ಶೇಫರ್ಡ್ ಇಂಡಿಯನ್ ಇಂಟರ್ ನ್ಯಾಷನಲ್ ವತಿಯಿಂದ ರಾಷ್ಟ್ರಮಟ್ಟದ ಕುರುಬ ಸಮಾವೇಶ ಪಾಲ್ಗೊಳ್ಳುವಂತೆ ಅಯ್ಯಪ್ಪಗೌಡ ಮನವಿ

ಬೆಂಗಳೂರು : ಶೆಫರ್ಡ್ ಇಂಡಿಯನ್ ಇಂಟರ್ ನ್ಯಾಷನಲ್ ವತಿಯಿಂದ ಕುರುಬ ಸಮಾಜವನ್ನು ರಾಜಕೀಯ ಶೈಕ್ಷಣಿಕ ಅಭಿವೃದ್ಧಿಗಾಗಿ ಅಕ್ಟೋಬರ್ 3,2023 ಮಂಗಳವಾರ ರಂದು ಬೆಳಗಾವಿಯಲ್ಲಿ ಬೃಹತ್ ರಾಷ್ಟ್ರಮಟ್ಟದ ಕುರುಬ ಸಮಾವೇಶ ನಡೆಯಲಿದ್ದು ಸಮಾವೇಶಕ್ಕೆ ಸ್ವಯಂ ಪ್ರೇರಿತರಾಗಿ ಆಗಮಿಸಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಅಯ್ಯಪ್ಪಗೌಡ ಗಬ್ಬೂರು ಕರೆ ನೀಡಿದರು.

ಸಮಾವೇಶಕ್ಕೆ ರಾಷ್ಟ್ರೀಯ ಜನರು ಮೂಲೆ ಮೂಲೆಗಳಿಂದಲೂ ಆಗಮಿಸುತ್ತಿದ್ದು ಸಮಾಜದ ಮುಖಂಡರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಕ್ರಾಂತಿಯ ನೆಲವಾದ ಬೆಳಗಾವಿ ಜಿಲ್ಲೆಯಲ್ಲಿ ರಾಷ್ಟ್ರೀಯ ಕುರುಬ ಸಮಾವೇಶ ಮಾಡಲಾಗುತ್ತಿದ್ದು ಸಂತಸವಾಗಿದೆ ಎಂದರು.ಸಮಾವೇಶದಲ್ಲಿ ಪಾಲ್ಗೊಳ್ಳಲು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಹಲವು ಭಾಗ್ಯಗಳ ಸಿದ್ದರಾಮಯ್ಯನವರನ್ನು ಸನ್ಮಾನಿಸಲಾಗುತ್ತಿದೆ.

‘ರಾಷ್ಟ್ರದಲ್ಲಿ 12 ಕೋಟಿ ಜನ ಕುರುಬ ಸಮಾಜವಿದೆ.ರಾಜಕೀಯವಾಗಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಬುಡಕಟ್ಟು ಜನಾಂಗವಾಗಿರುವ ನಾವುಗಳು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಇಂತಹ ರಾಷ್ಟ್ರಮಟ್ಟದ ಸಮಾವೇಶಗಳು ಅನಿವಾರ್ಯತೆ ಪಕ್ಷಾತೀತವಾಗಿ ಸಮಾವೇಶಕ್ಕೆ ಸಹಕಾರ ಕೊಡಬೇಕು .

ಈ ಸಮಾವೇಶದ ಕೇಂದ್ರ ಬಿಂದುಗಳಾದ ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಮಾಜಿ ಸಚಿವರು ಸಮಾಜದ ಮುಖಂಡರಾದ ಹೆಚ್ ಎಂ ರೇವಣ್ಣ, ಕಾರ್ಯಕ್ರಮದ ರೂವಾರಿಗಳಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳ ಸಮಾಜದ ಬಂಧುಗಳು,ಯುವಕರು ಸ್ವಯಂ ಪ್ರೇರಿತರಾಗಿ ಸಹಸ್ರಾರು ಸಂಖ್ಯೆಯಲ್ಲಿ ಬಂಧುಗಳು ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.