ಶಹಾಪುರದಲ್ಲಿ ಐಸಿಸ್ ಉಗ್ರರಿಗೆ ನಂಟು, ಶಂಕೆ ! ಎನ್ಐಎ ತಂಡದಿಂದ ತಪಾಸಣೆ

NIA ಅಧಿಕಾರಿಗಳ ತಂಡ

ಶಹಾಪುರ : ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ  ಐಸಿಸಿ  ಉಗ್ರನನ್ನು ಎನ್ಐಎ ತಂಡ ಬಂಧಿಸಿ ವಿಚಾರಣೆ ಕೈಗೊಂಡಿತು. ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಖಲೀದ ಅಹ್ಮದ್  ಎನ್ನುವಾತನಿಗೆ ಇನ್ಸ್ಟಾಗ್ರಾಮ್ ನಲ್ಲಿ ನಂಟು ಇರುವ ಸಂಶಯದಿಂದ ನಗರದ ಖಲಈದ್ ಅಹ್ಮದ್ ಮನೆಗೆ ಎನ್ಐಎ ತಂಡ ಭೇಟಿ ನೀಡಿ  ತೀವ್ರ ವಿಚಾರಣೆ ನಡೆಸಿತು.

ಖಲೀದ್ ಅಹ್ಮದ

ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ನಾಲ್ಕು ಜನರ ಎನ್ಐಎ ತಂಡ ತೆಲಂಗಾಣ ಪಾಸಿಂಗ್ ಇರುವ ಗಾಡಿಯಲ್ಲಿ ಆಗಮಿಸ ಖಲೀದ್ ಅಹ್ಮದ್ ಮತ್ತು ಆತನ ತಂದೆಯಾದ ಅಬ್ದುಲ್ ಸಲೀಂ ನನ್ನು ನಾಲ್ಕು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿರುವುದು ಎಂದು ತಿಳಿದುಬಂದಿದೆ. ಮನೆಯವರಿಂದ ಎರಡು ಸೆಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದು, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ಗಳನ್ನು ಕೂಡ ಪರಿಶೀಲಿಸಿದರು. ಸಪ್ಟೆಂಬರ್ 20ರಂದು ಎನ್ಐಎ ಕಚೇರಿ ರಾಂಚಿಯಲ್ಲಿಗೆ ಆಗಮಿಸುವಂತೆ ಸೂಚಿಸಿದೆ ಎಂದು ಹೇಳಲಾಗಿದೆ.

ಶಹಾಪುರದ ಹಳಪೇಟೆಯಲ್ಲಿರುವ ಖಲೀದ್ ಅಹ್ಮದನ ಮನೆ

ಈ ಸಂದರ್ಭದಲ್ಲಿ ಖಲೀದ್ ಅಹ್ಮದ್ ಮಾತನಾಡಿ ನಾನು ಇನ್ಸ್ಟಾಗ್ರಾಮ್ ನಲ್ಲಿ ಗೆಳೆತನವನ್ನು ಹೊಂದಿದ್ದೇನೆಯೆ ಹೊರತು ಐಸಿಸಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾನೆ. ಆತನ ತಂದೆಯವರು ಮಾತನಾಡಿ 5 ರಿಂದ 6 ಜನ ಆಗಮಿಸಿ ಎನ್ಐಎ ತಂಡ ಎಂದು ಹೇಳಿಕೊಂಡು ಬೆಳಿಗ್ಗೆ ನಾಲ್ಕು ಗಂಟೆಗೆ ಆಗಮಿಸಿದ್ದು 4 ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು ಎಂದು ತಿಳಿಸಿದರು.

About The Author