ಅಕ್ಟೋಬರ್ ಹತ್ತರಂದು ಬಸವರಾಜ ಪಡಕೋಟೆಯವರ ಜನ್ಮ ದಿನಾಚರಣೆ : ನಾಡಿನ ನೆಲ ಜಲಕ್ಕಾಗಿ ಹೋರಾಟ ಮಾಡಿದ ಕನ್ನಡದ ಕುವರ ಬಸವರಾಜ ಪಡುಕೋಟೆ

ಬೆಂಗಳೂರು : ಚಿಕ್ಕ ವಯಸ್ಸಿನಲ್ಲಿಯೇ ಮನೆಯನ್ನು ತೊರೆದು, ಬೆಂಗಳೂರು ಮಹಾನಗರಕ್ಕೆ ಕಾಲಿಟ್ಟ ಒಬ್ಬ ಚಿಕ್ಕ ಬಾಲಕ.ದುಡಿಮೆಗಾಗಿ ವರಟ. ಬೆಂಗಳೂರಿನಲ್ಲಿ ದುಡಿದ. ಕಾಯಕವೆಂದುಕೊಂಡು ದುಡಿಯಲು ಆರಂಭಿಸಿದ.ಆದರೆ ಅಲ್ಲಿದ್ದ ಬಡಜನರ ನೋವನ್ನು ಕಣ್ಣಾರೆ ಕಂಡು ಮರುಗುತ್ತಿತ್ತು ಆ ಬಾಲಕನ ಜೀವ. ಬಡವರ ನೋವನ್ನು ಅರಗಿಸಿಕೊಳ್ಳದ ಬಾಲಕ, ದುಡಿತದಲ್ಲಿಯೇ ಬಡವರ ಕಣ್ಣೀರು ಒರೆಸಲು ನಿರ್ಧರಿಸಿದ.
ಅಂದಿನಿಂದಲೇ ಬಡವರೊಳ್ ತಾನಾಗಿ ನಿಂತು ಬೆಂಗಳೂರು ನಗರದಲ್ಲಿರುವ ಕಷ್ಟದಲ್ಲಿ ಕೈ ತೊಳೆಯುತ್ತಿರುವ ಬಡವರಿಗೆ ತೊಂದರೆ ಕೊಡುತ್ತಿರುವ ಅನೇಕ ಜನರನ್ನು ಕಣ್ಣಾರೆ ಕಂಡು ಬಡವರಲ್ಲಿ ತಾನು ಒಬ್ಬ ಎಂದು ಎಲ್ಲರ ಕಣ್ಣೊರೆಸಲು ದಿಟ್ಟ ಹೋರಾಟಕ್ಕಾಗಿ ಚಿಕ್ಕವಯಸ್ಸಿನಲ್ಲಿಯೇ ನಿರ್ಧಾರ ಕೈಗೊಂಡ. ಅಂದಿನಿಂದಲೇ ಬಡವರ ಕಣ್ಣೀರು ಒರೆಸಲು   ಹಲವಾರು ಜನರ ಬಡವರ ಪರ ನಿಂತು ನ್ಯಾಯ ಒದಗಿಸಲು ಮುಂದಾಗಿ ಎಲ್ಲರಂತೆ ನಾವೆಂದುಕೊಂಡು ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡಿ ರಾಜ್ಯದ ನೆಲ ಜಲ ಎಂದುಕೊಂಡು ಹೋರಾಟದಲ್ಲಿ ನಿರತನಾಗಿ ಬಡವರ ಕಣ್ಣೀರು ಒರೆಸಿದ ಆ ಬಾಲಕ.ಅಕ್ಟೋಬರ್ 10ರಂದು  54 ನೇರ್ಷದ ಹುಟ್ಟು ಹಬ್ಬ. ಆತನೇ ರಾಜ್ಯ ಕಂಡ ಕನ್ನಡದ ಕುವರ ಬಸವರಾಜ ಪಡುಕೋಟೆ.
ಅಕ್ಟೋಬರ್ ಹತ್ತರಂದು ಬಸವರಾಜ ಪಡಕೋಟೆಯವರ 54 ವರ್ಷಗಳು ತುಂಬುವುದು.ಇಂದು ನಮ್ಮ ಕರ್ನಾಟಕ ಸೇನೆಯನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಪಸರಿಸಿ ನಾಡು ನುಡಿ ನೆಲ ಜಲಕ್ಕಾಗಿ ಹೋರಾಟ ಮಾಡುತ್ತಾ, ರಾಜ್ಯವೇ ಕನ್ನಡಿಗರದು,ಇಲ್ಲಿ ಕನ್ನಡವೇ ಕೈಲಾಸ,ಕನ್ನಡವೇ ಕಾಯಕವೆಂದು ಜನರ ಮನಸ್ಸನ್ನು ಗೆದ್ದಿದ್ದಾನೆ.
************
ಹೋರಾಟದ ಹಾದಿ : ಬೆಂಗಳೂರಿನ ನಾರಾಯಣಗೌಡರು ಕಟ್ಟಿದ ಕನ್ನಡ ರಾಜ್ಯದ ಒಳಿತಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಬಸವರಾಜ ಪಡಕೋಟೆಯವರು ರಾಜ್ಯ ಸಂಚಾಲಕರಾಗಿ ನಾಡು ನುಡಿಗಾಗಿ ಹೋರಾಡಿದ್ದಾರೆ. ನಾರಾಯಣಗೌಡರು ಪ್ರವೀಣ್ ಶೆಟ್ಟಿಯವರು ಬಸವರಾಜ ಪಡಕೋಟೆ ಈ ಮೂರು ಜನರು ರಾಜ್ಯದ ಒಳಿತಿಗಾಗಿ ಹೋರಾಟ ಮಾಡಿದ ಹಲವಾರು ಉದಾಹರಣೆಗಳಿವೆ. ಕಾವೇರಿ ಹೋರಾಟದಲ್ಲಿ ಬಸವರಾಜ ಪಡಕೋಟೆಯವರ ಹೋರಾಟ  ಭಯಂಕರವಾಗಿರುತ್ತಿತ್ತು. ರೈಲ್ವೆ ತಡೆ, ವಿಮಾನ ಹಾರಾಟ ರದ್ದು ಮಾಡಿರುವುದು ಸೇರಿದಂತೆ ಕೇಂದ್ರ ಸರಕಾರದ ವಿರುದ್ಧ ರಾಜ್ಯದ ಪರ ಹಲವು ಹೋರಾಟಗಳನ್ನು ಮಾಡಿದ್ದಾರೆ.
” ಕೇಂದ್ರ ಕಚೇರಿ ಶಿವಾಜಿನಗರದಲ್ಲಿ ನಮ್ಮ ಕರ್ನಾಟಕ ಸೇನೆ ರಾಜ್ಯಧ್ಯಕ್ಷರಾದ ಬಸವರಾಜ ಪಡುಕೋಟೆ ನವರ ನೇತೃತ್ವದಲ್ಲಿ ತುಮಕೂರು ಜಿಲ್ಲೆ ಅಧ್ಯಕ್ಷರಾಗಿ  ರಂಗಸ್ವಾಮಿಯವರನ್ನು  ನೇಮಕ ಮಾಡಲಾಯಿತು”
***********
ವೈಯಕ್ತಿಕ ಪ್ರತಿಷ್ಠೆಗಾಗಿ ಹೊರಬಂದ ಬಸವರಾಜ ಪಡಕೋಟೆಯವರು 2019ರಲ್ಲಿ ನಮ್ಮ ಕರ್ನಾಟಕ ಸೇನೆಯನ್ನು ಹುಟ್ಟು ಹಾಕಿದರು. ತನ್ನದೇ ನೇತೃತ್ವದಲ್ಲಿ ಸ್ಥಾಪಿಸಿಕೊಂಡು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಸವರಾಜ ಪಡುಕೋಟೆ, ರಾಜ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕಾವೇರಿ ಹೋರಾಟದಲ್ಲಿ ರೈಲ್ವೆ ತಡೆ ವಿಮಾನ ಹಾರಾಟ ರದ್ದು ಮಾಡುವುದು ಸೇರಿದಂತೆ ಹಲವು ಹೋರಾಟದಲ್ಲಿ ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದು ಎಂದು ತೀವ್ರ ಹೋರಾಟ ಮಾಡಿದರು. ರಾಜ್ಯದ ನೆಲ ಜಲ ನಾಡು ನುಡಿಗಾಗಿ ಸದಾ ಹೋರಾಟಕ್ಕೆ ಸಿದ್ಧ ಎನ್ನುತ್ತಾರೆ.
” ಸಿಂಧನೂರಿನ ನಮ್ಮ ಕರ್ನಾಟಕ ಸೇನೆಯಿಂದ ಪದಾಧಿಕಾರಿಗಳ ನೇಮಕ, ನೂತನ ಪದಾಧಿಕಾರಿಗಳ ಪದಗ್ರಹಣ “
*************
ನಮ್ಮ ಕರ್ನಾಟಕ ಸೇನೆ ರಾಜ್ಯಾದ್ಯಂತ ಸಂಘಟನೆಗಳನ್ನು ಕೈಗೊಂಡಿದೆ.ಜಿಲ್ಲಾಧ್ಯಕ್ಷರು ರಾಜ್ಯ ಸಂಚಾಲಕರನ್ನು ಒಳಗೊಂಡಂತೆ ರಾಜ್ಯಾದ್ಯಂತ ಪಸರಿಸುತ್ತಿದ್ದಾರೆ ಎನ್ನುತ್ತಾರೆ. ಬೆಂಗಳೂರು,ದಕ್ಷಿಣ, ಉತ್ತರ ಭಾಗದಲ್ಲಿ ಸಂಘಟನೆಯನ್ನು ಚುರುಕುಗೊಳಿಸಲಾಗುತ್ತಿದೆ. ನಮ್ಮ ಕರ್ನಾಟಕ ಸೇನೆಯ ರಾಜ್ಯ ಪದಾಧಿಕಾರಿಗಳೆಲ್ಲರೂ ಸೇರಿ ಅಕ್ಟೋಬರ ಹತ್ತರಂದು ಬಸವರಾಜ ಪಡುಕೋಟಿಯವರ ಜನ್ಮ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಿದ್ದು,  ಅತ್ಯಂತ ಸಡಗರ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ ಎನ್ನುತ್ತಾರೆ.
ಮೂಲತಹ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನವರಾದ ಬಸವರಾಜ ಪಡುಕೋಟೆಯವರು ರಾಜ್ಯದ ರಾಜಧಾನಿಯಲ್ಲಿ ಹೋರಾಟದ ಹಾದಿ ಮೂಲಕ ಹೆಸರು ಮಾಡಿದ್ದಾರೆ. ರಾಜ್ಯದ ಒಳಿತಿಗಾಗಿ ಹಾಗೂ ಬಡವರ ಕಣ್ಣೀರನ್ನು ಒರೆಸಿದ್ದಾರೆ.ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ರಾಜ್ಯದ ಜನರ ಮನಸ್ಸಿನಲ್ಲಿರುವ  ಕನ್ನಡ ಕುವರ ಬಸವರಾಜ ಪಡಕೋಟೆ.
***************

ಆತ್ಮೀಯ ಸ್ನೇಹಿತರೆ,

ದಿನಾಂಕ:10/10/2023 ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ನಮ್ಮ ಕರ್ನಾಟಕ ಸೇನೆ ರಾಜ್ಯಮಟ್ಟದ ಬಹಳ ಪ್ರಮುಖ ಚಿಂತನ ಸಭೆಯನ್ನು ಕರೆಯಲಾಗಿದೆ, ರಾಜ್ಯಾಧ್ಯಕ್ಷರಾದ ಶ್ರೀ ಎಮ್. ಬಸವರಾಜ ಪಡುಕೋಟೆ ರವರು ಅಧ್ಯಕ್ಷತೆ ವಹಿಸಲಿದ್ದಾರೆ ಆದುದರಿಂದ ರಾಜ್ಯ ಪದಾಧಿಕಾರಿಗಳು, ಮಹಿಳಾ ಘಟಕದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಘಟಕ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ, ಯುವ ಘಟಕ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ, ಇನ್ನು ಇತರ ಘಟಕಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ, ತಪ್ಪದೇ ಭಾಗವಹಿಸತಕ್ಕದ್ದು.

ವಿಶೇಷ ಸೂಚನೆ:-
ಸಭೆ ಮುಗಿದ ನಂತರ
ನಮ್ಮ ನೆಚ್ಚಿನ ನಾಯಕರು, ಕನ್ನಡದ ಕಟ್ಟಾಳು, ರಾಜ್ಯದ್ಯಕ್ಷರಾದ
ಶ್ರೀ ಎಂ. ಬಸವರಾಜ
ಪಡುಕೋಟೆರವರ, ಹುಟ್ಟುಹಬ್ಬ ಆಚರಣೆ ಇರುತ್ತದೆ.

ಸ್ಥಳ:-
ಹೋಟೆಲ್ ಸ್ಯಾಂಟಮ್,
ಗಾಂಧಿನಗರ,
ಬೆಂಗಳೂರು.

ಇಂತಿ:-
ಆರ್.ಕಮಲೇಶ್ ರಾವ್
ರಾಜ್ಯ ಪ್ರಧಾನ ಕಾರ್ಯದರ್ಶಿ

About The Author