ಸೇ.16ಕ್ಕೆ ತಿಂತಿಣಿಯ ಕಾಗಿನೆಲೆ ಕನಕ ಗುರುಪೀಠದಲ್ಲಿ ಪೂರ್ವಭಾವಿ ಸಭೆ

ಯಾದಗಿರಿ : ಕರ್ನಾಟಕ ಪ್ರದೇಶ ಕುರುಬ ಸಂಘದಿಂದ ಸೆ.16 ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ದೇವದುರ್ಗ ತಾಲೂಕಿನ ತಿಂತಿಣಿ ಬ್ರೀಡ್ಜನ ಕಾಗಿನೆಲೆ ಕನಕ ಗುರುಪೀಠದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದ್ದು, ಕುರುಬ ಸಮಾಜದ ಜಿಲ್ಲೆಯ ಎಲ್ಲರು ಭಾಗವಹಿಸಲು ಯಾದಗಿರಿ ಜಿಲ್ಲಾಧ್ಯಕ್ಷರಾದ ಮಲ್ಲಣ್ಣ ಐಕೂರ ಪ್ರಕಟಣೆಯಲ್ಲಿ
ತಿಳಿಸಿದರು.

ಅಗಸ್ಟ್ 3 ರಂದು ಬೆಳಗಾವಿಯಲ್ಲಿ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ 9ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ಕುರುಬರ ರಾಷ್ಟ್ರೀಯ ಬೃಹತ್ ಜಾಗೃತಿ ಸಮಾವೇಶ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಈ ಕುರಿತು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.

ತಿಂಥಣಿಯ ಕನಕ ಗುರು ಪೀಠದ ಪೂಜ್ಯರಾದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಶೆಫರ್ಡ್ ಇಂಡಿಯಾದ ಇಂಟರ್ನ್ಯಾಷನಲ್ ಅಧ್ಯಕ್ಷರು ಮಾಜಿ ಸಚಿವರಾದ ಎಚ್. ವಿಶ್ವನಾಥ ಹಾಗೂ ಉಪಾಧ್ಯಕ್ಷ ಮಾಜಿ ಸಚಿವರಾದ ಎಚ್.ಎಮ್. ರೇವಣ್ಣ ಸಮಾಜದ ರಾಜ್ಯಮಟ್ಟದ ಪ್ರಮುಖ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕಲಬುರಗಿ ವಿಭಾಗದ ಯಾದಗಿರಿ ಬೀದರ್ ಬಳ್ಳಾರಿ ರಾಯಚೂರು ಕೊಪ್ಪಳ ವಿಜಯಪುರ ಕಲಬುರಗಿ ಜಿಲ್ಲೆಯ ಎಲ್ಲಾ ಪಕ್ಷದ ಮುಖಂಡರು ಆಗಮಿಸಲಿದ್ದು ಯಾದಗಿರಿಯ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಘಟಕದ ಮಹಿಳಾ ಪದಾಧಿಕಾರಿಗಳು ನೌಕರರು ಪದಾಧಿಕಾರಿಗಳು ಸಮಾಜದ ಬಂಧುಗಳು ಈ ಪೂರ್ವಭಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *