ಮಹಾಶೈವ ಪೀಠದಲ್ಲಿ 62 ನೆಯ ಶಿವೋಪಶಮನ ಕಾರ್ಯ : ವಿಶ್ವೇಶ್ವರ ಶಿವನ ಅನುಗ್ರಹದಿಂದ ಎಡರು ತೊಡರುಗಳನ್ನೆಲ್ಲ ದಾಟಿ ಜಾಗೀರಜಾಡಲದಿನ್ನಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದರು ಮಾದೇವಮ್ಮ ಮೇಟಿ

Raichur ದೇವದುರ್ಗ ( ಗಬ್ಬೂರು,ಸೆಪ್ಟೆಂಬರ್ 17,2023 ) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಸೆಪ್ಟೆಂಬರ್ 17 ರ ಆದಿತ್ಯವಾರದಂದು 62 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ವಿಶ್ವನಿಯಾಮಕ ವಿಶ್ವೇಶ್ವರ ಶಿವನ ಅನುಗ್ರಹದಿಂದ ಅರಕೇರಾ ತಾಲೂಕಿನ ಜಾಗೀರಜಾಡಲದಿನ್ನಿ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಮಾದೇವಿ ನರಸಪ್ಪ ಮೇಟಿ ಜಾಗಟಗಲ್ ಅವರು ಅವಿರೋಧವಾಗಿ ಆಯ್ಕೆಯಾಗಿ ವಿಶ್ವೇಶ್ವರ ಶಿವನಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಮರ್ಪಿಸಿದ್ದು ಇಂದಿನ ಶಿವೋಪಶಮನದ ವಿಶೇಷವಾಗಿತ್ತು..ಅರಕೇರಾ ತಾಲೂಕಿನ‌ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನವು ಅನುಸೂಚಿತ ಪಂಗಡದ ಮಹಿಳೆಗೆ ಮೀಸಲಾಗಿತ್ತು.ಮಲ್ಲು ಮೇಟಿ ಅವರು ಮಹಾಶೈವ ಧರ್ಮಪೀಠದ ನಿಷ್ಠಾವಂತ ಭಕ್ತರಲ್ಲೊಬ್ಬರಲ್ಲದೆ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರ ವಿದ್ಯಾರ್ಥಿ ಶಿಷ್ಯರೂ ಹೌದು. ಜಾಗರಜಾಡಲದಿನ್ನಿ ಗ್ರಾಮಪಂಚಾಯತಿಯ ಅಧ್ಯಕ್ಷ ಸ್ಥಾನವು ಅನುಸೂಚಿತ ಪಂಗಡದ ಮಹಿಳೆಗೆ ಮೀಸಲಾದುದರಿಂದ ತಮ್ಮ ತಾಯಿ ಮಾದೇವಮ್ಮ ನರಸಪ್ಪ ಮೇಟಿಯವರನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರನ್ನಾಗಿ ಮಾಡಲು ಇಚ್ಛಿಸಿ ವಿಶ್ವೇಶ್ವರನ ಅನುಗ್ರಹಪಡೆಯಲು ಮಹಾಶೈವ ಧರ್ಮಪೀಠದಲ್ಲಿ ದಿನಾಂಕ 09.07.2023 ರಂದು ನಡೆದ 53 ನೆಯ ‘ ಶಿವೋಪಶಮನ ಕಾರ್ಯ’ ಕ್ಕೆ ಬಂದಿದ್ದರು.ಮಾದೇವಮ್ಮ ಮೇಟಿಯವರ ಪರವಾಗಿ ವಿಶ್ವೇಶ್ವರ ಶಿವನನ್ನು ಪ್ರಾರ್ಥಿಸಿದ್ದ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರು ‘ ನಿಮ್ಮ ತಾಯಿಯವರು ಅಧ್ಯಕ್ಷರಾಗುವುದು ಸುನಿಶ್ಚಿತ,ಆದರೆ ಅಡೆತಡೆಗಳಿವೆ’ ಎಂದು ಶಿವಾಭಯ ಕರುಣಿಸಿದ್ದರು.ಪೀಠಾಧ್ಯಕ್ಷರ ಮಾತಿನಂತೆ ಮಲ್ಲುಮೇಟಿಯವರ ವಿರೋಧಿಗಳು ಮೀಸಲಾತಿಯನ್ನು ಪ್ರಶ್ನಿಸಿ, ಎರಡುಬಾರಿ ಕಲ್ಬುರ್ಗಿ ಹೈಕೋರ್ಟ್ ಪೀಠದ ಮೆಟ್ಟಿಲೇರಿದ್ದರು.ಎರಡೂ ಬಾರಿಯೂ ಮಾದೇವಮ್ಮ ಮೇಟಿಯವರಿಗೆ ಗೆಲುವಾಗಿ ಮೊನ್ನೆ ಸೆಪ್ಟೆಂಬರ್ 15 ರಂದು ಮಾದೇವಮ್ಮ ನರಸಪ್ಪ ಮೇಟಿಯವರು ಜಾಗೀರ ಜಾಡಲದಿನ್ನಿಯ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಆ ಸಂತಸದಲ್ಲಿ ಮಾದೇವಮ್ಮ ಮೇಟಿಯವರು ಇಂದು ಕುಟುಂಬ ಸಮೇತ ಶ್ರೀಕ್ಷೇತ್ರ ಕೈಲಾಸಕ್ಕೆ ಆಗಮಿಸಿ ಕ್ಷೇತ್ರನಾಥ ವಿಶ್ವೇಶ್ವರ ಶಿವ ಹಾಗೂ ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿ ಮತ್ತು ಕ್ಷೇತ್ರರಕ್ಷಕಿ ಮಹಾಕಾಳಿದೇವಿಯರಿಗೆ ಕೃತಜ್ಞತಾಪೂರ್ವಕ ಭಕ್ತಿಪೂರ್ವಕ ಪ್ರಣಾಮಗಳನ್ನು ಸಮರ್ಪಿಸಿ ಪೀಠಾಧ್ಯಕ್ಷರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಮಾದೇವಮ್ಮ ನರಸಪ್ಪ ಮೇಟಿಯವರನ್ನು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಆಶೀರ್ವದಿಸಿ ‘ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಜನಪರ ಕೆಲಸ ಕಾರ್ಯಗಳನ್ನು ಮಾಡಿ’ ಎಂದು ಸಲಹೆ ನೀಡಿದರು.

ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಬಂದಿದ್ದ ನೂರಾರು ಜನ ಭಕ್ತರುಗಳು ಇಂದಿನ ಶಿವೋಪಶಮನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಶರಣಗೌಡ ಹೊನ್ನಟಗಿ,ಶಿವಯ್ಯಸ್ವಾಮಿ ಮಠಪತಿ, ಗಬ್ಬೂರಿನ ಗಾಯತ್ರಿಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ,ಮೃತ್ಯುಂಜಯ ಯಾದವ, ಸಿದ್ರಾಮಯ್ಯ ಸ್ವಾಮಿ ಹಳ್ಳಿ,ಬೆಟ್ಟಪ್ಪ ಗದಾರ,ಪತ್ರಕರ್ತರುಗಳಾದ ಬಸವರಾಜ ಭೋಗಾವತಿ,ಏಳುಬಾವೆಪ್ಪ ಗೌಡ,ಯಲ್ಲಪ್ಪ ಕರಿಗಾರ,ವಿಶ್ವನಾಥ,ಮನೋಜಕುಮಾರ ಧರಣಿ,ಶಿವಕುಮಾರ ವಸ್ತಾರ ಮತ್ತು ಮಹಾಶೈವ ಧರ್ಮಪೀಠದ ಪ್ರಸರಾಣಾಧಿಕಾರಿ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

 

About The Author