ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರರಾಗಿ ಚಂದ್ರಶೇಖರ ಕಟ್ಟಿಮನಿ

ಶಹಾಪುರ : ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉಧ್ಯಮಗಳ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಶರಣಬಸ್ಸಪ್ಪಗೌಡ ದರ್ಶನಾಪುರವರು ಕೆಪಿಸಿಸಿ ಪಜಾ ಘಟಕದ ಯಾದಗಿರಿ ಜಿಲ್ಲಾ ಮಾಧ್ಯಮ ವಕ್ತಾರರಾಗಿ ನೇಮಕಗೊಂಡ ಚಂದ್ರಶೇಖರ ಎಮ್ ಕಟ್ಟಿಮನಿ ಹಳಿಸಗರ ರವರಿಗೆ ನೇಮಕಾತಿ ಆದೇಶ ನೀಡಿದರು. ರಾಜ್ಯಾಧ್ಯಕ್ಷರಾದ ಧರ್ಮಶೇನಾರವರು ಕಟ್ಟಿಮನಿಯರನ್ನು ಯಾದಗಿರಿ ಜಿಲ್ಲಾ ಎಸ್‍ಸಿ ಮಾಧ್ಯಮ ಘಟಕದ ಯಾದಗಿರಿ ಜಿಲ್ಲಾ ವಕ್ತಾರರನ್ನಾಗಿ ನೇಮಕ ಮಾಡಿದ್ದರು. ಈ ಸಮಯದಲ್ಲಿ ಆಶ್ರಯ ಸಮಿತಿ ಮಾಜಿ ಅಧ್ಯಕ್ಷರಾದ ವಸಂತ ಸುರುಪುರಕರ್ ಕೆಪಿಸಿಸಿ ಪಜಾ ರಾಜ್ಯ ಸಮಿತಿ ಕಾರ್ಯಕಾರ್ಯಮಂಡಳಿ ಸದಸ್ಯರಾದ ಬಸವರಾಜ ನಾಯ್ಕಲ ಇದ್ದರು.

Leave a Reply

Your email address will not be published. Required fields are marked *