನ ರಾಜ್ಯಾಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು.

About The Author