ಚರಬಸವೇಶ್ವರ ಗದ್ದುಗೆಯಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ

ಶಹಾಪುರ : ಶಿಕ್ಷಣ ಮತ್ತು ಸ್ವಚ್ಛತೆಗೆ ಹೆಚ್ಚು ಒತ್ತು ಕೊಟ್ಟಾಗ ಮಾತ್ರ ಸ್ವಚ್ಛ ಹಾಗೂ ಬಲಿಷ್ಟ ಭಾರತ ಕಟ್ಟಲು ಸಾಧ್ಯ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ದೇವೇಂದ್ರ ಕೊನೇಲ್ ಹೇಳಿದರು.ನಗರದ ಶ್ರೀ ಚರಬಸವೇಶ್ವರ ಗದ್ದುಗೆಯಲ್ಲಿ ಭವ್ಯ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಕರೆಯ ಮೇರಿಗೆ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಕಸಗೂಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,ದೇಶವನ್ನು ಸ್ವಚ್ಛವಾಗಿಸಲು ಜನರು ಕೈಜೋಡಿಸಿದಾಗ ಮಾತ್ರ ಸ್ವಚ್ಛ ಭಾರತ ಕಾಣಲು ಸಾಧ್ಯ.ಗಾಂಧೀಜಿಯವರ ಈ ದೃಷ್ಟಿಯತ್ತ ಗಂಭೀರವಾಗಿ ಕೆಲಸ ಮಾಡಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ- ಅಭಿಯಾನವನ್ನು ಪ್ರಾರಂಭಿಸಿದರು. ಸ್ವಚ್ಛ ಭಾರತ ಅಭಿಯಾನದ ಮೂಲ ಉದ್ದೇಶ ಕೇವಲ ಪರಿಸರ ಸ್ವಚ್ಛಗೊಳಿಸುವದಲ್ಲದೆ ಗಿಡಗಳನ್ನು ಬೆಳೆಸುವುದು, ಕಸಮುಕ್ತ ವಾತಾವರಣ ನಿರ್ಮಿಸುವುದು. ಆರೋಗ್ಯವಂತ ಸಮಾಜ ಕಟ್ಟಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿಜೆಪಿಯಹಿರಿಯ ಮುಖಂಡರಾದ ಡಾ. ಚಂದ್ರಶೇಖರ ಸುಬೇದಾರ ಅವರು, ಪರಿಸರ ನಾಶ ಮಾಡಿದರೆ ತಾನು ತನಗೇ ಹಾನಿ ಮಾಡಿಕೊಂಡಂತೆ ಎಂಬುದನ್ನು ನಾವು ಅರಿಯಬೇಕು. ಪರಿಸರ ನಾಶರಹಿತ ಅಭಿವೃದ್ದಿಯನ್ನು ಸಾಧಿಸುವ ಪಥದಲ್ಲಿ ಸಾಗಬೇಕು. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಶಪಥಕ್ಕೆ ಕಟಿಬದ್ಧರಾಗೋಣ ಎಂದು ಅವರು ಯುವಕರಿಗೆ ಕಿವಿ ಮಾತು ಹೇಳಿದರು.

ಈ ಕಾರ್ಯಕ್ರಮದಲ್ಲಿ ಬಿ ಜೆ ಪಿ ಮುಖಂಡರಾದ ಅಪ್ಪುಗೌಡ ಯಾಳಗಿ, ಅಡಿವೆಪ್ಪ ಜಾಕಾ , ಬಸವರಾಜ ಆರುಣಿ, ರಾಘವೇಂದ್ರ ಯಕ್ಷಂತಿ, ಸಿದ್ದಯ್ಯಸ್ವಾಮಿ ಹಿರೇಮಠ, ಸೋಪಣ್ಣ ಸಗರ, ಸಾಯಬಣ್ಣ ನಾಶಿ, ವಿಶ್ವನಾಥ ಗೊಡಗಾಂವ್, ಭೀಮರಾಯ ದೊಡ್ಡಮನಿ, ಲಕ್ಷ್ಮೀಕಾಂತ ಬಿರಾಳ, ಭೀಮು ಹಳಿಸಗರ, ಎಂಬಿ ಬೋನೇರ, ಮಲ್ಲಿಕಾರ್ಜುನ ನಾಯ್ಕೋಡಿ,ದೇವಿಂದ್ರ ಬನದೊಡ್ಡಿ , ದೇವಿಂದ್ರ ರಾಂಪೂರ, ನಾಗೇಶ ಬಾಸೂತಕರ್ ಮಂಜುನಾಥ ಅಲಬಾನೂರ, ಭೀಮು ಹಳಿಸಗರ , ಹಣಮಂತ ಕಟ್ಟಿಮನಿ ಹಾಗೂ ಇತರೆ ಪ್ರಮುಖರು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

 

About The Author