ವಡಗೇರಾ ಪಟ್ಟಣದ ಅಭಿವೃದ್ಧಿಗೆ ಸದಾ ಬದ್ಧ ಶಾಸಕ ತುನ್ನೂರ

ವಡಗೇರಾ : ಪಟ್ಟಣದ ಸರ್ವಾಂಗೀಣ‌ ಅಭಿವೃದ್ಧಿಗೆ ಸದಾ ಬದ್ಧ ಎಂದು ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಾರೆಡ್ಡಿ ತುನ್ನೂರು ಹೇಳಿದರು. ಸಾರ್ವಜನಿಕರ ಕುಂದು ಕೊರತೆಗಳ ಹವಾಲು ಕುರಿತು ಪಟ್ಟಣದ ಅಂಬಾಮಹೇಶ್ವರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ವ್ಯಯವಾಗುತ್ತಿದ್ದು ಇದರಿಂದ ಸ್ವಲ್ಪ ಅಭಿವೃದ್ದಿಗೆ ಹಣ ಮೀಸಲಿಡಲು ಆಗುತ್ತಿಲ್ಲ. ಮುಂದಿನ ಬಜೆಟ್ ನಲ್ಲಿ ನೂತನ ತಾಲೂಕಿಗೆ ಹೆಚ್ಚಿನ ಅನುದಾನ ಮೀಸಲಿರಿಸಿ ನೂತನ ತಾಲೂಕಿಗೆ ಸಂಬಂಧಿಸಿದ ತಾಲೂಕು ಕಚೇರಿಗಳು ಶಾಲಾ ಕಾಲೇಜುಗಳು ಆಸ್ಪತ್ರೆ ಮತ್ತು ವಡಗೇರಾ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜು ಇನ್ನಿತರ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುವುದರ ಜೊತೆಗೆ ಪಟ್ಟಣದ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದೇನೆ.ಎಲ್ಲರ ಸಹಕಾರದ ಅವಶ್ಯಕತೆ ಇದೆ ಎಂದು ಹೇಳಿದರು.ಪಟ್ಟಣದಲ್ಲಿರುವ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ತಾಲೂಕು ಕಚೇರಿಗಳನ್ನು ಆರಂಭಿಸುವಂತೆ ವಿವಿಧ ಸಂಘಟನೆಯ ಮುಖಂಡರು ಶಾಸಕರಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯತ ಅಧ್ಯಕ್ಷರಾದ ಅಶೋಕ ಸಾಹು ಕರಣಗಿ, ಉಪಾಧ್ಯಕ್ಷೆ ರಂಗಮ ಹುಲಿ, ತಹಸಿಲ್ದಾರ್ ಹಲೀಮಾ ಬೇಗಂ, ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ.ಕ್ಷೇತ್ರ ಶಿಕ್ಷಣಾಧಿಕಾರಿ,ತಾಲೂಕು ಆರೋಗ್ಯ ಅಧಿಕಾರಿ ರಮೇಶ್ ಗುತ್ತೇದಾರ.ಕೃಷಿ ಅಧಿಕಾರಿ ಗಣಪತಿ ಚವಾಣ,ಜೆಇ ಶರಣಪ್ಪ ನಾಯ್ಕಲ್
ಬಸವರಾಜ ಐರೆಡ್ಡಿ,ಪಿಡಿಓ ಮಲ್ಲಿಕಾರ್ಜುನ ಗಿರಿ, ಕಂದಾಯ ಇಲಾಖೆಯ ಸಂಜಿವ ಕುಮಾರ್ ಕಾವಲಿ,ಸಿದ್ದನಗೌಡ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೇಪ್ಪ ಬಿಳಾರ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಾಂತರೆಡ್ಡಿ ದೇಸಾಯಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಬಾಶುಮಿಯ ನಾಯ್ಕೋಡಿ, ಬಸುಗೌಡ ಬಿಳಾರ,ಸಾಬಣ್ಣ ಸಿದ್ದಿಕಿ, ಮಲ್ಲಯ್ಯ ಮುಸ್ತಾಜೀರ,ಸಂಗುಗೌಡ, ಬಸವರಾಜ್ ನೀಲಳ್ಳಿ, ಚಾಂದಸಾಬ್ ಮುಲ್ಲನೂರ್, ಹಣಮಂತರಾಯ ಜಡಿ, ಕರೀಂಸಾಬ, ಮೈನುದ್ದಿನ್ ದೇವದುರ್ಗ, ಶಿವರಾಜ ಬಾಗುರ, ಡಾ.ಗಾಳೆಪ್ಪ ಪೂಜಾರಿ, ಸೂಗಪ್ಪ ಸಾಹುಕಾರ,ಅಮಂಗಿ.ಶರಣು ಮಾತಪಳಿ,ಮಲ್ಲಪ್ಪ ಮಾಗನೂರು, ಮೈಬೂಬ್ ಖುರೇಶಿ, ದೇವಪ್ಪಗೌಡ ಚಿನ್ನಮ್ಮನೂರ, ರುಕ್ಮುದ್ದೀನ್ ದೇವದುರ್ಗ, ಬಸವರಾಜ್ ಗೊಂದೆನೂರ, ಪಟ್ಟಣದ ಮುಖಂಡರು ಕಾರ್ಯಕರ್ತರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

About The Author