ಯಾದಗಿರಿ ಮೀನು ಮಾರುಕಟ್ಟೆ ಕಟ್ಟಡ ಕಳಪೆ ಕ್ರಮಕ್ಕೆ ಆಗ್ರಹ

ಯಾದಗಿರಿ :ಜಿಲ್ಲೆಯಲ್ಲಿ ನಿರ್ಮಿತವಾದ ಮೀನು ಮಾರುಕಟ್ಟೆ ಕಟ್ಟಡ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ವರ್ತೂರು ಪ್ರಕಾಶ್ ಯುವ ಘರ್ಜನೆಯ ಜಿಲ್ಲಾ ಅಧ್ಯಕ್ಷರಾದ ಐಕೂರು ಅಶೋಕ ಮನವಿ ಮಾಡಿ ಆಗ್ರಹಿಸಿದ್ದಾರೆ.ನಿರ್ಮಿತ ಕೇಂದ್ರದಿಂದ ನಿರ್ಮಿತವಾದ ಈ ಕಟ್ಟಡ ಅಂದಾಜು ಪತ್ರಿಕೆ ಪ್ರಕಾರ ನಿರ್ಮಿತವಾಗಿಲ್ಲ. ಗುಣಮಟ್ಟದಿಂದ ಕೂಡಿಲ್ಲ. ಕಳಪೆ ಪ್ರಮಾಣದ ಸಾಮಗ್ರಿಗಳನ್ನು ಬಳಸಲಾಗಿದೆ.ಒಂದು ಕೋಟಿ ವೆಚ್ಚದ ಈ ಕಟ್ಟಡವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡಿಲ್ಲ. ಇದರ ಬಗ್ಗೆ ಅಪರ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ನಿರ್ಮಿತ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿಗಳು ಪತ್ರ ಬರೆದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಆದರೆ ನಿರ್ಮಿತ ಕೇಂದ್ರದ ವ್ಯವಸ್ಥಾಪಕರು ಇದಕ್ಕೆ ಕ್ಯಾರೆ ಎನ್ನದೆ ಏಪ್ರಿಲ್ ನಾಲ್ಕರಂದು ಕಾಮಗಾರಿ ಪೂರ್ಣಗೊಂಡಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸರವಾಗಿದೆ ಎಂದು ಉತ್ತರ ನೀಡಿದ್ದಾರೆ.ಮೇಲಾಧಿಕಾರಿಗಳಿಗೆ ನಾಲ್ಕು ಬಾರಿ ಪತ್ರ ಬರೆದ ನಾನು ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದೇನೆ ಎಂದು ಹೇಳಿದರು.