ಸಮಾಜದ ಎಲ್ಲಾ ವರ್ಗದವರಿಗೂ ಶಿಕ್ಷಣ ತಲುಪಿದಾಗ ಮಾತ್ರ ದೇಶದ ಅಭಿವೃದ್ಧಿ : ದತ್ತಪಯ್ಯ ಸ್ವಾಮಿಗಳು

ಶಹಾಪುರ: ಸಮಾಜದ ಎಲ್ಲಾ ವರ್ಗದವರಿಗೂ ಶಿಕ್ಷಣ ತಲುಪಿದಾಗ ಮಾತ್ರ ದೇಶದ ಅಭಿವೃದ್ಧಿ ಎಂಬುದಕ್ಕೆ ಅರ್ಥಬರುತ್ತದೆ, ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೆ ದಿವ್ಯೌಷಧಿ ಎಂದು ಸಿಂಧಗಿಯ ಶ್ರೀ ಸದ್ಗುರು ಭೀಮಾಶಂಕರ ಸ್ವಾಮಿ ಸಂಸ್ಥಾನ ಮಠದ ಪೂಜ್ಯರಾದ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ತಿಳಿಸಿದರು.

ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಜ್ಞಾನಗಂಗೋತ್ರಿ ಶಾಲೆಗೆ ಭೇಟಿ ನೀಡಿ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಪೂಜ್ಯರು, ನೈತಿಕ ಧಾರ್ಮಿಕ ಉತ್ತಮ ಸಂಸ್ಕøತಿಯ ಮೌಲ್ಯವನ್ನು ವಿದ್ಯಾರ್ಥಿ ದೆಸೆಯಲ್ಲಿ ಮೂಡಿಸಬೇಕು. ಮನೆಯಲ್ಲಿ ಪಾಲಕರು, ಶಾಲೆಯಲ್ಲಿ ಶಿಕ್ಷಕರು ಸರಿಯಾದ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದಾಗ ಮಗು ಉತ್ತಮ ಪ್ರಜೆಯಾಗಿ ಬೆಳೆದು ಸಮಾಜಕ್ಕೆ ಒಳಿತನ್ನುಂಟು ಮಾಡುತ್ತಾನೆ ಎಂದ ಅವರು, ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ಸಾರ್ಥಕ ಪರಿಶ್ರಮ ಹಾಕಿ ಮುಂದೆ ಯಶಸ್ವಿಯಾಗಿರಿ ಎಂದರು ಈ ಸಂದರ್ಭದಲ್ಲಿ ಕಿರಣಭಟ್ ಜೋಶಿ, ಕೋನೇರಾಚಾರ್ಯ ಸಗರ, ಸಂಸ್ಥೆಯ ಅಧ್ಯಕ್ಷ ಮುರುಳಿಧರ ಸುಂಬಡ, ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *