ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 64 ನೆಯ ‘ ಶಿವೋಪಶಮನ ಕಾರ್ಯ’

Raichur : ( ಗಬ್ಬೂರು,ಅಕ್ಟೋಬರ್ 01,2023 ) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಕ್ಟೋಬರ್ 01 ರ ರವಿವಾರದಂದು 64 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ಬಿಜೆಪಿಯಿಂದ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸ ಬಯಸಿರುವ ಮಲ್ಲಿಕಾರ್ಜುನ ಜಕ್ಕಲದಿನ್ನಿ ಅವರು ದಸರೆಯ ಪೂರ್ವದಲ್ಲಿಯೇ ತಮ್ಮ ಬೇಡಿಕೆಯನ್ನು ಸಲ್ಲಿಸಲು ಶ್ರೀಪೀಠಕ್ಕೆ ಬಂದಿದ್ದು ಈ ದಿನದ ಶಿವೋಪಶಮನದ ವಿಶೇಷವಾಗಿತ್ತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಪ್ರತಿವರ್ಷ ನವರಾತ್ರಿಯಲ್ಲಿ ಶ್ರೀದುರ್ಗಾ ಅನುಷ್ಠಾನ ಮಾಡುತ್ತಿದ್ದು ವಿಜಯದಶಮಿಯಂದು ರಾಜಕಾರಣಿಗಳಿಗೆ ವಿಜಯವನ್ನು ಅನುಗ್ರಹಿಸುತ್ತಾರೆ.

ಶ್ರೀಕ್ಷೇತ್ರದ ಕೈಲಾಸದ ಅಧಿದೇವಿ ವಿಶ್ವೇಶ್ವರಿ ದುರ್ಗಾದೇವಿಯು ತನ್ನನ್ನು ನಂಬಿ ಬರುವ ರಾಜಕಾರಣಿ ಭಕ್ತರುಗಳಿಗೆ ನಿಶ್ಚಿತ ಗೆಲುವನ್ನು ಕರುಣಿಸಿ ಅವರನ್ನು ಉದ್ಧರಿಸುತ್ತಿರುವುದರಿಂದ ಪ್ರತಿವರ್ಷ ವಿಜಯದಶಮಿಯ ದಿನದಂದು ರಾಜಕಾರಣಿಗಳ ಗುಂಪೇ ನೆರೆದಿರುತ್ತದೆ.ಅಂದು ಪೀಠಾಧ್ಯಕ್ಷರಿಂದ ಗೆಲುವಿನ ಅಭಯಪಡೆದವರು ಚುನಾವಣೆಗಳಲ್ಲಿ ಗೆಲ್ಲುವುದು ನಿಶ್ಚಿತವಾಗಿರುವುದರಿಂದ ಗ್ರಾಮ ಪಂಚಾಯತಿ ಸದಸ್ಯಸ್ಥಾನದಿಂದ ಹಿಡಿದು ಲೋಕಸಭಾಸ್ಥಾನದವರೆಗೆ ಸ್ಪರ್ಧಿಸುವ ವಿವಿಧ ಪಕ್ಷಗಳ ಆಕಾಂಕ್ಷಿಗಳು ವಿಜಯದಶಮಿಯಂದು ಮಹಾಶೈವ ಧರ್ಮಪೀಠಕ್ಕೆ ಬರುತ್ತಾರೆ.ಆ ದಿನ ವಿಜಯಮುಹೂರ್ತದಲ್ಲಿ ತಮ್ಮ ಅಖಂಡಮೌನ ಮತ್ತು ನಿರಾಹಾರವ್ರತಸಮಾಪ್ತಿಯಾದ ಬಳಿಕ ಪೀಠಾಧ್ಯಕ್ಷರು ರಾಜಕಾರಣಿಗಳನ್ನು ಅನುಗ್ರಹಿಸುತ್ತಾರೆ.ಅದನ್ನರಿತು ಮಲ್ಲಿಕಾರ್ಜುನ ಜಕ್ಕಲದಿನ್ನಿಯವರು ಸಾಕಷ್ಟು ಮುಂಚಿತವಾಗಿಯೇ ಶ್ರೀಕ್ಷೇತ್ರಕ್ಕೆ ಬಂದು ಪೀಠಾಧ್ಯಕ್ಷರಲ್ಲಿ ತಮ್ಮ ಬೇಡಿಕೆಯನ್ನು ಸಲ್ಲಿಸಿದರು.’ ಆಯಿತು,ಜಿಲ್ಲಾ ಪಂಚಾಯತ್ ಸದಸ್ಯರನ್ನಾಗಿ ಮಾಡೋಣ.ವಿಜಯದಶಮಿಯಂದು ಬನ್ನಿ’ ಎಂದು ಪೀಠಾಧ್ಯಕ್ಷರು ವಿಜಯಾಭಯ ನೀಡಿದರು.

ಬಹಳಷ್ಟು ಜನ ರಾಜಕಾರಣಿಗಳು ಈಗಾಗಲೇ ಪೀಠಾಧ್ಯಕ್ಷರ ದರ್ಶನಕ್ಕಾಗಿ ಸಮಯಕೇಳಿದ್ದು ಮಲ್ಲಿಕಾರ್ಜುನ ಜಕ್ಕಲದಿನ್ನಿ ಅವರು ಅಂಥಹ ರಾಜಕೀಯ ಯಶಸ್ಸಿನ ಆಕಾಂಕ್ಷಿಗಳಲ್ಲಿ ಮೊದಲಿಗರಾಗಿ ಭೇಟಿ ನೀಡಿ,ಆಶೀರ್ವಾದ ಪಡೆದರು.ಈ ಬಾರಿ ಅಕ್ಟೋಬರ್ 15 ರಿಂದ ಅಕ್ಟೋಬರ್ 24 ರ ವರೆಗೆ ‘ ನಿರಾಹಾರ ಮತ್ತು ಅಖಂಡಮೌನ ವ್ರತದೊಂದಿಗೆ ದುರ್ಗಾ ಅನುಷ್ಠಾನವನ್ನಾಚರಿಸುವ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಅಕ್ಟೋಬರ್ 24 ರಂದು ಮಧ್ಯಾಹ್ನ 2.18 ನಿಮಿಷಗಳಿಗೆ ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಯಲ್ಲಿ ವ್ರತಮಂಗಲಮಾಡಿ ಭಕ್ತರುಗಳನ್ನು ಅನುಗ್ರಹಿಸಲಿದ್ದಾರೆ.

ವಿಶ್ವೇಶ್ವರ ಶಿವನ ಅನುಗ್ರಹದಿಂದ ಗಂಡುಮಗನನ್ನು ಪಡೆದ ಮಸೀದಪುರದ ಗಂಗಪ್ಪ ಹಿಂದುಪುರ ಇಂದು ಪೀಠದ ದಾಸೋಹಸೇವೆ ಸಲ್ಲಿಸಿ ಲಾಡಿನ ಸಿಹಿಯೊಂದಿಗೆ ದೇಶೀಯ ಭಕ್ಷ್ಯ ಭೋಜ್ಯಗಳಿಂದ ಭಕ್ತರುಗಳನ್ನು ಸಂತೃಪ್ತಿ ಪಡಿಸಿದರು.ಪೀಠಾಧ್ಯಕ್ಷರು ದಾಸೋಹಸೇವಾಕರ್ತರನ್ನು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ದಾಸೋಹ ಸಮಿತಿಯ ಅಧ್ಯಕ್ಷರಾದ ಗುರುಬಸವ ಹುರಕಡ್ಲಿ,ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ, ಉಮೇಶ ಸಾಹುಕಾರ ಅರಷಣಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಯಲ್ಲಪ್ಪ ಕರಿಗಾರ,ರಂಗಪ್ಪ ಮಸೀದಪುರ,ಸಿದ್ರಾಮಯ್ಯಸ್ವಾಮಿ ಹಳ್ಳಿ,ಭೀಮಣ್ಣ ಗಣಜಲಿ,ಬೂದಿಬಸವ ಕರಿಗಾರ,ಬೆಟ್ಟಪ್ಪ ಗದಾರ,ತಿಪ್ಪಯ್ಯ ಭೋವಿ, ಹನುಮೇಶ,ಶಿವಕುಮಾರ ವಸ್ತಾರ,ಖಾಜಾಪಾಶಾ ಉದಯಕಾಲ ವರದಿಗಾರ ರಮೇಶ ಖಾನಾಪುರ ಮತ್ತು ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author