ಹೈಯ್ಯಾಳ ಬಿ ಗ್ರಾಮದಲ್ಲಿ ಸ್ವಚ್ಛತೆಗಾಗಿ ಸಂಕಲ್ಪ ಅಭಿಯಾನಕ್ಕೆ ಚಾಲನೆ : ಗ್ರಾಮದ ಸ್ವಚ್ಛತೆಗಾಗಿ ಸಂಕಲ್ಪ ಮಾಡಿ : ಮಲ್ಲಿಕಾರ್ಜುನ ಸಂಗ್ವಾರ ಸಲಹೆ

ವಡಗೇರಾ :  ಗ್ರಾಮದಲ್ಲಿರುವ ಪ್ರತಿಯೊಬ್ಬರು ಸ್ವಚ್ಛತೆಯ ಅಭ್ಯಾಸಗಳನ್ನು ರೂಡಿಸಿಕೊಂಡು ಗ್ರಾಮದ ನೈರ್ಮಲ್ಯ ಕಾಪಾಡಲು ಸಂಕಲ್ಪ ಮಾಡೋಣ ಎಂದು ವಡಗೇರಾ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.ವಡಗೇರಾ ತಾಲೂಕನ್ನು ಮಹತ್ವಾಕಾಂಕ್ಷಿ ತಾಲೂಕು ಎಂದು ಗುರುತಿಸಿರುವುದರಿಂದ ದಿನಾಂಕ 03-10-2023  ರಿಂದ  09-10-2023 ವರೆಗೆ ಸಂಕಲ್ಪ ಸಪ್ತಾಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಇಂದು  ಹೈಯ್ಯಾಳ ಬಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿರುವ ಸ್ವಚ್ಛತೆಗಾಗಿ ಸಂಕಲ್ಪ ಅಭಿಯಾನಕ್ಕೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಸಂಗ್ವಾರ್ ಚಾಲನೆ ನೀಡಿದ ಅವರು,ಸ್ವಚ್ಛತೆಗಾಗಿ ಪ್ರತಿಯೊಬ್ಬರು ಸಹಕರಿಸಬೇಕು ಮಕ್ಕಳಲ್ಲಿ ಸ್ವಚ್ಛತೆಯ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು, ಶುಚಿತ್ವದ ಅಭ್ಯಾಸಗಳನ್ನು ಮಕ್ಕಳಿಂದ ಪಾಲಕರಿಗೆ ಜಾಗೃತಿ ಮೂಡಿಸಿ ಇಂದಿನ ಮಕ್ಕಳೇ ನಾಳೆಯ ಉತ್ತಮ ಪ್ರಜೆ ಮತ್ತು ಜವಾಬ್ದಾರಿಯುತ ಪಾಲಕ,ನಾಗರಿಕನಾಗುತ್ತಾನೆ ಹಾಗಾಗಿ ಸಾರ್ವಜನಿಕರಿಗೆ ಸ್ವಚ್ಛತೆಯ ಸಂದೇಶಗಳನ್ನು ತಲುಪಿಸಲು  ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ವಚ್ಛ ಭಾರತ ಮಿಷನ್ (ಗ್ರಾ) ಜಿಲ್ಲಾ ಐ.ಇ.ಸಿ  ಸಮಾಲೋಚಕರು  ಶಿವಕುಮಾರ್ ಮಾತನಾಡಿ, ಸ್ವಚ್ಛತೆಗಾಗಿ ಸಂಕಲ್ಪ ಅಭಿಯಾನದ  ತಾಲೂಕಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ನೀತಿಆಯೋಗದ ಆಯ್ಕೆಯ ಅನುಸಾರ  ರಾಜ್ಯದ 14 ಮಹತ್ವಕಾಂಕ್ಷಿ ತಾಲೂಕಗಳಲ್ಲಿ ಯಾದಗಿರಿ ಜಿಲ್ಲೆಯ  ವಡಗೇರಾ ತಾಲೂಕ ಒಂದಾಗಿದೆ. ವಿವಿಧ  ಇಲಾಖೆಯ ಹಲವು ಯೋಜನೆಯ ಕಾರ್ಯಕ್ರಮಗಳಲ್ಲಿ ರಾಜ್ಯದ ಸರಾಸರಿಯ ವರಿಗೆ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸುವುದರಿಂದ ತಾಲೂಕನ್ನು ಮುಂದುವರೆದ ತಾಲೂಕಿನ ಪಟ್ಟಿಗೆ ಸೆರ್ಪಡೆಗೆ  ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಶ್ರಮ ಮತ್ತು  ಚುನಾಯಿತ ಪ್ರತಿನಿಧಿ ಯವರು,  ಸಾರ್ವಜನಿಕರ ಸಹಕಾರ ಅವಶ್ಯಕವಾಗಿದೆ.5 ವಿಷಯ ಅಥವಾ  ವಲಯಗಳಾದ ಆರೋಗ್ಯ ಪೌಷ್ಠಿಕಾಂಶ,ಶಿಕ್ಷಣಾ,ಸಾಮಾಜಿಕ ಅಭಿವೃದ್ಧಿ, ಮೂಲಭೂತ ಸೌಕರ್ಯ, ಕೃಷಿ ವಲಯಗಳಲ್ಲಿ  ಆದ್ಯತೆ ನೀಡಿ ಮಹತ್ವದ ಗುರಿ ಸಾಧಿಸಬೇಕಾಗಿದೆ ಎಂದರು.

ಸ್ವಚ್ಛತೆಯನ್ನುವುದು ಪ್ರತಿಕುಟುಂಬದಿಂದ ಪ್ರತಿಯೊಬ್ಬರು ಸ್ವಚ್ಛತೆ ಅಭ್ಯಾಸಗಳಾದ ಕಸವನ್ನು ಅಲ್ಲಲ್ಲಿ ಚರಂಡಿಯಲ್ಲಿ ಬಿಸಾಡದಂತೆ, ಸೂಕ್ತವಾಗಿ ವಿಲೇವಾರಿ ಮಾಡಬೇಕು.  ಮಕ್ಕಳಿಗೆ ಪಾಲಿಸುವಂತೆ ತಿಳಿಸಬೇಕು. ಮಕ್ಕಳಲ್ಲಿ ಸ್ವಚ್ಛ ಗ್ರಾಮ ಮಾಡಲು ಅವರಲ್ಲಿರುವ ಆಲೋಚೆನೆಗಳನ್ನು  ದಿನನಿತ್ಯದಲ್ಲಿ ಅಳವಡಿಸಿಕೊಳ್ಳುವುದು ಮನೆ ಮತ್ತು ಗ್ರಾಮದ ಸ್ವಚ್ಛತೆಯಲ್ಲಿ ನಮ್ಮ ಪಾತ್ರ ಏನು? ಎಂಬುದನ್ನು ಆಲೋಚಿಸಲು ಹಾಗೂ ಮಕ್ಕಳ ಸಲಹೆಗಳನ್ನು ತಿಳಿಯುವದರ ಕುರಿತು ಪ್ರೌಢಶಾಲೆಯಲ್ಲಿ ಪ್ರಭಂದ ಸ್ಪರ್ಧೆ ಏರ್ಡಿಸಿ, ಪ್ರಥಮ, ದ್ವಿತೀಯ, ತೃತೀಯ, ಸಮಾಧಾನಕರ ಬಹುಮಾನ ನೀಡಿ ಮಕ್ಕಳಿಗೆ  ಪ್ರಶಂಸೆ ಮಾಡಲಾಯಿತು.

ಗ್ರಾಮ ಪಂಚಾಯತ ಅಧ್ಯಕ್ಷರಾದ  ಚಂದ್ರಕಲಾ ಮಾತನೂರು ಮಾತನಾಡಿ, ಮಹತ್ವಾಕಾಂಕ್ಷಿ ತಾಲೂಕಿನ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಗ್ರಾಮದ ಅಭಿವೃದ್ಧಿಗೆ ತಾವು ಎಲ್ಲರು ಸಹಕರಿಸಬೇಕು ನಿಮ್ಮ ಸಹಕಾರವೇ ನಮ್ಮ ಪ್ರೇರಣೆಯಾಗುತ್ತದೆ. ಗ್ರಾಮ ಪಂಚಾಯತ ವತಿಯಿಂದ ಶಾಲೆಗಳಿಗೆ, ಗ್ರಾಮಕ್ಕೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇಲೆ ಕಲ್ಪಿಸಲಾಗುವುದು ಎಂದರು.

ಬಟ್ಟೆ ಚೀಲ ಬಳಕೆ ಮಾಡಿ ಇತ್ತೀಚಿನ ದಿನಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ನಾವು ಮಿತಿ ಇಲ್ಲದೆ ಬಳಕೆ ಮಾಡುತ್ತಿದ್ದೇವೆ, ಒಂದು ದಿನದಲ್ಲಿ ಒಂದು ಮನೆಯಿಂದ ಕನಿಷ್ಠ ೩-೪ ಪ್ಲಾಸ್ಟಿಕ್ ವಸ್ತುಗಳಾದ ಕುರಿ ಪಾಕೇಟ್, ಹಾಲಿನ ಪಾಕೇಟ್, ತರಕಾರಿ ತಂದಿರುವ ಕವರ್, ಇತರೆ ಕಿರಣ ಅಂಗಡಿಗಳಿಂದ ತರಬಹುದಾದ ಕವರಗಳನ್ನು ಉಪಯೋಗಿಸಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದೆವೆ. ಇವುಗಳನ್ನು ಪ್ಲಾಸ್ಪಕ್ ಕವರ್  ವಸ್ತುಗಳನ್ನು ಬಳಕೆ ಮಾಡುವುದನ್ನು ತ್ಯಜಿಸಿ, ಬಟ್ಟೆ ಚೀಲಗಳನ್ನು ಉಪಯೋಗಿಸಬೇಕು ಎಂದು ಎಲ್ಲಾ ಮಕ್ಕಳಲ್ಲಿ, ಸ್ವ-ಸಹಾಯ ಸಂಘದ ಸದಸ್ಯರಲ್ಲಿ ಮನವಿ ಮಾಡಲಾಯಿತು. ಪ್ರತಿಯೊಬ್ಬರು ಶೌಚಾಲಯಗಳನ್ನು ಉಪಯೋಗಿಸಬೇಕು ಹಾಗೂ ಶೌಚಾಲಯ ರಹಿತ ಕುಟುಂಬಗಳಿದ್ದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಅರ್ಜಿ ಸಲ್ಲಿಸಲು ಸ್ವಚ್ಛತೆಯ ಪ್ರತಿಜ್ಞಾ ವಿಧಿ ಮಕ್ಕಳು, ಗ್ರಾಮಸ್ಥರು ಸ್ವೀಕರಿಸಿದರು.ಹೈಯ್ಯಾಳದಲ್ಲಿರುವ ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಸ್ವಚ್ಛತೆಯ ಘೋಷವಾಕ್ಯಗಳನ್ನು ಹೇಳಲಾಯಿತು.

ಈ ಸಂದರ್ಭದಲ್ಲಿ ಸಿದ್ದಣ್ಣಗೌಡ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು,ಗ್ರಾ.ಕು.ನೀ & ನೈ ಇಲಾಖೆ,ಉಪವಿಭಾಗ ಶಹಾಪೂರ ವಡಗೇರಾ ಗ್ರಾಮ ಪಂಚಾಯತ ಸದಸ್ಯರಾದ ಕಾಮಣ್ಣ,ಚಂದ್ರಶೇಖರ ಉಂಗೂರು,ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ  ಸಿದ್ದಿವೀರಪ್ಪ, ಶಾಲಾ ಮುಖ್ಯಗುರುಗಳಾದ  ಶರಣಪ್ಪ, ಸಂಕಪ್ಪ,ದ್ವಿತೀಯ ದರ್ಜೆಲೆಕ್ಕ ಸಹಾಯಕರಾದ ದೇವಿಂದ್ರಪ್ಪ,ಈರಣ್ಣ ಸಾಹುಕಾರ,ಶಾಲಾ ಶಿಕ್ಷಕರು, ಮಕ್ಕಳು,ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

About The Author