ಅಯ್ಯಪ್ಪ ಗಬ್ಬೂರ ಅವರಿಗೆ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ನಂದ ಕಿಶೋರ್ ಬೀದರ್ ಮನವಿ

ಬೆಂಗಳೂರು : ಕುರಿಗಾರರು ಹಾಗೂ ಕುರಿಗಾಹಿಗಳ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದು ಕುರಿಗಾರರ ಸಮಸ್ಯೆಗಳನ್ನು ಈಡೇರಿಸಿ ಕುರಿಗಾಹಿಗಳು ಸಂಕಷ್ಟಕ್ಕೆ ಸ್ಪಂದಿಸುವ ಯುವಕರು ಹೋರಾಟಗಾರರು, ರಾಜ್ಯದ ಕುರಿಗಾರರಿಗೆ ಸಹಾಯ ಮಾಡಿದ ಅಯ್ಯಪ್ಪಗೌಡ ಗಬ್ಬೂರು ಅವರಿಗೆ ರಾಜ್ಯ ಕುರಿ ನಿಗಮ ಅಧ್ಯಕ್ಷ ಸ್ಥಾನ ನೀಡವಂತೆ ಬೀದರ್ ಜಿಲ್ಲೆಯ ಕುರುಬ ಸಮಾಜದ ನಾಯಕರು  ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಕಿಶೋರ್ ಬೀದರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
 ಕುರಿಗಾರರ ರೈತಪಲ ಕಾರ್ಮಿಕರ ಪರ ಹಿಂದುಳಿದ ವರ್ಗಗಳ ಯುವ ಹೋರಾಟಗಾರ ಅಯ್ಯಪ್ಪಗೌಡ ಗಬ್ಬೂರು  ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಉತ್ತರ ಕರ್ನಾಟಕದಲ್ಲಿ ಬಲಿಷ್ಠ ಸಂಘಟನೆಗಾರ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಗಳು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಸಮುದಾಯಕ್ಕಾಗಿ ಹಗಲು ರಾತ್ರಿ ದುಡಿಯುವ ಶ್ರಮ ಜೀವಿಗಳಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದಾರೆ.ಲೋಕಸಭಾ ಚುನಾವಣೆ ದೃಷ್ಟಿಯಿಂದ  ಯುವಕರಿಗೆ ಸ್ಥಾನ ಕೊಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕುರುಬ ಸಮುದಾಯಕ್ಕೆ ಹಾಗೂ ಕುರಿಗಾರರಿಗೆ ಅನುಕೂಲವಾಗುತ್ತದೆ ಎಂದು  ತಿಳಿಸಿದ್ದಾರೆ.

Leave a Reply

Your email address will not be published. Required fields are marked *