ಮಹಾಶೈವ ಧರ್ಮಪೀಠದಲ್ಲಿ 63 ನೆಯ  ಶಿವೋಪಶಮನ ಕಾರ್ಯ : ಉಮೇಶ ಸಾಹುಕಾರ ಅರಷಣಗಿಯವರಿಗೆ ಸಂತಾನ ಭಾಗ್ಯ ಕರುಣಿಸಿದ ವಿಶ್ವೇಶ್ವರ

ಶ್ರೀ ಶ್ರೀ ವಿಶ್ವೇಶ್ವರ ಮಹಾದೇವ
ಶ್ರೀ ಶ್ರೀ ವಿಶ್ವೇಶ್ವರಿ ದುರ್ಗೆ ಮಾತೆ

ರಾಯಚೂರು  : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ  ಮಹಾಶೈವ ಧರ್ಮಪೀಠದಲ್ಲಿ  ಸೆಪ್ಟೆಂಬರ್ 24 ರ ಆದಿತ್ಯವಾರದಂದು 63 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ದೂರ ದೂರದ ಊರುಗಳಿಂದ ಬಂದಿದ್ದ ನೂರಾರು ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

‌    ಈದಿನದ ಶಿವೋಪಶಮನದ ವಿಶೇಷ ಎಂದರೆ ಮಹಾಶೈವ ಧರ್ಮಪೀಠದ ವ್ಯವಸ್ಥಾಪನಾ ಮಂಡಳಿಯ ಸದಸ್ಯರೂ ಮತ್ತು ಮಹಾಶೈವ ಧರ್ಮಪೀಠದ ನಿಷ್ಠಾವಂತ ಕಾರ್ಯಕರ್ತರಲ್ಲೊಬ್ಬರಾಗಿರುವ ಉಮೇಶ ಸಾಹುಕಾರ ಅರಷಣಗಿ ಅವರು ಗಂಡು ಮೊಮ್ಮಗನ ಅಜ್ಜನಾಗಿ ಮಠದ ಭಕ್ತರುಗಳಿಗೆ ಕರಿಗಡಬಿನ ಸಿಹಿಯೊಂದಿಗೆ ದಾಸೋಹ ಮಾಡಿಸಿದ್ದು.ಉಮೇಶ  ಸಾಹುಕಾರ ಅವರ ಏಕಮಾತ್ರ ಪುತ್ರ ಈಶಪ್ಪ ಮತ್ತು ಸೊಸೆ ಅಖಿಲಾ ಅವರಿಗೆ 17.09.2023 ರ ರವಿವಾರದಂದು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಗಂಡು ಮಗುವಿನ ಜನನವಾಗಿದೆ.ಸಂತೋಷದಲ್ಲಿ ಇಂದಿನ ದಾಸೋಹ ಸೇವೆ ಸಲ್ಲಿಸಿದ ಉಮೇಶ ಸಾಹುಕಾರ ಅರಷಣಗಿ ಅವರನ್ನು ಪೀಠಾಧ್ಯಕ್ಷರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಿರುವ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ರವರು

ಈ ಶಿವೋಪಶಮನದ ಮತ್ತೊಂದು ವಿಶೇಷ ಎಂದರೆ ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದಿಂದ ಮಂಡಿನೋವಿನಿಂದ ಬಳಲುತ್ತಿರುವ ಹದಿನಾಲ್ಕು ಜನರು ತೋರಿಸಿಕೊಳ್ಳಲು ಬಂದಿದ್ದು.ಕಳೆದವಾರ ಮಂಡಿನೋವಿನಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ವಿಶ್ವೇಶ್ವರನ ಅನುಗ್ರಹದಿಂದ ಗುಣಮುಖರಾಗಿದ್ದರು.ಅವರನ್ನು ಕೇಳಿ ಅಲಬನೂರಿನ ಹದಿನಾಲ್ಕು ಜನರು ಕ್ರೂಸರ್ ಬಾಡಿಗೆ ತೆಗೆದುಕೊಂಡು  ಮಹಾಶೈವ ಧರ್ಮಪೀಠಕ್ಕೆ ಬಂದಿದ್ದರು.ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರು ಆ ಹದಿನಾಲ್ಕು ಜನ ಭಕ್ತರುಗಳಿಗೆ ಶಿವಾಭಯ ಕರುಣಿಸಿದರು.

ಮಹಾಶೈವ ಧರ್ಮಪೀಠದ ತ್ರಯಂಬಕೇಶ, ದೇವರಾಜ ಕರಿಗಾರ, ಗುರುಬಸವ ಹುರಕಡ್ಲಿ, ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಶರಣಗೌಡ ಹೊನ್ನಟಗಿ, ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಉಮೇಶ ಸಾಹುಕಾರ ಅರಷಣಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಯಲ್ಲಪ್ಪ ಕರಿಗಾರ,ಮೃತ್ಯುಂಜಯ ಯಾದವ,ತಾತಪ್ಪ ಚಿಕ್ಕಹಳ್ಳಿ,ವೀರೇಶ ಯಾದವ, ಸಿದ್ರಾಮಯ್ಯ ಸ್ವಾಮಿ ಹಳ್ಳಿ,ಬಸವಲಿಂಗ ಪೂಜಾರಿ ಅಮರಾಪುರ ,ಮನೋಜ ಧರಣಿ, ತಿಪ್ಪಯ್ಯ ಭೋವಿ, ಶಿವಾನಂದ ಹಿಂದುಪುರ,ವೆಂಕಟೇಶ ರಂಗನಾಥ,ಶಿವಕುಮಾರ ವಾಸ್ತರ್,ಪತ್ರಕರ್ತರುಗಳಾದ ಬಸವರಾಜ ಭೋಗಾವತಿ ಮತ್ತು ರಮೇಶ ಖಾನಾಪುರ,ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

 

About The Author