ವಡಗೇರಾ ಪಟ್ಟಣದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತರ ಚಿಂತನಾ ಶಿಬಿರ

yadagiri ವಡಗೇರಾ,: ಮಕ್ಕಳು ಮತ್ತು ಗರ್ಭಿಣಿ ತಾಯಂದಿರ ಅಭಿವೃದ್ಧಿಯಲ್ಲಿ ಅಂಗನವಾಡಿ ಆಶಾ ಕಾರ್ಯಕರ್ತರು  ಪಾತ್ರ ಬಹುಮುಖ್ಯವಾಗಿದೆ ಎಂದು ವಡಗೇರಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ್ ಸಂಗ್ವಾರ ಹೇಳಿದರು. ಪಟ್ಟಣದ ಬನದ ರಾಚೂಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಪಂಚಾಯತಿ ವತಿಯಿಂದ ಆಶಾ ಹಾಗೂ ಅಂಗನವಾಡಿ ಮತ್ತು ಟ್ರಸ್ಟ್ ಮತ್ತು ಸಂಸ್ಥೆಗಳ ಕಾರ್ಯಕರ್ತರ ಕುರಿತು ಹಮ್ಮಿಕೊಂಡಿದ್ದ ಚಿಂತನಾ ಮಂಥನ ಶಿಬಿರ ಉದ್ಘಾಟಿಸಿ ಮಾತನಾಡಿದರು.ನೀತಿ ಆಯೋಗದ ವತಿಯಿಂದ ವಡಗೇರಾ ಅತೀ ಹಿಂದುಳಿದ ತಾಲೂಕ ಎಂದು ಗುರುತಿಸಿರುವ  ಕಾರಣ ತಾಲೂಕಿನ  ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿ ತಾಯಂದಿರ ಆರೋಗ್ಯ ಸುಧಾರಣೆ  ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ  ಗ್ರಾಮೀಣ ಭಾಗದಲ್ಲಿರುವ ಸಮಸ್ಯೆ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ಸಂಯೋಗದಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ. ಈ ಚಿಂತನಾ ಶಿಭಿರದಲ್ಲಿ ನೀತಿ ಆಯೋಗ ಸೂಚಿಸಿರುವ ಸೂಚ್ಯಂಕಗಳನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಅಭಿಪ್ರಾಯಗಳನ್ನು ಸಂಗ್ರಹಿಸಿ ಚರ್ಚಿಸಲಾಯಿತು.

ತಾಲೂಕು ಆರೋಗ್ಯ ಅಧಿಕಾರಿ ಡಾ. ರಮೇಶ್ ಗುತ್ತಿಗೆದಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಅಪೌಷ್ಟಿಕತೆ  ಹೊಂದಿರುವ ಮಕ್ಕಳು ಹಾಗೂ ಬಾಣಂತಿಯರ ಬಗ್ಗೆ ಅಂಗನವಾಡಿ ಕಾರ್ಯಕರ್ತರು ಹೆಚ್ಚಿನ ಕಾಳಜಿ ವಹಿಸಬೇಕು.  ಮಕ್ಕಳು ಬಾಣಂತಿಯರಿಗೆ  ಸರಿಯಾದ ರೀತಿಯಲ್ಲಿ ಪೌಷ್ಟಿಕಾಂಶಗಳುಳ್ಳ ಆಹಾರ ಸೇವನೆಗೆ ಸಲಹೆ ನೀಡಬೇಕು. ಅಂಗನವಾಡಿಯ ಮಕ್ಕಳ ಆರೋಗ್ಯದ  ಬಗ್ಗೆ ನಿಗಾ ಇರಲಿ.  ಅಂಗನವಾಡಿ ಶಾಲಾ ಮಕ್ಕಳಿಗೆ ಪ್ರತಿನಿತ್ಯ ಉತ್ತಮ ಗುಣಮಟ್ಟದ ಆಹಾರವನ್ನು ನೀಡಬೇಕು. ಮಕ್ಕಳ ಸ್ವಚ್ಛತೆಯ ಬಗ್ಗೆ ತಾಯಂದಿರಿಗೆ ಹರಿವು ಮೂಡಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಿ ಪಾಟೀಲ, ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಸಂಗಣ್ಣ ನಾಯಕ ನುಚ್ಚಿನ,ನೀತಿ ಆಯೋಗದ ಬ್ಲಾಕ್ ಸಮಾಲೋಚಕರಾದ ಕಾವೇರಿ ಸುರಾಳಕರ,ವಿಶಾಲ, ಶಶಿಕಾಂತ್ ಪಾಟೀಲ್ ಮನಗನಾಳ ಮತ್ತು ಅಮೆರಿಕನ್ ಫೌಂಡೇಶನ್,
ಕಲಿಕಾ ಟ್ರಸ್ಟ್, ನವ ಚೇತನ ಟ್ರಸ್ಟ್  ಪಿರಾಮಿಡ್ ಫೌಂಡೇಶನ್
ಭಾರತೀಯ ಆಗ್ರೂ ಇಂಡಸ್ಟ್ರಿಯಲ್ ಫೌಂಡೇಶನ,ಮುಖ್ಯಸ್ಥರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಆಶಾ ಅಂಗನವಾಡಿ ಕಾರ್ಯಕರ್ತರು