ದಸಂಸಮಿತಿಯಿಂದ ಸಚಿವರಿಗೆ ಸನ್ಮಾನ : ಕೋಮುಗಲಭೆ ಸೃಷ್ಟಿಸುವುದೇ ಬಿಜೆಪಿ ಸಾಧನೆ | ಕ್ಷೇತ್ರದ ಅಭಿವೃದ್ಧಿಗೆ ಬದ್ಧ

ಶಹಾಪುರ : ಅಧಿಕಾರದಾಸೆಯಿಂದ ಮಾತಿನ ಮೂಲಕ ಗಮನಸೆಳೆದು  9 ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಪಕ್ಷದ ಸಾಧನೆ ಶೂನ್ಯ. ಕೋಮುಗಲಭೆ ಸೃಷ್ಟಿಸುವುದೇ ಇವರ ಸಾಧನೆಯಾಗಿದೆ. ಅಧಿಕಾರಕ್ಕಾಗಿ ತಾವು ನೀಡಿದ ಭರವಸೆಗಳನ್ನು ಜಾರಿಗೆ ತರಲಾಗಲಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕರ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿ, ಅಧಿಕಾರ ದಕ್ಕಿಸಿಕೊಂಡ ಬಿಜೆಪಿ ಸರ್ಕಾರ ಇದುವರೆಗೂ ಒಂದು ರೂಪಾಯಿ ಕೂಡ ಹಾಕಿಲ್ಲ ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಪುರ  ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ನಗರದ ಪ್ರಥಮ ದರ್ಜೆ ಕಾಲೇಜಿನ ಡಾ. ಬಿಆರ್. ಅಂಬೇಡ್ಕರ್ ಆವರಣದಲ್ಲಿ ನಡೆದ ಸಚಿವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ. ಶಹಾಪುರ ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ಧ. 70 ವರ್ಷದ ಕಾಂಗ್ರೆಸ್ ಪಕ್ಷ ವನ್ನು ಟೀಕಿಸುವ ಬಿಜೆಪಿಯವರು ಇಂದು ಒಂಬತ್ತು ವರ್ಷಗಳ ಕಾಲ ನಿಮ್ಮ ಆಡಳಿತದ ಸಾಧನೆ ಏನು ಎಂದು ಪ್ರಶ್ನಿಸಿದರು. ದೇಶದಲ್ಲಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವುದು, ಕೋಮುಗಲಭೆ ಸೃಷ್ಟಿಸುವುದು, ಶಾಂತಿ ಭಂಗ ತರುವಂತಹ ಘಟನೆಗಳೇ ಕೇಂದ್ರ ಸರ್ಕಾರದ ಸಾಧನೆಗಳಾಗಿವೆ. ದೇಶ ಆರ್ಥಿಕವಾಗಿ ಅದೋಗತಿಗೆ ಸಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳುಗಳಾಗಿವೆ. ನಾವು ಕೊಟ್ಟ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದೇವೆ. ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ ಗಳಂತಹ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ 371 ಜೆ ಕಲಂನಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರಾಂತಿ ಮಾಡಲಾಗಿದೆ. ಪ್ರತಿಯೊಂದು ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ 340 ಬಸ್ ಖರೀದಿ ಮಾಡಿಕೊಂಡು. ಈ ಭಾಗದ ಸಾರಿಗೆ ಸಂಪರ್ಕಕ್ಕೆ ಅನೂಕೂಲ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಜಿಪಂ. ಮಾಜಿ ಸದಸ್ಯರಾದ, ವಿನೋಧಗೌಡ ಮಾಲಿ ಪಾಟೀಲ್. ಜಿಲ್ಲಾ ಸಮನ್ವಯ ಅಧಿಕಾರಿ  ಸುರಯ್ಯಬೇಗಂ, ಡಿವೈಸ್ಪಿ ಇನಾಮದಾರ. ಕಸಾಪ ಅಧ್ಯಕ್ಷರಾದ  ರವಿಂದ್ರನಾಥ ಹೊಸಮನಿ,  ನೀಲಕಂಠ ಬಡಿಗೇರ ನಾಗಣ್ಣ ಬಡಿಗೇರ. ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಎಸ್ಡಿಪಿಐ ಮುಖಂಡರಾದ ಸೈಯದ್ ಕಾಲೀದ್. ರಾಮಣ್ಣ ಸಾಧ್ಯಾಪುರ. ನಗರಸಭೆ ಸದಸ್ಯರದ ಶಿವುಕುಮಾರ ತಳವಾರ, ಮಹಾದೇವ ದಿಗ್ಗಿ,ಜಿಲ್ಲಾ ಕಾಂಗ್ರೆಸ್ ವಕ್ತಾರರಾದ, ಮಲ್ಲಪ್ಪ ಉಳಂಡಗೇರಿ ಗೋಗಿ, ನಿಜಗುಣ ದೊರನಳ್ಳಿ,ಸೇರಿದಂತೆ ಅನೇಕ ದಲಿತ ಮುಖಂಡರು ಪಾಲ್ಗೊಂಡಿದ್ದರು. ಶರಣು ದೊರನಹಳ್ಳಿ, ಪ್ರಸ್ತಾಪಿಕವಾಗಿ ಮಾತನಾಡಿದರು. ವಿಶ್ವ ನಾಟೇಕರ್ ನಿರೂಪಿಸಿದರು.

About The Author