ಶಫರ್ಡ್ಸ ಇಂಡಿಯಾ ಇಂಟರ್ ನ್ಯಾಷನಲ್ ಸಮಾವೇಶದಲ್ಲಿ ಕುರುಬ ಸಮಾಜದ ಜನರು ಪಾಲ್ಗೊಳ್ಳುವಂತೆ ಬಿ ಎಂ ಪಾಟೀಲ್ ಕರೆ

ಬಳ್ಳಾರಿ : ಶಫರ್ಡ್ಸ ಇಂಡಿಯಾ ಇಂಟರ್ನ್ಯಾಷನಲ್ ವತಿಯಿಂದ ದೇಶದಲ್ಲಿರುವ ಕುರುಬ ಸಮಾಜದವರನ್ನು ಒಂದೇ ವೇದಿಕೆಗೆ ತರಲು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಒಂಬತ್ತನೇ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮಾವೇಶದಲ್ಲಿ ಅತಿ ಹೆಚ್ಚಿನ ಜನರು ಪಾಲ್ಗೊಳ್ಳುವಂತೆ ಕರ್ನಾಟಕ ಪ್ರದೇಶ ಕುರುಬರ ಯುವ ಘಟಕದ  ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲ್ ಕರೆ ನೀಡಿದರು.

ದೇಶದ ಹಿಂದುಳಿದ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾಗರಿಕ ಸನ್ಮಾನ ಗೌರವ ಕಾರ್ಯಕ್ರಮವಿದ್ದು, ರಾಷ್ಟ್ರದ ಕುರುಬ ಸಮಾಜದ ಹರಿಯಾಣ ರಾಜ್ಯದ ರಾಜ್ಯಪಾಲರಾದ ಭಂಡಾರು ದತ್ತಾತ್ರೇಯ ಸೇರಿದಂತೆ ದೇಶದ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಶಫರ್ಡ್ ಇಂಡಿಯಾದ ಸಂಸ್ಥಾಪಕ ಅಧ್ಯಕ್ಷರಾದ ಮಾಜಿ ಸಂಸದರಾದ ಎಚ್ ವಿಶ್ವನಾಥ, ರಾಷ್ಟ್ರೀಯ ಉಪಾಧ್ಯಕ್ಷರಾದ ಎಚ್ಎಮ್ ರೇವಣ್ಣ ಸೇರಿದಂತೆ ಕುರುಬ ಸಮಾಜದ ರಾಜ್ಯದ ಶಾಸಕರು ಸಚಿವರು ದೇಶದಲ್ಲಿನ ಗಣ್ಯರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು  ತಿಳಿಸಿದರು.

Leave a Reply

Your email address will not be published. Required fields are marked *