ಸಗರನಾಡು ಸಂಸ್ಥೆಯ ವಾರ್ಷಿಕೋತ್ಸವ | ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ : ಸಗರನಾಡು ಸೇವಾ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ : ಮರಿಗೌಡ ಹುಲ್ಕಲ್ 

ಸಗರನಾಡು ಸಂಸ್ಥೆಯ ವಾರ್ಷಿಕೋತ್ಸವ | ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ : ಸಗರನಾಡು ಸೇವಾ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ : ಮರಿಗೌಡ ಹುಲ್ಕಲ್ 

ಶಹಾಪುರ : ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಪ್ರದೇಶವಿದ್ದರೆ ಅದು  ಸಗರನಾಡು ಪ್ರದೇಶ. ಯುವ ಪೀಳಿಗೆ ಸಾಹಿತ್ಯ, ಸಂಗೀತ ಕಡೆಗೆ ಹೆಚ್ಚು ಒಲವು ,ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮರಿಗೌಡ ಹುಲ್ಕಲ್ ಹೇಳಿದರು. ಭೀಮರಾಯನಗುಡಿಯ ಭುವನೇಶ್ವರ ಸಾಂಸ್ಕೃತಿಕ ಭವನದಲ್ಲಿ ಸಗರನಾಡು ಸೇವಾ ಸಂಸ್ಥೆಯ ದ್ವೀತಿಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಶ ಎಷ್ಟೇ ಮುಂದುವರೆದರೂ ಸಹ ಮೌಢ್ಯ ನಮ್ಮನ್ನು ಕಾಡುತ್ತಿದೆ. ಅದರಿಂದ ಹೊರಬಂದು ವಿಚಾರವಂತಿಕೆ ತುಂಬಿ ಸಮಾಜದ ದೇಶದ ಭವಿಷ್ಯವನ್ನು ರೂಪಿಸುವ ಕೆಲಸ ಆಗಬೇಕಿದೆ. ನಾವೆಲ್ಲರೂ ಸುಖದ ಬೆನ್ನೇರಿದ ನಾಗರಿಕತೆಯಲ್ಲಿದ್ದೇವೆ. ಅದರಿಂದ ಹೊರಬರಬೇಕು ಎಂದು ಹೇಳಿದರು.

ಸಾಹಿತಿ ಸಿದ್ಧರಾಮ ಹೊನ್ಕಲ್ ಮಾತನಾಡಿ ಸಮಾಜದಲ್ಲಿ ಮಾನವ ಬದುಕಲು, ಬೆಳೆಯಲು ಎರಡು ಮುಖ್ಯ ವಿಚಾರಗಳ ಬಗ್ಗೆ ಚಿಂತಿಸಬೇಕು. ಯುವ ಜನರು ತಮ್ಮ ಭವಿಷ್ಯದ ನಿಟ್ಟಿನಲ್ಲಿ ಸುಂಸಕೃತ ಜೀವನ ಮೌಲ್ಯ ಬೆಳೆಸಿಕೊಳ್ಳುವುದು ಅಗತ್ಯ. ರನ್ನ ವ್ಯಾಸ, ಪಂಪ,ಕುಮಾರವ್ಯಾಸರು ರಚಿಸಿದ ಮಹಾಕಾವ್ಯಗಳಲ್ಲಿ ಅಪಾರ ಸೃಜನಾಶೀಲತೆ ಇದೆ ಎಂದು ಸಾಹಿತ್ಯದ ರುಚಿಯನ್ನು ಉಣಬಡಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಮಧುಮತಿ ಹೆಚ್.ಸಿಂಗೆ ಮತ್ತು ದೇಶಸೇವೆಯ ಕ್ಷೇತ್ರದಲ್ಲಿ ಅಮೋಘಸಿದ್ದಪ್ಪ ಬಾಗೇವಾಡಿಯನ್ನು ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಹಾಲುಮತ ಗುರುಪೀಠದ ಪೂಜ್ಯ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು, ಸುಕ್ಷೇತ್ರ ಮಹಲ್‌ರೋಜಾದ ಪೂಜ್ಯ ಮಲ್ಲಿಕಾರ್ಜುನ ಮುತ್ಯ, ಪರಮಾನಂದೇಶ್ವರ ದೇವಸ್ಥಾನದ ಪೂಜ್ಯ ಶಂಕರಲಿಂಗ ಶರಣರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಭೀಮನಗೌಡ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾಂಗ್ರೇಸ್ ಜಿಲ್ಲಾ ವಕ್ತರರಾದ ಮಲ್ಲಣ್ಣ ಉಳ್ಳಂಡಗೇರಿ, ಡಾ.ಶರಣು ಗದ್ದುಗೆ, ನಿವೃತ್ತ ಪ್ರಾಂಶುಪಾಲರಾದ ಚೆನ್ನರೆಡ್ಡಿ ತಂಗಡಿಗಿ, ಭೀಮಣ್ಣ ಶಖಾಪುರ, ರವಿಂದ್ರನಾಥ ಹೊಸ್ಮನಿ, ಶಿವುಕುಮಾರ ತಳವಾರ, ದೇವಿಂದ್ರಪ್ಪ ಮೇಟಿ, ಮಲ್ಲಿಕ್ ಚಾಮನಾಳ, ಶರಣು ದೊರನಹಳ್ಳಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಮಹಿಳೆಯರು ಇದ್ದರು.

ಸಂಸ್ಥೆಯ ವತಿಯಿಂದ ಪ್ರತಿವರ್ಷ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದೆ. ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರಿತಿಸಿ ಸನ್ಮಾನಿಸಿ ಮತ್ತಷ್ಟು ಪ್ರೋತ್ಸಾಹಿಸುವ ಕೆಲಸ ಸಂಸ್ಥೆಯಿಂದ ಮಾಡಲಾಗುತ್ತಿದೆ. ಕಲಾವಿದರಿಗೆ, ಶಿಕ್ಷಣ ಪ್ರೇಮಿಗಳಿಗೆ, ಸೂಕ್ತ ವೇದಿಕೆಯನ್ನು ಒದಗಿಸಿಕೊಟ್ಟು ಪ್ರೋತ್ಸಾಹಿಸುತ್ತಿರುವ ಸಗರನಾಡು ಸೇವಾ ಸಂಸ್ಥೆ ಇನ್ನೂ ಹೆಮ್ಮರವಾಗಿ ಬೆಳೆಯಲಿ. ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ.
ವಿಶ್ವನಾಥರೆಡ್ಡಿ ದರ್ಶನಾಪುರ
ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ

About The Author