ಶಹಾಪುರ : ಜಾತಿಯ ಆಧಾರಿತ ಮೇಲೆ ಯಾರೂ ಮುಖ್ಯಮಂತ್ರಿಯಾಗುವುದಿಲ್ಲ. ಶಾಸಕರಾದ ಶಿವಶಂಕರಪ್ಪನವರದು ಮೂರ್ಖತನದ ಹೇಳಿಕೆ. ಸಿದ್ದರಾಮಯ್ಯನವರೇ ಶಿವಶಂಕರಪ್ಪನವರ ಮತ್ತು ಡಿಕೆ ಶಿವಕುಮಾರ ಅವರು, ಯಾರೇ ಹೇಳಿದರು ಯಾರ ಮಾತನ್ನು ಕೇಳದೆ ಒಳ್ಳೆಯ ಆಡಳಿತ ಕೊಡಿ. ಧೈರ್ಯದಿಂದ ನಿರ್ಧಾರ ಕೈಗೊಳ್ಳಿ ಎಂದು ಶಾಸಕರಾದ ಬಸವರಾಜ ಪಾಟೀಲ್ ಯತ್ನಾಳ್ ಸಿದ್ದರಾಮಯ್ಯನವರ ಪರ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಹಿಂದೂ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಬಿಜೆಪಿ ಪಕ್ಷ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಜಾತಿ ರಾಜಕಾರಣದಿಂದ ಅಧಿಕಾರ ಕಳೆದುಕೊಂಡಿದ್ದೇವೆ ಎಂದು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಟಾಂಗ ನೀಡಿದರು. ಜಾತಿಯಾದಾರದ ಮೇಲೆ ಯಾರು ಮುಖ್ಯಮಂತ್ರಿ ಆಗುವುದಿಲ್ಲ. ಅವರವರ ಸಾಮರ್ಥ್ಯದ ಮೇಲೆ ಮುಖ್ಯಮಂತ್ರಿಯಾಗುತ್ತಾರೆ. ಸಿದ್ದರಾಮಯ್ಯನವರಿಗೆ ಅಂತಹ ಸಾಮರ್ಥ್ಯವಿದೆ. ಕಾಂಗ್ರೆಸ್ ಪಕ್ಷದ 135 ಕಾಂಗ್ರೆಸ್ ಶಾಸಕರ ಬೆಂಬಲ ಸಿದ್ದರಾಮಯ್ಯನವರಿಗಿದೆ. ಆದರೆ ಕಾಂಗ್ರೆಸ್ ನವರು ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಆಡಳಿತ ನಡೆಸದೆ ಮೂರ್ಖತನದ ಹೇಳಿಕೆ ನೀಡುತ್ತಿದ್ದಾರೆ.ಈ ಹೇಳಿಕೆಗಳು ಉದ್ದೇಶಪೂರ್ವಕವಾಗಿವೆ ಎಂದು ಹೇಳಿದರು.ಸಿದ್ದರಾಮಯ್ಯನವರೇ ಯಾವುದೇ ಕಾರಣಕ್ಕೂ ಅಂಜಬೇಡಿ. ಧೈರ್ಯವಾಗಿ ರಾಜ್ಯದಲ್ಲಿ ಒಳ್ಳೆಯ ಆಡಳಿತ ಕೊಡಿ ಎಂದು ಹೇಳಿರುವುದು ಆಶ್ಚರ್ಯಕರವಾಗಿತ್ತು.