ಮಹಾಶೈವ ಧರ್ಮಪೀಠಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಶಂಕರ ಭೇಟಿ

ರಾಯಚೂರು: (ಗಬ್ಬೂರು ಸೆಪ್ಟೆಂಬರ್ 15,2023) : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಶಿವಲೀಲಾ ಕ್ಷೇತ್ರ ಮಹಾಶೈವ ಧರ್ಮಪೀಠಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಶಂಕರ ಅವರು ಭೇಟಿ ನೀಡಿ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿಯರ ಆಶೀರ್ವಾದ ಪಡೆದು ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ಅವರೊಂದಿಗೆ ಕೆಲಹೊತ್ತು ಸಮಾಲೋಚಿಸಿದರು.ನಿವೃತ್ತ ಐಎಎಸ್ ಅಧಿಕಾರಿ ಶಂಕರ ಅವರ ಪುತ್ರರಾಗಿರುವ ನಿಖಿಲ್ ಶಂಕರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಕಟವರ್ತಿಗಳಲ್ಲೊಬ್ಬರಾಗಿದ್ದು 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಆಗಿದ್ದರು.

ತನ್ನನ್ನು ನಂಬಿ ಬರುವ ರಾಜಕಾರಣಿ ಭಕ್ತರುಗಳಿಗಳಿಗೆ ನಿಶ್ಚಿತ ರಾಜಕೀಯ ಭವಿಷ್ಯವನ್ನು ಅನುಗ್ರಹಿಸುತ್ತಾ ‘ವಿಜಯದುರ್ಗಾ’ಎಂದು ಬಿರುದುಗೊಂಡಿರುವ ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿಯು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಮೂಲಕ ತನ್ನ ವಿಜಯದುರ್ಗೆಯ ಲೀಲೆಯನ್ನಾಡಿ ರಾಜಕಾರಣಿಗಳಿಗೆ ನಿಶ್ಚಿತಗೆಲುವಿನ ರಾಜಕೀಯ ಅಭಯ ನೀಡಿ,ಉದ್ಧರಿಸುತ್ತಿರುವುದನ್ನರಿತು ಈ ದಿನ ಮಹಾಶೈವ ಧರ್ಮಪೀಠಕ್ಕೆ ಭೇಟಿ ನೀಡಿ,ಪೀಠಾಧ್ಯಕ್ಷರೊಂದಿಗೆ ಚರ್ಚಿಸಿದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ನಿಖಿಲ್ ಶಂಕರ ಅವರನ್ನು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.ಬೆಂಗಳೂರಿನ ಭಾನುಪ್ರಕಾಶ,ಸುರಪುರದ ಬಾಧ್ಯಾಪುರದ ಬೀರಲಿಂಗ ಹಾಗೂ ವಿಜಯಕುಮಾರ ನಿಖಿಲ್ ಶಂಕರ ಜೊತೆಗಿದ್ದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ, ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಚೆನ್ನಪ್ಪಗೌಡ ಮಾಲಿಪಾಟೀಲ್,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ,ಮೃತ್ಯುಂಜಯ ಯಾದವ, ಬಸವರಾಜ ಹರವಿ,ಮಹಾಶೈವ ಧರ್ಮಪೀಠದ ಪ್ರಸರಾಣಾಧಿಕಾರಿ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.