ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ ರೋಚಕ

ಕಲ್ಬುರ್ಗಿ : ಹೈದರಾಬಾದ್ ಕರ್ನಾಟಕದ ಕೆಲವು ಪ್ರಾಂತ್ಯಗಳು ನಿಜಾಮನ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಹಲವಾರು ಹೋರಾಟಗಾರರು ತಮ್ಮ ಜೀವನವನ್ನೇ ಪಣಕಿಟ್ಟು ಹೋರಾಡಿದ್ದಾರೆ,ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಇತಿಹಾಸ ರೋಚಕವಾಗಿದೆ ಎಂದು ಕಲಬುರಗಿ ದಕ್ಷಿಣ ವಲಯದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಪದ್ಮಾವತಿ ಸೇವಾ ಸಂಸ್ಥೆ ಕಲ್ಬುರ್ಗಿ ವತಿಯಿಂದ ಹಮ್ಮಿಕೊಂಡಿರುವ ಹೈದರಾಬಾದ ಕರ್ನಾಟಕ ವಿಮೋಚನಾ ಹೋರಾಟಗಾರರಾದ ಅಚ್ಚಪ್ಪಗೌಡ ಸುಬೇದಾರ ಹಾಗೂ ಶರಣಗೌಡ ಇನಾಮದಾರ ಅವರ ಸ್ಮರಣಾರ್ಥವಾಗಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಲ್ಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ:ವಾಸುದೇವ್ ಸೇಡಂ ಮಾತನಾಡಿ ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟಗಾರರ ಆದರ್ಶ ತತ್ವಗಳು ಇಂದಿನ ಯುವಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿ ಅಚ್ಚಪ್ಪ ಗೌಡ ಸುಬೇದಾರ ಹಾಗೂ ಶರಣಗೌಡ ಇನಾಮದಾರರನ್ನು ಸ್ಮರಿಸಿ ಅವರ ಬದುಕು ಮತ್ತು ಹೋರಾಟದ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು.

ಹಿರಿಯ ವೈದ್ಯರಾದ ಡಾ: ಚಂದ್ರಶೇಖರ ಸುಬೇದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ವಿಜಯಕುಮಾರ ಇನಾಮದಾರ,ದೇವದುರ್ಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆಯ ಎಚ್.ಬಕಪ್ಪ,ಡಾ: ಭಾಗ್ಯಮ್ಮ ವೈಷ್ಣವಿ,ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು,ಪದ್ಮಾವತಿ ಸೇವಾ ಸಂಸ್ಥೆ ಅಧ್ಯಕ್ಷರಾದ ಅರುಂಧತಿ ಜೋಶಿ ಈ ಕಾರ್ಯಕ್ರಮದ ವೇದಿಕೆಯ ಮೇಲೆ ಉಪಸ್ಥಿತರಿದ್ದರು,

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲ್ಬುರ್ಗಿ ಇವರ ಪ್ರಾಯೋಜಿತ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅದರಲ್ಲಿ ವಿಶೇಷವಾಗಿ,ಆಕಾಶ್ ಖೂಬುಸಿಂಗ್ ಬೀದರ್ ತಂಡದಿಂದ ಸಮೂಹ ನೃತ್ಯ,ಬಸವರಾಜ ನಾಗಪ್ಪ ಹಲಗಿ ಯಾದಗಿರಿ ತಂಡದಿಂದ ಜಾನಪದ ಸಮೂಹ ನೃತ್ಯ,ವಿದ್ಯಾ ಮಂಗಳೂರು ಕೊಪ್ಪಳ ತಂಡದಿಂದ ಸಮೂಹ ನೃತ್ಯಗಳು ಜರಗಿದವು,ಮಹಮ್ಮದ್ ರಫಿ ಅವರ ಮಿಮಿಕ್ರಿ ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲಿಸಿತು.

About The Author