ಶೆಫಾರ್ಡ್ ಇಂಡಿಯಾ ಕಾರ್ಯಕ್ರಮಕ್ಕೆ ಕೆಂಭಾವಿ ಹೋಬಳಿಯಿಂದ ಅತಿ ಹೆಚ್ಚು ಜನ ಪಾಲ್ಗೊಳ್ಳುವಂತೆ ಮನವಿ

ಶಹಾಪುರ : ಬೆಳಗಾವಿಯಲ್ಲಿ ನಡೆಯುವ ಶಫರ್ಡ್ ಇಂಡಿಯಾ ಅಂತರಾಷ್ಟ್ರೀಯ ಒಕ್ಕೂಟದಿಂದ ರಾಜ್ಯದ ಬೆಳಗಾವಿಯಲ್ಲಿ ಅಕ್ಟೋಬರ್ 2 ಮತ್ತು 3 ರಂದು ಬೆಳಗಾವಿಯಿ ಜಿಲ್ಲಾ ಕ್ರೀಡಾಂಗಣದಲ್ಲಿ ಶೆಫಾರ್ಡ್ ಇಂಡಿಯಾ ಅಂತರಾಷ್ಟ್ರೀಯ ಒಕ್ಕೂಟದಿಂದ ಅದ್ದೂರಿಯಾಗಿ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲೆಯ ಕೆಂಭಾವಿ ಹೋಬಳಿಯಿಂದ ಅಧಿಕ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಮಾಳಪ್ಪ ಬಿ ಸುಂಕದ ಕೆಂಭಾವಿ ತಿಳಿಸಿದರು.

ಅಂದು ದೇಶ ವಿದೇಶದಲ್ಲಿನ ಎಲ್ಲಾ ಕುರುಬ ಸಮಾಜದ ರಾಜಕೀಯ ನೇತಾರರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಅಂತರಾಷ್ಟ್ರೀಯ ಶೆಫಾರ್ಡ್ ಇಂಡಿಯಾ ವತಿಯಿಂದ ರಾಷ್ಟ್ರೀಯ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *