ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಮಾವೇಶ : ಹಿಂದುಳಿದ ವರ್ಗದವರಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರಬಲವಾಗಬೇಕಿದೆ : ಡಾ.ಭೀಮಣ್ಣ ಮೇಟಿ

ಶಹಾಪುರ : ಹಿಂದುಳಿದ ವರ್ಗದವರು ವೃತ್ತಿ ಆಧಾರದ ಮೇಲೆ ಅವಲಂಬಿತರಾದವರು. ಅಂತಹ ಎಲ್ಲಾ ಚಿಕ್ಕಪುಟ್ಟ ಸಮುದಾಯಗಳನ್ನು ಒಳಗೊಂಡು ಎಲ್ಲಾ ಸಮುದಾಯಗಳು ಒಂದಾದರೆ ದೇಶ ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲವಾಗಲು ಸಾಧ್ಯ ಎಂದು ಕಾಂಗ್ರೆಸ್ ಮುಖಂಡ ಡಾ. ಭೀಮಣ್ಣ ಭೇಟಿ ಹೇಳಿದರು. ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಂಘಟನೆಗಳ ವತಿಯಿಂದ ಡಿ. ದೇವರಾಜ ಅರಸು ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ನಮ್ಮ ಸಂಘಟನೆಯನ್ನು ಹೊಡೆಯಲು ಹಲವಾರು ಜನ ಪ್ರಯತ್ನಿಸಿದರೂ ನಾವು ಒಗ್ಗೂಡುತ್ತಿದ್ದೇವೆ. ನಮ್ಮಲ್ಲಿ ರಾಜಕೀಯ ವಿಚಾರ ಶಕ್ತಿ ಹೆಚ್ಚಾದಾಗ ರಾಜಕೀಯ ಆರ್ಥಿಕವಾಗಿ ನಾವು ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ.ವೀರಪ್ಪ ಮೊಯ್ಲಿ, ಧರ್ಮಸಿಂಗ್, ಬಂಗಾರಪ್ಪ, ಸಿದ್ದರಾಮಯ್ಯ ಸೇರಿದಂತೆ ಹಿಂದುಳಿದ ವರ್ಗಗಳು ಮುಖ್ಯಮಂತ್ರಿ ಮುಖ್ಯಮಂತ್ರಿಯಾದಾಗ ನಮಗೆ ರಾಜಕೀಯದಲ್ಲಿ ಸಿಗಬೇಕಾದ ಸ್ಥಾನಮಾನಗಳು ಸಿಗದೇ ಇರುವುದು ದುರದೃಷ್ಟಕರ ಎಂದರು.

ಸಂಸತ್ತಿನಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಅಂಗೀಕಾರವಾಗಿದೆ. ಅದರಂತೆ ಹಿಂದುಳಿದವರಿಗೂ ಕೂಡ ಮೀಸಲಾತಿ ಹೆಚ್ಚಾಗಬೇಕು. ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕೆಲವು ಮನುವಾದಿಗಳು ಕಸಿದುಕೊಂಡರು ಕಳವಳ ವ್ಯಕ್ತಪಡಿಸಿದರು. ಮೀಸಲಾತಿ ಪರ ಹೋರಾಟ ಹೆಚ್ಚಾಗಬೇಕಿದೆ ಎಂದರು.

ಶರಣಪ್ಪ ಮಾನೆಗರ್, ಶ್ರೀಕಾಂತರಾವ್ ಕುಲಕರ್ಣಿ, ಬಿಎಮ್ ಪಾಟೀಲ್, ಯಲ್ಲಪ್ಪ ಕಂದಕೂರು, ಬಾಲರಾಜ್ ಗುತ್ತೇದಾರ್, ಡಾ. ಸಂಜಯ್ ಕುಮಾರ್, ಆಂಜನೇಯ, ನಾಗವೇಣಿ ಪಾಟೀಲ್, ಪ್ರಭಾವತಿ ಮಾರುತಿ ಕಲಾಲ್, ಸರೋಜಾ ಸೇರಿದಂತೆ ಹಲವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಯೋಜಕರಾದ ಸೈದಪ್ಪ ಗುತ್ತೇದಾರ್, ಕೆ ಶಾಂತಪ್ಪ ಜಿಲ್ಲಾಧ್ಯಕ್ಷರು ಹಿಂದುಳಿದ ವರ್ಗಗಳ ಒಕ್ಕೂಟ ರಾಯಚೂರು,ಆನಂದ ಗುಂಟೆ ಸಂಘಟನಾ ಕಾರ್ಯದರ್ಶಿಗಳು ರಮೇಶ್ ಮೂಡಲದಿನ್ನಿ ಬಂಡಿಹಟ್ಟಿ ಶ್ರೀನಿವಾಸ, ಹನುಮಂತಪ್ಪ ವಕೀಲರು, ನರಸಣ್ಣ ಶಾಸ್ತ್ರಿ, ಮಂಜುನಾಥ ದಳವಾಯಿ, ಶರತ್, ಬಸವರಾಜ ಸೇರಿದಂತೆ ಹಿಂದುಳಿದ ವರ್ಗದ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

About The Author