ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ : ನಮ್ಮ ದೇಶ ಸಂಸ್ಕೃತಿ ಧರ್ಮದ ರಕ್ಷಣೆಯ ಸಂಕಲ್ಪ : ಅಮೀನರೆಡ್ಡಿ ಯಾಳಗಿ

ಶಹಾಪುರದ ಹಳೆಪೇಟೆ ವಾರ್ಡ್ ೧೯ರಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಬಿಜೆಪಿ ಹಿರಿಯ ಮುಖಂಡ ಅಮೀನರೆಡ್ಡಿ ಯಾಳಗಿ ಚಾಲನೆ ನೀಡಿದರು, ಯುವಮುಖಂಡ ಡಾ.ಶಿವರಾಜ ದೇಶಮುಖ, ಮಲ್ಲಿಕಾರ್ಜುನ ಚಿಲ್ಲಾಳ, ಅಡಿವೆಪ್ಪ ಜಾಕಾ ಇದ್ದರು.

ಶಹಾಪುರ: ನಮ್ಮ ದೇಶ, ಸಂಸ್ಕೃತಿ, ಧರ್ಮದ, ರಕ್ಷಣೆ ನಮ್ಮೆಲ್ಲರ ಮೊದಲ ಆದ್ಯತೆಯೆಂದು ಬಿಜೆಪಿ ಹಿರಿಯ ಮುಖಂಡ ಅಮೀನರೆಡ್ಡಿ ಯಾಳಗಿ ತಿಳಿಸಿದರು.ನಗರದ ಹಳೆಪೇಟೆಯ ವಾರ್ಡ್ ೧೯ರಲ್ಲಿ ನನ್ನಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ನಾನಾ ಕಡೆಗಳಿಂದ ಪುಣ್ಯಮಯವಾದ ಮಣ್ಣನ್ನು ಸಂಗ್ರಹಿಸಿ, ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಕಳಿಸುವ ಮೂಲಕ, ಈ ದೇಶದ ಪೂಜ್ಯ ಭಾವನೆಯ ಮಣ್ಣಿನ ಘನತೆ ಹೆಚ್ಚಿಸುವುದರ ಜೊತೆಗೆ ಈ ನೆಲದ ಸಂಸ್ಕೃತಿಯ ರಕ್ಷಣೆ ಮಾಡುವುದು ಮುಖ್ಯವಾಗಿದೆ, ೧೩೦ ಕೋಟಿ ಜನರಿಂದ ಕೂಡಿದ ರಾಷ್ಟ್ರವನ್ನು ಮುನ್ನಡೆಸುವ ಅತ್ಯುತ್ತಮ ಗುಣಮಟ್ಟದ ನಾಯಕತ್ವ ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಪರಂ ವೈಭವಯುತ ಭಾರತದ ಸಂಕಲ್ಪಕ್ಕೆ ಸರ್ವರೂ ಕೈಜೋಡಿಸೋಣ ಎಂದರು.

ಬಿಜೆಪಿ ಯುವ ಮುಖಂಡರ ಡಾ.ಶಿವರಾಜ ದೇಶಮುಖ ಮಾತನಾಡಿ, ಪ್ರತಿಯೊಂದರಲ್ಲಿಯೂ ಅಭಿವೃದ್ಧಿ ಹೊಂದಿ ಪೈಪೋಟಿಯ ಸಾಮರ್ಥ್ಯಯುಳ್ಳ ಸಶಕ್ತ ಭಾರತದ ಕನಸು ಸಾಕಾರವಾಗುತ್ತಿದೆ, ಇಂತಹ ಸಂದರ್ಭದಲ್ಲಿ ಕೆಲವರು ದೇಶದಲ್ಲಿ ಅಸ್ಥಿರತೆ ಮೂಡಿಸಲು ಸನಾತನ ಧರ್ಮದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ, ಸನಾತನ ಹಿಂದೂ ಧರ್ಮ ಇನ್ನೂ ಎತ್ತರಕ್ಕೆ ಹೋಗಲಿದೆ. ಧರ್ಮ,ದೇಶ ನಮ್ಮ ಸ್ವಾಭಿಮಾನದ ಮೇಲ್ಪಂಕ್ತಿ ಎಂದರು.

ವೇದಿಕೆ ಮೇಲೆ ಹಿರಿಯರಾದ ಅಡಿವೆಪ್ಪ ಜಾಕಾ, ಶಾಮರಾವ ಬುದನೂರು, ಮಲ್ಲಿಕಾರ್ಜುನ ಚಿಲ್ಲಾಳ ಇದ್ದರು. ನಗರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಕೋನೇರ ಪ್ರಾಸ್ತವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಬಸವರಾಜ ಅರುಣಿ, ಅಮರೇಶ ಗೌಡಹೋತಪೇಟ, ರಾಜು ಪಂಚಬಾವಿ, ವಿಶ್ವನಾಥ ಗೌಡಗಾಂವ್, ಸೋಪಣ್ಣ ಸಗರ, ಶರಣಪ್ಪ ಟೋಕಾಪುರ, ಅಬ್ದುಲ್ ಹಾದಿಮನಿ, ಉಮೇಶ ಮಹಾಮನಿ, ಕಲ್ಲಪ್ಪ ಮಾಳಗಿ, ಮುದುಕಪ್ಪ ಜಂಗಳಿ, ರಾಜಪ್ಪ ಚಿಟೆನೂರ, ಭೀಮರಾಯ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ, ಮಂಜುನಾಥ ಅಲಬನೂರ, ಶರಣಯ್ಯ ಸ್ವಾಮಿ, ಓಂ ಪ್ರಕಾಶ್ ಸೇರಿದಂತೆ ಬಡಾವಣೆಯವರು, ಹಿರಿಯರು ಇದ್ದರು.

About The Author