ಗಣೇಶೋತ್ಸವಗಳು ಸಂಘಟನಾ ಶಕ್ತಿ ಕೇಂದ್ರಗಳಾಗಬೇಕು : ಚನ್ನಾರೆಡ್ಡಿ ತುನ್ನೂರು

yadagiri ವಡಗೇರಾ : ಎಲ್ಲರೂ ಒಗ್ಗಟ್ಟಾಗಿ ಒಂದೆಡೆ ಸೇರಿ ನಮ್ಮ ಧಾರ್ಮಿಕ ಸಂಸ್ಕೃತಿಯನ್ನು ಸಾರುವ ಗಣೇಶೋತ್ಸವ ಆಚರಣೆಗಳು ಸಂಘಟನಾ ಶಕ್ತಿ ಕೇಂದ್ರಗಳಾಗಬೇಕು ಎಂದು ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.ಪಟ್ಟಣದ ಅಂಬಾಮಹೇಶ್ವರಿ ನಗರದ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿರುವ ಗಣೇಶ ಪ್ರತಿಷ್ಠಾಪನ ಸ್ಥಳಕ್ಕೆ ಭೇಟಿ ನೀಡಿ  ಗಣೇಶನ ದರ್ಶನ ಪಡೆದು ಮಾತನಾಡಿದರು. ನಮ್ಮ ದೇಶದಿಂದ ಬ್ರಿಟಿಷರನ್ನು ಓಡಿಸಲು ಸಂಘಟನೆ ದೃಷ್ಟಿಯಿಂದ  ಬಾಲಗಂಗಾಧರನಾಥ ತಿಲಕ್  ರಾಷ್ಟ್ರಾದ್ಯಂತ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ  ಪ್ರಾರಂಭಿಸಿದರು. ಅದೇ ರೀತಿಯಲ್ಲಿ ನಾವುಗಳು ಭಾವೈಕ್ಯತೆಯ ದೃಷ್ಟಿಯಿಂದ ಎಲ್ಲಾ ಧರ್ಮ ಜಾತಿ ಜನಾಂಗದವರನ್ನು ಒಟ್ಟಿಗೆ ಸೇರಿಸಿಕೊಂಡು  ಈ ಹಬ್ಬವನ್ನು ಮಾಡುತ್ತೇವೆ. ಗಣೇಶೋತ್ಸವಗಳು ಸಂಘಟನೆಯ ಶಕ್ತಿಯಾಗಬೇಕು. ನಾವುಗಳು ದೇವರನ್ನು ಪೂಜಿಸುವುದರ ಜೊತೆಗೆ ನ್ಯಾಯ ನೀತಿ ಧರ್ಮ ಪಾಲನೆಯನ್ನು ಮಾಡಬೇಕೆಂದು ಯುವಕರಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಬಸುಗೌಡ ಬಿಳಾರ,ಸಂಗುಗೌಡ ಮಾಲಿ ಪಾಟೀಲ್ ಅಬ್ದುಲ್ ಚಿಗಾನೂರ, ಬಾಬುಗೌಡ ಮಾಚನೂರ,ಶರಣು ಮಾತಪ್ಪಳ್ಳಿ,ಸಾಬಣ್ಣ ಮುನಮುಟಗಿ,ಮಲ್ಲು ಜಡಿ, ಹಣಮಂತ ಸೈದಾಪುರ,ಶರಣು  ಕುರಿ,ವೀರೇಶ್ ವಿಶ್ವಕರ್ಮ, ಹರ್ಷ ಕೊಂಕಲ್, ಗಂಗಣ್ಣ ಮಡಿವಾಳ, ಶ್ರೀನಿವಾಸ್ ಜಡಿ, ಗುರುನಾಥ್ ರೆಡ್ಡಿ, ಮುಕ್ಕಣ್ಣ, ಮಲ್ಲಿಕಾರ್ಜುನ ಜಡಿ, ನಾಗರಾಜ್ ಮಡಿವಾಳ‌  ಮುಖಂಡರು ಹಾಗೂ ವಿನಾಯಕ ಗೆಳೆಯರ ಬಳಗದ ಯುವಕ ಮಿತ್ರರು ಇದ್ದರು.

About The Author