ದಿಗ್ಗಿ ಗ್ರಾಮದಲ್ಲಿ  ಸ್ವಚ್ಛತೆಯೇ ಸೇವೆ ಪಾಕ್ಷಿಕ  ಕಾರ್ಯಕ್ರಮಕ್ಕೆ ಸಿಇಓರಿಂದ ಚಾಲನೆ

ಶಹಾಪುರ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಜಿಪಂ ಯಾದಗಿರಿ, ತಾಪಂ ಶಹಾಪುರ ಹಾಗೂ ಗ್ರಾಪಂ ಹೋತಪೇಟ ಇವರ ಸಹಯೋಗದಲ್ಲಿ  ದಿಗ್ಗಿ ಗ್ರಾಮದಲ್ಲಿ ಹಮ್ಮಿಕೊಂಡ  ಸ್ವಚ್ಛತೆಯೇ ಸೇವೆ ಪಾಕ್ಷಿಕ ಆಂದೋಲನ ಕಾರ್ಯಕ್ರಮಕ್ಕೆ ಯಾದಗಿರಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗರಿಮಾ ಪನ್ವಾರ  ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು
ಸ್ವಚ್ಛತೆಯೇ ಸೇವಾ ವಿಶೇಷ ಆಂದೋಲನದ ಘೋಷಣೆಯಡಿ ಕಸಮುಕ್ತ ತ್ಯಾಜ್ಯ ಮುಕ್ತ ಭಾರತವೆಂದು ಘೋಷಿಸಲು  ಜಿಲ್ಲೆಯ ಎಲ್ಲಾ ಗ್ರಾಪಂ ಗ್ರಾಮಗಳಲ್ಲಿ ಸೆ.15ರಿಂದ ಅ.02 ರವರೆಗೆ ಜಿಲ್ಲೆಯ ವಿವಿಧ ಗ್ರಾಪಂ.ಗಳಲ್ಲಿ, ಸರಕಾರೇತರ ಸಂಘ-ಸಂಸ್ಥೆಗಳ ಮೂಲಕ ಸ್ವಚ್ಛತೆಗಾಗಿ ಸ್ವಯಂ ಪ್ರೇರಿತವಾಗಿ ಶ್ರಮದಾನ, ಕಸ ಸಂಗ್ರಹ, ತ್ಯಾಜ್ಯ ವಿಂಗಡಣೆ, ಶಾಲೆಯಲ್ಲಿ ಮಕ್ಕಳಿಗೆ ರಸಪ್ರಶ್ನೆ, ಜಾಥಾ, ಜಲಮೂಲಗಳ ಸ್ವಚ್ಛತೆ, ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಂಡು ಗ್ರಾಮೀಣ ಪ್ರದೇಶದಲ್ಲಿ  ನೈರ್ಮಲ್ಯ ಕಾಪಾಡಲು ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕಾರ್ಯನಿರ್ವಾಹಕ ಅಧಿಕಾರಿಗಳಾದ, ಸೋಮಶೇಖರ ಬಿರೆದಾರ ಮಾತನಾಡಿ ಪ್ರತಿಯೊಬ್ಬರು ಸ್ವಚ್ಛತೆಗೆ ಸಹಕರಿಸಿ ಆರೋಗ್ಯ ಗ್ರಾಮ ಮಾಡಿರಿ ಎಂದರು.ಗುರುನಾಥ ಗೌಡಪ್ಪನೋರ್, ಮುಖ್ಯ ಯೋಜನಾಧಿಕಾರಿಗಳು ಸ್ವಭಾಮಿ ನೋಡಲ್ ಅಧಿಕಾರಿಗಳು, ಸಭೆಯಲ್ಲಿದ್ದ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು.

ಹೋತಪೇಟ ಗ್ರಾಪಂ ಅಧ್ಯಕ್ಷರಾದ ಅಂಬ್ಲಮ್ಮ  ಮರೆಪ್ಪ ದೋರೆ,ಗ್ರಾ.ಪಂ.ಸದಸ್ಯರು,  ಸಹಾಯಕ ನಿರ್ದೇಶಕರು, ಸ್ವ.ಭಾ.ಮಿ ಸಮಾಲೋಚಕರು ಶಿವಕುಮಾರ್, ಗ್ರಾ.ಪಂ.ಅಧಿಕಾರಿ, ಸಿಬ್ಬಂದಿಯವರು, ಎನ್ ಆರ್ ಎಲ್ ಎಮ್ ಸಿಬ್ಬಂದಿ, ಗ್ರಾಮಸ್ಥರು , ಆಶಾ- ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಮಕ್ಕಳು  ಭಾಗವಹಿಸಿದ್ದರು.

About The Author