ಅಕ್ಟೋಬರ 3 ರಂದು ಶಫರ್ಡ್ ಇಂಡಿಯಾ ಅಂತರ್ರಾಷ್ಟ್ರೀಯ ಒಂಬತ್ತನೇ ವಾರ್ಷಿಕ ಮಹಾಸಭೆ

ಬಸವರಾಜ ಕರೆಗಾರ

ಶ್ರೀ ಮೈಲಾರಲಿಂಗೇಶ್ವರ ದೇವರು

ಶಹಾಪುರ : ಅಕ್ಟೋಬರ್ 2 ಮಹಾತ್ಮ ಗಾಂಧೀಜಿಯವರ ಜನ್ಮ ದಿನೋತ್ಸವದ ದಿನ. ಸ್ವಾತಂತ್ರ್ಯಕ್ಕಾಗಿ ವಿಶ್ವದಲ್ಲಿಯೇ ಅಹಿಂಸಾ ಮಾರ್ಗದ ಮೂಲಕ ಭಾರತ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಟ್ಟ ಮಹಾನ್ ನಾಯಕನ ದಿನದಂದು ಅಂತಹ ಪವಿತ್ರವಾದ ದಿನವೇ ಎಚ್ ವಿಶ್ವನಾಥ ಮಾಜಿ ಸಚಿವರು ಸಂಸದರು ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಎನ್ನುವ ಮಹಾ ಸಂಸ್ಥೆಯ ಹುಟ್ಟಿಗೆ ಕಾರಣರಾದರು. ಇದರಿಂದ ಎಚ್ಎಂ ರೇವಣ್ಣ ಮತ್ತು ಇತರ ವ್ಯಕ್ತಿಗಳ ಶ್ರಮವಿದೆ.

ಈ ಸಂಸ್ಥೆಯ ಉದ್ದೇಶ ಇಷ್ಟೇ ದೇಶದ ಎಲ್ಲೆಡೆ ಇರುವ ಹಂಚಿಹೋದ ಕುರುಬರನ್ನು ಒಂದುಗೂಡಿಸಿ ಒಂದೇ ವೇದಿಕೆಗೆ ಕರೆ ತರುವುದಾಗಿತ್ತು. ವಿಶ್ವನಾಥರವರ ತಂಡ ಇಡೀ ದೇಶಾದ್ಯಂತ ಸಂಚಾರ ಮಾಡಿ ದೇಶದ ಯಾವ ಯಾವ ರಾಜ್ಯದಲ್ಲಿ ಕುರುಬರಿದ್ದಾರೆ ಅವರನ್ನೆಲ್ಲ ಗುರುತಿಸಿ ಒಟ್ಟುಗೂಡಿಸಲು ಹೆಚ್ಚು ಶ್ರಮವಹಿಸಿದರು.

ಹಯ್ಯಳಲಿಂಗೇಶ್ವರ ದೇವಸ್ಥಾನ ಹಯ್ಯಳ.ಬಿ.ಯಾದಗಿರಿ

ಭಾರತದಲ್ಲಿಯೇ ವಿವಿಧ ರಾಜ್ಯಗಳಲ್ಲಿ ಕುರುಬ ಧನಗರ್ ಕುರುಮನ್, ಪಾಲ್, ಬಂಗೇರ, ದೇವಾಸ್ಥಾನ, ರಬಾರಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಸುಮಾರು ಭಾರತ ದೇಶದಲ್ಲಿ 12 ಕೋಟಿಗೂ ಹೆಚ್ಚು ಕುರುಬ ಸಮುದಾಯಗಳಿವೆ ಎಂದು ಪತ್ತೆ ಹಚ್ಚಿದರು.

ಭಕ್ತ ಕನಕದಾಸ

ನಮ್ಮೆಲ್ಲ ಸಮುದಾಯದ ಬೇರುಗಳನ್ನು ಒಗ್ಗೂಡಿಸಿ ಬೆಳೆಸುವ ಉದ್ದೇಶದಿಂದ ಅಸ್ತಿತ್ವಕ್ಕೆ ತರಲಾದ ಸಂಸ್ಥೆಯ ಶೆಫರ್ಡ್ಸ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆ ಕುರುಬರು ಜಾತಿಯಿಂದ ಗುರುತಿಸಿಕೊಂಡವರಲ್ಲ.ಇವರದೊಂದು ದೊಡ್ಡ ಸಂಸ್ಕೃತಿಮ ದೇಶದ ಮೂಲ ನಿವಾಸಿಗಳು ಕುರುಬರು.

ಕುರಿ ಕಾಯುವ ಒಬ್ಬ ಹುಡುಗ ಚಕ್ರವರ್ತಿ ಚಂದ್ರಗುಪ್ತ ಮೌರ್ಯ ರಾಜ್ಯವಾಳಿದ. ಹಲವಾರು ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಿ ಇಂದೂರಿನ ರಾಣಿ ಅಹಲ್ಯಾದೇವಿ ಹೋಲ್ಕರ್ ಇಂದಿಗೂ ಕಾಶಿಯಲ್ಲಿ ಈಕೆಯ ಪುತ್ತಳಿ ರಾರಾಜಿಸುತ್ತಿದೆ.ಈ ನೆಲವನ್ನಾಳಿದ ಇತಿಹಾಸ ಕುರುಬರಗಿದೆ. ಸಂಚಾರಿಯಾಗಿ ಕಾಡು ಮೇಡು ಸುತ್ತಿ ಕುರಿಗಳನ್ನು ಮೇಯಿಸುತ್ತಾ ಕುರಿ ಈಕ್ಕೆಯಲ್ಲಿ ಶಿವನ ಲಿಂಗವನ್ನು ಕಂಡವರು ಕುರುಬರು.

ಅಹಲ್ಯಾದೇವಿ ಹೋಳ್ಕರ್

ಓದು ಬರಹ ಬಾರದ ಒಬ್ಬ ಬೀರಪ್ಪ, ಜಗನ್ಮಾತೆ ದೇವಿಯನ್ನು ಒಲಿಸಿಕೊಂಡು ಕಾಳಿದಾಸನಾಗಿ ಹಲವು ಕೃತಿಗಳನ್ನು ರಚಿಸಿ ವಿಶ್ವಖ್ಯಾತಿ ಸಾಹಿತಿಯಾದ. ದೇಶಕ್ಕೋಸ್ಕರ ಬ್ರಿಟಿಷರಿಗೆ ಮಣಿಯದೆ ತನ್ನ ದೇಶ ಕಿತ್ತೂರು ಪ್ರಾಂತ್ಯಕ್ಕಾಗಿ ಪ್ರಾಣವನ್ನೇ ಕೊಟ್ಟ ಸಂಗೊಳ್ಳಿ ರಾಯಣ್ಣ, ಒಂದು ಕಾಲದಲ್ಲಿ ಹಂಪಿಯಲ್ಲಿ ಶೇರುಗಟ್ಟಲೆ ಬಂಗಾರ ಮಾರಾಟ ಮಾಡುತ್ತಿದ್ದರು ಎನ್ನುವುದು ವಿಜಯನಗರದ ಸಾಮ್ರಾಜ್ಯ ಸ್ಥಾಪಕರಾದ ಹಕ್ಕ ಬುಕ್ಕರು ಕುರುಬ ಸಮುದಾಯವೆಂಬುದೇ ಹೆಮ್ಮೆಯ ವಿಷಯ. ಭಕ್ತಿಯ ಪರಾಕಾಷ್ಠೆಯಿಂದ ಕಾಗಿನೆಲೆಯ ಆದಿಕೇಶವನ್ನು ಆರಾಧ್ಯ ದೈವವೆಂದುಕೊಂಡು ಉಡುಪಿಯಲ್ಲಿ ಕೃಷ್ಣನ ಮೂರ್ತಿಯನ್ನೇ ತನ್ನತ್ತ ತಿರುಗಿಸಿಕೊಂಡ ಕನಕದಾಸ ಕುರುಬರು.

ವಿಶ್ವಕವಿ ಕವಿರತ್ನ ಕಾಳಿದಾಸ

ಕುರಿ ಕಾಯುವವನು ಹಣಕಾಸು ಖಾತೆ ಏಕೆ ಕೊಟ್ಟರು. ತನ್ನ ಕುರಿಗಳನ್ನು ಎಣಿಕೆ ಮಾಡಲಿಕ್ಕೆ ಬಾರದವನು ಎಂದವರು ಎಷ್ಟೋ ಜನ. ಅದನ್ನೆಲ್ಲ ಮೆಟ್ಟಿನಿಂತು 13 ಬಾರಿ ಶ್ರೇಷ್ಠ ಬಜೆಟ್ ಮಂಡಿಸಿ ಸತತ ಐದು ವರ್ಷ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೊಂದು ಬಾರಿ ರಾಜ್ಯದ ಮುಖ್ಯಮಂತ್ರಿಯಾದವರು ಸಿದ್ದರಾಮಯ್ಯನವರು. ಇಂದು ದೇಶದಲ್ಲಿಯೇ ಕುರುಬರು ರಾಜಕೀಯ ಕಂಡುಕೊಂಡಿದ್ದೆ ಕರ್ನಾಟಕದಿಂದ ಎನ್ನುವ ಹೆಮ್ಮೆ ನಮಗಿದೆ.

ಚಂದ್ರಗುಪ್ತ ಮೌರ್ಯ

ದೇಶದೆಲ್ಲೆಡೆ ಮುಂದಿನ ಭವಿಷ್ಯಗಳ ಬಗ್ಗೆ ಕಾರಣಿಕಗಳನ್ನು ಹೇಳುತ್ತಿರುವುದು ಅತಿ ಹೆಚ್ಚು ಜನರು ಕುರುಬರೇ. ಬಳ್ಳಾರಿ ಜಿಲ್ಲೆಯ ಮೈಲಾರದಲ್ಲಿ, ಯಾದಗಿರಿ ಜಿಲ್ಲೆಯ ಮೈಲಾಪುರ, ಹಯ್ಯಳ ಬಿ, ಬಸವಂತಪುರ, ಗುಂಡಗುರ್ತಿ, ರಾಯಚೂರು ಜಿಲ್ಲೆಯ ಗಬ್ಬೂರು,ಒಡವಾಟಿ,ಅತ್ತನೂರು, ಬಿಜಾಪುರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ರಾಜ್ಯದ ಹಲವಾರು ಕಡೆ ಕಾರಣಿಕ ಹೇಳುತ್ತಿದ್ದಾರೆ.  ಇಷ್ಟಿದ್ದರೂ ಕೂಡ ಕುರುಬರು ಮುಖ್ಯ ವಾಹಿನಿಗೆ ಬರುತ್ತಿಲ್ಲ.

ಸಂಗೊಳ್ಳಿ ರಾಯಣ್ಣ

ಇದೆಲ್ಲವನ್ನು ಮನಗಂಡು ಕಾಗಿನೆಲೆಯಲ್ಲಿ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠವನ್ನು ಅಸ್ತಿತ್ವಕ್ಕೆ ತರಲು ಎಚ್ ವಿಶ್ವನಾಥ್, ಸಿದ್ದರಾಮಯ್ಯ ಮತ್ತು ಹೆಚ್ ಎಂ ರೇವಣ್ಣನವರು ಸೇರಿದಂತೆ ಹಲವರು ಶ್ರಮಿಸಿದರು. ನಂಜನಗೂಡಿನ ಆಜನ್ಮ ಬ್ರಹ್ಮಚಾರಿಗಳಾದ ಶ್ರೀ ತಾರಕರನ್ನು ಆಧ್ಯಾತ್ಮಿಕ ಅಧ್ಯಯನಕ್ಕೆ ಕಳುಹಿಸಿ. ನಂತರ ಅವರನ್ನೇ ಕನಕ ಗುರುಪೀಠಕ್ಕೆ ಕುರುಬ ಸಮಾಜದ ಜಗದ್ಗುರುಗಳನ್ನಾಗಿ ಮಾಡಿ ಜಗದ್ಗುರು ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳು ಎಂದು ಹೆಸರನ್ನಿಟ್ಟು ನಾಮಕರಣ ಮಾಡಿದರು.ಅವರು ಲಿಂಗೈಕ್ಯರಾದ ನಂತರ ಪ್ರಸ್ತುತದಲ್ಲಿ ಜಗದ್ಗುರುಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಯವರು ಪೀಠದಲ್ಲಿದ್ದಾರೆ.

ಹೆಚ್.ವಿಶ್ವನಾಥ ಮಾಜಿ ಸಚಿವರು ಹಾಗೂ ಸಂಸದರು
ಹೆಚ್.ಎಮ್.ರೇವಣ್ಣ ಮಾಜಿ ಸಚಿವರು

 

ಇನ್ನೂ ಹೆಚ್ಚು ಶಾಖಾಮಠಗಳನ್ನು ತೆರೆಯಲು ನಾಲ್ಕು ವಿಭಾಗಗಳನ್ನಾಗಿ ಮಾಡಿ ಮೈಸೂರಿ ವಿಭಾಗಕ್ಕೆ ಪೂಜ್ಯ ಶ್ರೀ ಶಿವಾನಂದಪುರಿ ಸ್ವಾಮೀಜಿಗಳು, ಹೊಸದುರ್ಗಕ್ಕೆ ಪೂಜ್ಯ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು,ತಿಂಥಣಿ ಸೇತುವೆ ವಿಭಾಗಕ್ಕೆ ಸಿದ್ದರಮಾನಂದಪುರಿ ಸ್ವಾಮಿಗಳನ್ನು ನೇಮಿಸಲಾಯಿತು. ಬೀರೇಶ್ವರ, ಮೈಲಾರಲಿಂಗೇಶ್ವರ ದೇವರು ಕುರುಬರ ಆರಾಧ್ಯ ದೇವರಾಗಿ ಪೂಜಿಸುತ್ತಿದ್ದಾರೆ.

ಬಂಡಾರು ದತ್ತಾತ್ರೇಯ ಹರಿಯಾಣ ರಾಜ್ಯದ ರಾಜ್ಯದ ರಾಜ್ಯಪಾಲರು

ಇಂತಹ ಹೆಮ್ಮೆಯ ಕುರುಬ ಸಮುದಾಯದ ಹಿತಾಸಕ್ತಿಗಳನ್ನು ಹರಡುವ ಹೊಸ ಆಶಯಗಳಿಗೆ ಹೊಂದಿಕೊಳ್ಳುವ ಹತ್ತು ಹಲವಾರು ಜವಾಬ್ದಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸುವ ಹಾಗೂ ಭಾರತ ಸರಕಾರಕ್ಕೆ ಸಲಹೆಗಳನ್ನು ನೀಡುವ ಕುರುಬರ ಆಶೋತ್ತರಗಳನ್ನು ರಕ್ಷಿಸುವ ಸಲುವಾಗಿ ಶಫರ್ಡ್ ಇಂಡಿಯಾ ಅಂತರಾಷ್ಟ್ರೀಯ ಸಂಸ್ಥೆ ಇದೆ ಅಕ್ಟೋಬರ್ ಮೂರರಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಒಂಬತ್ತನೇ ರಾಷ್ಟ್ರೀಯ ಸಮಾವೇಶ ನಡೆಸುತ್ತಿದೆ. ಜನಾನುರಾಗಿ ಸಿದ್ದರಾಮಯ್ಯನವರಿಗೆ ರಾಷ್ಟ್ರೀಯ ಸನ್ಮಾನ ಗೌರವ ನೀಡಲಾಗುತ್ತಿದೆ.

ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು

ಸಮಾಜದ ಈ ಸಮಾವೇಶದಲ್ಲಿ ಹರಿಯಾಣದ ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಸೇರಿದಂತೆ ರಾಷ್ಟ್ರದ ಗಣ್ಯರು ಕೇಂದ್ರದ ಹಾಲಿ ಮಾಜಿ ಸಚಿವರು ಸಂಸತ್ ಸದಸ್ಯರು ಶಾಸಕರು ಕಾಗಿನೆಲೆ ಜಗದ್ಗುರುಗಳು, ಪೀಠಗಳ ಪೂಜ್ಯರು, ಪೀಠಾಧಿಪತಿಗಳು ವಿಭಾಗಿಯ ಪೀಠಾಧಿಪತಿಗಳು, ಧಾರ್ಮಿಕ ಸಾಮಾಜಿಕ ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಬಂಡೆಪ್ಪ ಖಾಶಂಪುರ ಮಾಜಿ ಸಚಿವರು

ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ರಾಜ್ಯಾಧ್ಯಕ್ಷರಾದ ಸಿಎಂ ನಾಗರಾಜ, ಹಿರಿಯ ಉಪಾಧ್ಯಕ್ಷರಾದ ಬಾಬು ಜಿದ್ದಿಯಾನಿ, ಮಹಾ ಪ್ರಧಾನ ಕಾರ್ಯದರ್ಶಿ ಎಂ ನಾಗರಾಜ್, ಖಜಾಂಚಿ ಡಾ. ಎಂ ಜಯಪ್ಪ, ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ಇವರೆಲ್ಲರೂ ರಾಜ್ಯಾದ್ಯಂತ ಶ್ರಮಿಸಿ ಬೆಳಗಾವಿಯಲ್ಲಿ ಸಮಾವೇಶ ನಡೆಸುತ್ತಿರುವುದು ರಾಜ್ಯದ ಹೆಮ್ಮೆಯ ವಿಷಯ.

ಸುರೇಶ ಬೈರತಿ ಸಚಿವರು

ರಾಘವೇಂದ್ರ ಹಿಟ್ನಾಳ ಶಾಸಕರು

About The Author