ವಿದ್ಯಾರ್ಥಿಗಳ ಒಳ್ಳೆತನ ಬಡಿದೆಬ್ಬಿಸಬಲ್ಲವನೇ ಶಿಕ್ಷಕ : ವೆಂಕಣ್ಣ ದೊಣ್ಣೆ ಗೌಡರ ಕೊಂಕಲ್

ಶಹಾಪುರ: ಗುರುಗಳೆಂದರೆ ಜ್ಞಾನೋಪದೇಶದ ಮೂಲಕ ಶಿಷ್ಯ ಸಮೂಹದ ಅಂತರ0ಗದಲ್ಲಿ ಸುಪ್ತಾವಸ್ಥೆಯಲ್ಲಿರುವ ಒಳ್ಳೆತನವನ್ನು ಬಡಿದೆಬ್ಬಿಸುವ ಅನುಭವದ ಗಣಿಯಾಗಬೇಕು ಎಂದು ಎಸ್.ಬಿ.ಕಾಲೇಜಿನ ನಿವೃತ್ತ ಉಪನ್ಯಾಸಕ ವೆಂಕಣ್ಣ ದೊಣ್ಣೆ ಗೌಡರು ಕೊಂಕಲ್ ತಿಳಿಸಿದರು.

ತಾಲೂಕಿನ ಶಿರವಾಳ ವಲಯ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶಿರವಾಳ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜರುಗಿದ, ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಆದರ್ಶ ಶಿಕ್ಷಕರಲ್ಲಿ ಇರಬೇಕಾದ ದಶ ಗುಣಗಳ ಬಗ್ಗೆ ತಿಳಿಸಿದ ಅವರು, ಅಂತರ0ಗ,ಬಹಿರ0ಗ ಶುಚಿ, ಚೆನ್ನಾಗಿ ಮಕ್ಕಳ ಮನಮುಟ್ಟುವಂತೆ ಮಾತನಾಡುವ ಕಲೆ, ಒಳ್ಳೆಯ ವ್ಯಕ್ತಿತ್ವ, ಸತ್ಯ ಹೇಳುವ ಧೈರ್ಯವಂತ, ಅಗಾಧವಾದ ನೆನಪಿನ ಶಕ್ತಿ, ಕ್ರಿಯಾಶೀಲ, ವಿನಯ ಗುಣ ಸಂಪನ್ನ, ಉತ್ಸಾಹ, ಬದ್ಧತೆ ರೂಢಿಸಿಕೊಂಡ0ತಹ ಶಿಕ್ಷಕರು ದೇಶ ಕಟ್ಟುವ ಕೆಲಸಕ್ಕೆ ಸಶಕ್ತ ಮೌಲ್ಯಯುತ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಸಾಧ್ಯವಾಗುತ್ತದೆ, ಭಾರತದ ಭವಿಷ್ಯ ವಿದ್ಯಾರ್ಥಿಗಳಲ್ಲಿದೆ ವಿದ್ಯಾರ್ಥಿಗಳನ್ನು ರೂಪಿಸುವ ಶಿಲ್ಪಿ ಶಿಕ್ಷಕರು ಎಂಬುದನ್ನು ಮರೆಯಬಾರದು ಎಂದರು.

     ಕಸಾಪ ತಾಲೂಕ ಅಧ್ಯಕ್ಷ ಡಾ.ರವೀಂದ್ರನಾಥ ಹೊಸ್ಮನಿ ಮಾತನಾಡಿ, ಕನ್ನಡ ಕಟ್ಟುವ ಕೆಲಸಕ್ಕೆ ಶಿರವಾಳ ವಲಯ ಸಾಹಿತ್ಯ ಪರಿಷತ್‌ನ ಕ್ರಿಯಾತ್ಮಕ ಚಟುವಟಿಕೆಗಳು ಪ್ರೇರಣೆಯಾಗಿವೆ, ವಲಯಗಳು ಗಟ್ಟಿಯಾದರೆ ಇಡೀ ತಾಲೂಕಾ ಕನ್ನಡ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಗೆ ಹೆಚ್ಚು ಶಕ್ತಿ ಬರುತ್ತದೆ ಎಂದರು. ಶಿರವಾಳ ವಲಯ ಕಸಾಪ ಅಧ್ಯಕ್ಷ,ಮಲ್ಲಣ್ಣ ಹೊಸ್ಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು, ಹಿರಿಯರಾದ ಮಾನಪ್ಪ ಹೂಗಾರ ಶಿರವಾಳ ಉದ್ಘಾಟಿಸಿದರು. ವೇದಿಕೆಯ ಮೇಲೆ ನಾಗಣ್ಣಗೌಡ ಹಿರೇಗೌಡರು, ಗೋಗಿ ವಲಯ ಅಧ್ಯಕ್ಷ ಮಲ್ಲಣ್ಣಗೌಡ ಪೊಲೀಸ್ ಪಾಟೀಲ, ಎಸ್.ಡಿ.ಎಂ.ಸಿ ಅಧ್ಯಕ್ಷ ಶರಣಪ್ಪ.ಚ.ಪಾಟೀಲ, ವೆಂಕಟೇಶ ದೊರೆ, ಮುಖ್ಯ ಗುರು ನಿಂಗಣ್ಣ ಅಂಗಡಿ, ಸಿದ್ದಲಿಂಗಪ್ಪ ಮಳಗಿ ಇದ್ದರು. ಶಿಕ್ಷಕ ಅಶೋಕ ಚೌದ್ರಿ ಕಾರ್ಯಕ್ರಮ ನಿರ್ವಹಿಸಿದರು, ಕಸಾಪದ ಡಾ.ಮಾರ್ಥಂಡಪ್ಪ ಸ್ವಾಗತಿಸಿದರು,ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಶಾಲೆಯ ಶಿಕ್ಷಕರು, ಗಣ್ಯರು ಪಾಲ್ಗೊಂಡಿದ್ದರು.

ಪ್ರಶಸ್ತಿಗೆ ಭಾಜನರಾದವರು: ಅಣಬಿ  ಪ್ರೌಢಶಾಲೆಯ ಸದಾಶಿವಯ್ಯ ಹಿರೇಮಠ, ಶಿರವಾಳ ಪ್ರೌಢಶಾಲೆಯ ಅಶೋಕ.ಆರ್.ಚೌದ್ರಿ, ಶಿರವಾಳ ಉರ್ದು ಪ್ರಾಥಮಿಕ ಶಾಲೆಯ ಮಧುಮತಿ ಹೊಸೂರು, ಪ್ರಾಥಮಿಕ ಶಾಲೆಯ ಪರಶುರಾಮ. ವರ್ಗಾವಣೆಯಾದ ಶಿಕ್ಷಕರಿಗೆ ಸನ್ಮಾನ: ಶಿರವಾಳಶಾಲೆಯ ಮು.ಗು ಭೀಮಣ್ಣ ಪಾಟೀಲ, ಎಸ್.ಎಂ.ನದಾಫ, ಸಾವಿತ್ರಿ ಹಂಚಿನಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

About The Author