ಶಫರ್ಡ್ಸ ಇಂಡಿಯಾದ ರಾಜ್ಯ ಮಹಿಳಾ ಕಾರ್ಯದರ್ಶಿಯಾಗಿ ಮಂಜುಳಾ ನಾರಾಯಣನ್ ನೇಮಕ

ಬೆಂಗಳೂರು : ಶಫರ್ಡ್ಸ ಇಂಡಿಯಾ ಇಂಟರ್ನ್ಯಾಷನಲ್ ಕರ್ನಾಟಕ ರಾಜ್ಯ ಘಟಕದ ಮಹಿಳಾ ವಿಭಾಗದ ಮಂಜುಳಾ  ನಾರಾಯಣನ್ ಕಾರ್ಯದರ್ಶಿಯಾಗಿ  ನಾರಾಯಣ ಅವರನ್ನು ಚೆಫಾರ್ಡ್ ಇಂಡಿಯಾದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮಲತಾ ಅವರು ನೇಮಕ ಮಾಡಿ ಆದೇಶಿಸಿದ್ದಾರೆ.ತಕ್ಷಣದಿಂದಲೆ  ಸಂಘಟನೆಯಲ್ಲಿ ಪಾಲ್ಗೊಂಡು ಕುರುಬ ಸಮಾಜದ ಒಳಿತಿಗಾಗಿ ಸಾಮಾಜಿಕ ರಾಜಕೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಂಜುಳಾ ನಾರಾಯಣನ್ ಮಾತನಾಡಿ ಮಹಿಳಾ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು ಅತ್ಯಂತ ಸಂತಸದ ವಿಷಯ. ನನಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಸಿಕ್ಕಂತಾಗಿದೆ. ದೇಶದಲ್ಲಿನ 12 ಕೋಟಿ ಕುರುಬರಿದ್ದು ಅವರೆಲ್ಲರನ್ನು ಒಂದೇ ವೇದಿಕೆಯಲ್ಲಿ ತರಲು ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಸಂಘಟನೆ ರಚನೆಯಾಗಿದ್ದು ಅದಕ್ಕಾಗಿ ಶ್ರಮಿಸುತ್ತೇನೆ.ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಎಚ್ ವಿಶ್ವನಾಥ್ ರಾಷ್ಟ್ರೀಯ ಉಪಾಧ್ಯಕ್ಷರಾದ ಎಚ್ಎಮ್ ರೇವಣ್ಣ ರಾಜ್ಯಾಧ್ಯಕ್ಷರಾದ ಸಿಎಂ ನಾಗರಾಜ್ ರಾಜ್ಯ ಮಹಿಳಾ ಅಧ್ಯಕ್ಷರಾದ ಪ್ರೇಮಲತಾ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *