ಡಾ.ಶರಣಪ್ಪ ಗಬ್ಬೂರು ರವರ ” ಎನ್ನ ಗುರು ” ಕವನ

ಎನ್ನ ಗುರು

ಇಡು-ಮುಡುಕಿನ ಕಿರಿದಾದ ಡೊಂಕು ದಾರಿಯಲ್ಲಿ
ಹುಡುಕುತಿಹನು ಆಧ್ಯಾತ್ಮದ ದೇವಗುರುವನ್ನ
ಹಿಮದ ನಿರ್ಮಲ ಅಸ್ತಿತ್ವದ ಭೂತಲದವನು
ಆಸ್ತಿಕದವನು, ಅಮ್ರವನು ಕಳೆಯುವನು…….!

ಸೂಕ್ಷ್ಮ ದೃಷ್ಟಿ ಕಿರಣವನು ಧರಿಸುವ ಸೂರ್ಯ
ದೇವಿಶಕ್ತಿಯ ಕೆಂಡದವನು ಧರೆಗಿಳಿಸಿದವನು
ಆದಿಶಕ್ತಿಯ ಮಹಾಶೇಷದ ಅಗೋಚರನಿವನು…..!

ಅಪ್ರತಿಮ ಅಪೂರ್ವ ಸುಂದರ ಪ್ರಿಯ
ಅಮರ್ತ್ಯದ ಅಲ್ಲಮನಿವನು
ಅವಿಚ್ಛಿನ್ನ ಮುಗಿಲು ಮುಟ್ಟುವನು
ಅನ್ನದಾಸನಿಗೆ ಅರ್ಧ ತೆರೆದ ಮುಕ್ಕಣ್ಣನಿವನು……..!

ಕಣ್ಣಿಗೆ ಕಾಣದ ಅಗೋಚರ ಅಚಂಚಲಕರ
ನಾಶವಿಲ್ಲದ ಅಜಾತಶತ್ರು, ಇಂದ್ರರನು ಗೆದ್ದು ಶಿವನಾಂಶವಾದ ಈ ಜೀವಾತ್ಮ
ಉತ್ತರ ದಿಕ್ಕಿನ ದಿಗ್ಗಜ ವೇದದ ರಸ-ಋಷಿಯಿವನು……..!

ಸೂರ್ಯ-ಚಂದ್ರರಿರುವತನಕ ಅಜೀವ
ಸ್ವಾಭಾವಿಕ ನೀರಿನಾಶ್ರದವನು
ದುಃಖವಿಲ್ಲದ ಅಶೋಕ, ನಿಗ್ರಹಗಳ ಕೆತ್ತಿದವನು
ಆಶ್ಚರ್ಯವ ಹುಟ್ಟಿಸುವನು ಅಂಕುರದಿ
ಬಿರುದುಗಳ ಬರೆಯುವವ
ನಾಶವಾಗದವ ಈ ಮಹಾತ್ಮ…….!

ರಚನೆ :- ಡಾ. ಶರಣಪ್ಪ ಗಬ್ಬೂರು ಕೋಲಾರ

About The Author