ರೈತರು ಕೃಷಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ : ಚೆನ್ನಾರೆಡ್ಡಿ ತುನ್ನೂರು

yadagiri ವಡಗೇರಾ :ಸರಕಾರ ಜಾರಿಗೆ ತಂದಿರುವ ಕೃಷಿ ಯೋಜನೆಗಳ ಲಾಭಗಳನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ಹೇಳಿದರು. ಪಟ್ಟಣದ ಬನದ ರಾಚೋಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ ಮತ್ತು ಕೃಷಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ನೀತಿ ಆಯೋಗದ ಮಹತ್ವಾಕಾಂಕ್ಷಿ ಯೋಜನೆಯ ಸಂಕಲ್ಪ ಸಪ್ತಹದ ಕೃಷಿ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಕಲ್ಪ ಸಪ್ತಾಹ ಯೋಜನೆ ನೀತಿ ಆಯೋಗವು ಸಾಮಾಜಿಕ ಆರ್ಥಿಕವಾಗಿ ವಡಗೇರಾ ತಾಲೂಕು ಹಿಂದುಳಿದ ತಾಲೂಕು ಎಂದು ಗುರುತಿಸಿದೆ. ಆರೋಗ್ಯ ಶಿಕ್ಷಣ ಕೃಷಿ ಇನ್ನಿತರ ವಲಯಗಳಲ್ಲಿ ತಾಲೂಕನ್ನು ಅಭಿವೃದ್ಧಿಪಡಿಸಬೇಕಾಗಿದೆ. ನಾನು ಕೂಡ ತಾಲೂಕು ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.ಅದೇ ಸಂದರ್ಭದಲ್ಲಿ ಬೆಳೆ ಸಮೀಕ್ಷೆಯ ಮೊಬೈಲ್ ಹ್ಯಾಪ್ ಹಾಗೂ ಕೃಷಿ ಮಳಿಗೆಗಳನ್ನು ಅನಾವರಣಗೊಳಿಸಿದರು.

ಜಂಟಿ ಕೃಷಿ ನಿರ್ದೇಶಕ ಮುತ್ತುರಾಜ ಮಾತನಾಡಿ, ಕೃಷಿ ಯೋಜನೆಗಳ ಬಗ್ಗೆ ರೈತರಲ್ಲಿ ಇನ್ನು ಹೆಚ್ಚಿನ ರೀತಿಯ ಜಾಗೃತಿ ಮೂಡಿಸಲು ಸಿಬ್ಬಂದಿಗಳಿಗೆ ಸೂಚಿಸಿದರು. ಈಗಾಗಲೇ ಸರಕಾರ ಬರಗಾಲ ಘೋಷಣೆ ಮಾಡಿದ್ದು ಶಹಾಪುರ, ವಡಗೇರಾ ಅತಿ ಹೆಚ್ಚು ಬರಗಾಲ ಪೀಡಿತ ತಾಲೂಕುಗಳಾಗಿ ಒಳಪಟ್ಟಿವೆ. ಪ್ರತಿಯೊಬ್ಬರೂ ಬರ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯವಾಗಿ ಮಾಡಿಸಲು ಸಲಹೆ ನೀಡಿದರು.ನಮ್ಮ ಅಧಿಕಾರಿಗಳು ಬಂದಾಗ ರೈತರು ಎಲ್ಲ ರೀತಿಯ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಅವರಿಗೆ ಸಹಕಾರ ನೀಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅಶೋಕ ಸಾಹುಕಾರ ಕರಣಿಗಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ್ ಸಂಗ್ವಾರ,ಕೃಷಿ ನಿರ್ದೇಶಕ ಸುನಿಲ್ ಕುಮಾರ್, ಕೃಷಿ ಅಧಿಕಾರಿ ಗಣಪತಿ, ಪಶು ವೈದ್ಯಾಧಿಕಾರಿ ಪ್ರಿಯಾಂಕ ರೆಡ್ಡಿ, ನೀತಿ ಆಯೋಗದ ಸಮಾಲೋಚಕಿ ಕಾವೇರಿ,ಡಾ. ಜಯಪ್ರಕಾಶ್ ನಾರಾಯಣ್, ಡಾ.ಕುಮಾರಸ್ವಾಮಿ ಹಿರೇಮಠ, ಡಾ.ಪಾಲಯ್ಯ,ತೋಟಗಾರಿಕ ಇಲಾಖೆ ನಿರ್ದೇಶಕ ಭೀಮರಾವ, ಶಾಸಕರ ಆಪ್ತ ರೇವಣಸಿದ್ದಯ್ಯ ಹೊರಪೇಟ ಮಠ,ಶರಣು ಇಟಗಿ, ಸಂಗುಗೌಡ ಮಾಲಿ ಪಾಟೀಲ್,
ಮಲ್ಲಣ್ಣ ನೀಲಹಳ್ಳಿ, ನಿಂಗಣಗೌಡ ಬೋರಡ್ಡಿ, ಹಣಮಂತ್ರಾಯ ಜಡಿ, ಶಿವರಾಜ್ ಬಾಗುರ, ಅಬ್ದುಲ್ ಚಿಗಾನೂರ,ಡಾ.ಗಾಳೇಪ್ಪ ಪೂಜಾರಿ, ಬಸನಗೌಡ ಜಡಿ,ತಿಮ್ಮಣ್ಣ ಕಡೆಚೂರ,ಮಲ್ಲಪ್ಪ ಮಾಗನೂರ,ಇನ್ನಿತರರಿದ್ದರು.ಶಿಕ್ಷಕ ಬಸವರೆಡ್ಡಿ ಅಭಿಷಾಳ ನಿರೂಪಿಸಿ ವಂದಿಸಿದರು.

About The Author