ರಾಜ್ಯದ ಐದು ಕಡೆಗಳಲ್ಲಿ ಸಣ್ಣ ಕೈಗಾರಿಗಳ ವಸಹಾತುಗಳ ಸ್ಥಾಪನೆ – ಶರಣಬಸ್ದಸಪ್ಪಗೌಡ ದರ್ಶನಾಪುರ

ಶಹಾಪುರ : ಪ್ರಸಕ್ತ ಹಣಕಾಸಿನ ವರ್ಷದಲ್ಲಿ ಸಣ್ಣ ಕೈಗಾರಿಕೆ ಇಲಾಖೆಯ ಅಡಿಯಲ್ಲಿ ರಾಜ್ಯದ ಐದು ಕಡೆಗಳಲ್ಲಿ ಸಣ್ಣ ಕೈಗಾರಿಗಳ ವಸಹಾತುಗಳ ಸ್ಥಾಪನೆ ಮಾಡಲಾಗುತ್ತಿದ್ದು, ಒಟ್ಟು 166 ಕೋಟಿ ರೂಗಳನ್ನು ಸಚಿವ ಸಂಪುಟದಲ್ಲಿ ಮಂಜೂರಾತಿ ಪಡೆಯಲಾಗಿದೆ.ಈಗಾಗಲೆ ಡಿಪಿಆರ್ ಏಜನ್ಸಿಗೆ ವಹಿಸಿಲಾಗಿದ್ದು ಟೆಂಡರ್ ಮುಂದುವರದಿದೆ,ಹುಬ್ಬಳ್ಳಿ ಶಹಾಪುರ ಕಲಬುರ್ಗಿ ಬೆಂಗಳೂರು ಯಾದಗಿರಿ ನಗರಗಳಲ್ಲಿ ಜಾಗದ ಕೊರತೆಗಳಿಂದ ಜಮೀನು ಹುಡುಕಾಟ ಮುಂದುವರೆದಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉಧ್ಯಮಿಗಳ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ತಿಳಿಸಿದರು.

ನಗರದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಶಹಾಪುರ ನಗರದ ಸರ್ವೆ ನಂ.248 ನಲ್ಲಿ ಒಟ್ಟು 140 ಎಕರೆ ಲಭ್ಯವಾಗಿದ್ದು ಕೈಗಾರಿಕಾ ಉಧ್ಯಮಿದಾರರಿಂದ ಅರ್ಜಿ ಕರೆಯಲಾಗಿದೆ.ಶಹಾಪುರ ನಗರದಲ್ಲಿ ಒಪನ್ ವಿಶ್ವವಿಧ್ಯಾಲಯ ಸ್ಥಾಪನೆಗೆ ಎರಡು ಎಕರೆ ಜಾಗ ನೀಡಲಾಗುತ್ತಿದ್ದು, ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.15 ಕೋಟಿ ರೂಗಳ ವೆಚ್ಚದಲ್ಲಿ ವಿವಿ ನಿರ್ಮಾಣಗೊಳ್ಳುತ್ತದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಅಭಿವೃದ್ದಿ ಯೋಜನೆಯಡಿಯಲ್ಲಿ 60 ಕೋಟಿ ರೂಗಳ ಕ್ರೀಯಾ ಯೋಜನೆ ಅನುಮೋದನೆಗೊಂಡಿದ್ದು ಶೇ.98 ಸಾಮಾಜಿಕ ವಲಯಗಳಿಗೆ ಶೇ.40 ಶೈಕ್ಷಣಿಕ ಅಭಿವೃದ್ದಿಗೆ ಮೀಸಲಾಗಿದೆ.ಶಾಲಾಕೊಣೆಗಳ ನಿರ್ಮಾಣ ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.ತಾಂತ್ರಿಕ ಕಾಲೇಜು ಸ್ಥಾಪನೆಗೆ ಸ್ಥಳ ನೀಡಿಲಾಗಿದೆ.ಅಲ್ಲದೆ ಐದು ಎಕರೆ ಪ್ರದೇಶಗಳಲ್ಲಿ ಐಟಿಐ ಕಾಲೇಜು ಮಂಜೂರಿಯಾಗಿದೆ.11 ಎಕರೆಗಳಲ್ಲಿ ಮರಗಳ ರಕ್ಷಣೆಯೊಂದಿಗೆ ಸುಂದರ ಗಾರ್ಡನ ನಿರ್ಮಿಸಲಾಗುತ್ತದೆ ಎಂದು ಪ್ರಗತಿ ಕಾರ್ಯವಿಧಾನ ವಿವರಗಳನ್ನು ನೀಡಿದರು.

ಭೀಗುಡಿ, ಹುಲಕಲ್, ಕಂಚನಕವಿ, ಶಖಾಪುರಗಳಲ್ಲಿ 25 ಕೊಟಿ ವೆಚ್ಚದಲ್ಲಿ ಕುಡಿಯುವ ನೀರಿನ ಸೌಲಭ್ಯಗಳಿಗೆ ಅನುದಾನ ಮಂಜೂರಿ ಮಾಡಲಾಗಿದೆ.ರಾಜ್ಯಕ್ಕೆ ಕೇಂದ್ರದಿಂದ ಬರ ಅಧ್ಯಾಯನ ಆಗಮಿಸಿದ್ದು 13 ಜಿಲ್ಲೆಗಳ ವಿವಿಧ ತಾಲೂಕು ಕೇಂದ್ರಗಳಿಗೆ ಬೇಟಿ ನೀಡಿದ ಕೃಷಿ ತಂಡ ಬೆಳೆ ನಷ್ಟ ಕುರಿತು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.ಮಳೆ ಮತ್ತು ಕಾಲುವೆ ನೀರು ಆಶ್ರಿತರಾಗಿರುವ ರೈತರು ಕಷ್ಣದಲ್ಲಿದ್ದು, ಕಣಿವೆಯ ರೈತರು, ವಾರಬಂಧಿ ಐಸಿಸಿ ಸಭೆ ನಿರ್ಧಾರದಂತೆ ಕಾಲುವೆಗೆ ನೀರು ಹರಿದು ಬರುತ್ತಿದೆ. ಸಕಾಲಕ್ಕೆ ರೈತರು ನೀರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂಭಂಧಿಸಿದ ದೂರಿನ ಅರ್ಜಿಗಳನ್ನು ಸ್ವೀಕಾರ ಮಾಡಲಾಗುತ್ತದೆ. ಎಲ್ಲಾ ಇಲಾಖೆ ಅಧಿಕಾರಿಗಳು ಅ.25ರಂದು ಹಾಜರಿರುತ್ತಾರೆ.ಈಗಾಗಲೆ ಈ ಹಿಂದೆ ಜನತಾ ದರ್ಶನದಲ್ಲಿ ಸ್ವೀಕರಿಸಲಾದ ದೂರಿನ ಅರ್ಜಿಗಳ ವಿಲೆವಾರಿ ಮಾಡಿಕೊಂಡು ಸಂಭಂಧಪಟ್ಟವರಿಗೆ ಮಾಹತಿಗಾಗಿ ವಿವರ ನೀಡಲಾಗುತ್ತದೆ ಎಂದು ತಿಳಿಸಿದರು.

ಹೊಸ ನಗರಸಭೆ ಕಟ್ಟಡ ನಿರ್ಮಾಣಕ್ಕೆ ನಿರ್ಧಾರ!!

ನಗರದಲ್ಲಿರುವ ಹಳೆ ಕಟ್ಟಡದಲ್ಲೆ ನಗರಸಭೆ ಆಡಳಿತ ಕಚೇರಿ ಮುದುವರೆಯುತ್ತಿದ್ದು, ಐಡಿಸಿಎಮ್‍ಟಿ ಹಣದಲ್ಲಿ ಹೊಸ ನಗರಸಭೆ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಇದರಿಂದ ಆಡಳಿತಾತ್ಮಕವಾಗಿ ಅನೂಕೂಲತೆಗಳು ಒದಗಿಸಿದಂತಾಗುತ್ತದೆ. ಅಲ್ಲದೆ ಹಳೆಯ ತಹಸಿಲ್ದಾರ ಕಚೇರಿ ನಿರ್ಮಾಣಕ್ಕೆ ಈಗಾಗಲೆ 3 ಕೊಟಿ ರೂ ಮಂಜೂರಿಯಾಗಿದ್ದು. ಇನ್ನೂ ಹೆಚ್ಚಿನ ಅನುದಾನ ಒದಗಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಿಸಿಕೊಂಡು, ವಿವಿಧ ಇಲಾಖೆಗಳಿಗೆ ಅವಕಾಶ ನೀಡಿದಂತಾಗುತ್ತದೆ. ಈ ಕುರಿತು ಮುಂದಿನ ದಿನಮಾನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ತಿಳಿಸಿದರು. ಸರ್ವೆನಂ 299 ರಲ್ಲಿ ಕುಂಬಾರ ಸಮಾಜಕ್ಕೆ ಗುಡಿ ಕೈಗಾರಿಕೆ ತಯ್ಯಾರಿಕೆ ಮಾಡುವದರೊಂದಿಗೆ ಅವರಿಗೆ ಸೂಕ್ತಕಾರಣವಾಗಿ ಕೈಗಾರಿಕಾ ನಿರ್ಮಾಣಕ್ಕೆ ಅನೂಕೂಲ ಮಾಡಿಕೊಡಲಾಗುತ್ತದೆ. 14 ಎಕರೆ ಆಶ್ರಯಕ್ಕಾಗಿ ಲೇಔಟ್ ನಿರ್ಮಾಣಕ್ಕೆ, ಜಿಲ್ಲಾಧಿಕಾರಿಗಳಿಗೆ ಮತ್ತು ನಗರ ಯೋಜನಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಬಾಲಾಜಿ ಬೀಳು ಎನ್ನುವ ಸ್ಥಳದಲ್ಲಿ ಆಶ್ರಯ ಲೇಔಟ್ ನಿರ್ಮಾಣ ಮಾಡಲಾಗುತ್ತದೆ. ಐಡಿಸಿಎಮ್‍ಟಿ ಅಕ್ರಮಿತ ಜಮೀನು ಪತ್ಯೆಯಾಗಿದ್ದು, ಮುಂದಿನ ದಿನಗಳಲ್ಲಿ ಲೇಔಟ್ ನಿರ್ಮಿಸಿಕೊಂಡು, ನಗರಸಭೆಗೆ ಆರ್ಥಿಕವಾಗಿ ಪ್ರಬಲತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.5 ಕೊಟಿ ರೂ,ಗಳ ವೆಚ್ಚದಲ್ಲಿ ಯಲ್ಲಮ್ಮನ ಗುಡಿಯಿಂದ ನೇರವಾಗಿ ಸುರುಪುರ ರಸ್ತೆ ಅಭಿವೃದ್ದಿ ಪಡಿಸಿ ಸುಗಮ ಸಂಚಾರಕ್ಕೆ ರಸ್ತೆ ಅಭಿವೃದ್ದಿ ಕಾರ್ಯ ನಡೆಯುತ್ತದೆ.

About The Author