ತಾಯಿ-ಮಗು ಅಪೌಷ್ಟಿಕತೆ ನಿವಾರಣೆಗಾಗಿ ರಾಷ್ಟ್ರೀಯ ಪೋಷಣಾ ಅಭಿಯಾನ ಸಹಕಾರಿ ಸಿದ್ದಣ್ಣ ಬಿರಾದಾರ

 ಶಹಾಪುರ ನಗರದ ಕುಂಬಾರ ಓಣಿ ಅ0ಗನವಾಡಿ ಕೇ0ದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾದ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಸಿದ್ದಣ್ಣ ಬಿರಾದಾರ ಉದ್ಘಾಟಿಸಿ ಮಾತನಾಡಿದರು.

 

ಶಹಾಪುರ : ತಾಯಿ ಮತ್ತು ಮಕ್ಕಳ ಪೌಷ್ಟಿಕತೆಗೆ ಸಂಬ0ಧಿಸಿದ0ತೆ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ಅಭಿಯಾನ ನಡೆದಿದೆ. ಆ ಮೂಲಕ ಇಡೀ ಕುಟುಂಬದಲ್ಲಿ ಜಾಗೃತಿ ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ.ಇದರಿಂದ ಮಕ್ಕಳು ಮತ್ತುಗರ್ಭಿಣಿಯರು ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗಿದೆಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದಣ್ಣ ಬಿರಾದಾರ್ ತಿಳಿಸಿದರು.

ನಗರದ ಕುಂಬಾರ ಓಣಿ ಅ0ಗನವಾಡಿ ಕೇ0ದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾದ ಪೋಷಣಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಈ ಪೋಷಣ ಅಭಿಯಾನದ ಉದ್ದೇಶ ಗರ್ಭಿಣಿ ತಾಯಂದಿರಲ್ಲಿ ರಕ್ತಹೀನತೆ ಅಪೌಷ್ಟಿಕತೆ ಕೊರತೆ ಕಾಣಬಾರದು.ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಅವರ ಆರೋಗ್ಯದ ಹಿತದೃಷ್ಟಿಯಿಂದ ಇoತಹ ಪೋಷಣ ಅಭಿಯಾನ ಕಾರ್ಯಕ್ರಮಗಳನ್ನು ಮಾಡಿ ಗರ್ಭಿಣಿ ಸ್ತ್ರೀಯರಲ್ಲಿ ಯಾವ ಯಾವ ಸಮಸ್ಯೆಗಳು ಉಂಟಾಗುತ್ತವೆ ಗರ್ಭಿಣಿಯರು ಯಾವ ಆಹಾರವನ್ನು ಸೇವಿಸಬೇಕು.ಅವರು ತಮ್ಮಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸಿ ಆರೋಗ್ಯವಂತ ಕುಟು0ಬ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾಬಾಯಿ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಹದಿಹರೆಯದ ಯುವತಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.ಅವರಿಗೆ ಪೌಷ್ಟಿಕ ಆಹಾರ ಒದಗಿಸುವುದು, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಹಾಗೂ ಅಪೌಷ್ಟಿಕ ಹೋಗಲಾಡಿಸುವುದು ಪೋಷಣ ಅಭಿಯಾನದ ಉದ್ದೇಶವಾಗಿದೆ.ಅಭಿಯಾನದ ಅಂಗವಾಗಿ ಪ್ರತಿ ತಿಂಗಳಲ್ಲಿ ೨ ದಿನ ಅಂಗನವಾಡಿ ಕೇಂದ್ರಗಳಲ್ಲಿ ವಿಶೇಷಕಾರ್ಯಕ್ರಮ ನಡೆಯಲಿವೆ. ಒಂದು ದಿನ `ಅನ್ನಪ್ರಾಶನ ದಿನ’ ನಡೆಯಲಿದ್ದು, ಅಂದು ಮಗುವಿನ ಬೆಳವಣಿಗೆ ಹಂತದಲ್ಲಿ ಯಾವ ರೀತಿ ಆಹಾರ ನೀಡಬೇಕು.ಜೊತೆಗೆ ಮಗುವಿನ ತೂಕ ಮತ್ತುಎತ್ತರದ ಪರೀಕ್ಷೆ ನಡೆಸುವುದೂ ಸೇರಿದಂತೆ ಮಗುವಿನ ಆರೋಗ್ಯಕರ ಬೆಳೆವಣಿಗೆಗೆ ತಾಯಂದಿರಿಗೆ ಮಾಹಿತಿ ನೀಡಲಾಗುವುದು. ಮತ್ತೊಂದು ದಿನ ಸೀಮಂತ ಕಾರ್ಯಕ್ರಮ ನಡೆಯಲಿದೆಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದತಾಲೂಕಅಂಗನವಾಡಿ ನೌಕರರ ಸಂಘದಅಧ್ಯಕ್ಷ ಬಸಲಿಂಗಮ್ಮ ನಾಟೇಕಾರ್‌ಅವರು, ಅಂಗನವಾಡಿ ಕೇ0ದ್ರಕ್ಕೆ ಬರುವ ಮಕ್ಕಳನ್ನು ಪೋಷಣೆ ಮಾಡುವ ನಮ್ಮಕಾರ್ಯಕರ್ತೆಯರು ಆ ಮಕ್ಕಳಿಗೆ ೨ನೇ ತಾಯಿ ಇದ್ದಂತೆ.ನಿಷ್ಠೆ ಹಾಗೂ ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸುವ ನಮಗೆ ಸರ್ಕಾರ ಸುದೀರ್ಘವಾದ ನಮ್ಮ ಸೇವೆಯನ್ನು ಗುರುತಿಸಿ ಖಾಯಂ ಮಾಡಬೇಕು. ನ್ಯಾಯ ಸಮ್ಮತವಾದ ನಮ್ಮ ಬೇಡಿಕೆಯನ್ನುಈಡೇರಿಸ ಬೇಕಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಕವಿತಾ ಬಡಿಗೇರ್, ಆರೋಗ್ಯಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ಮಲ್ಲಪ್ಪ ಕಾಂಬಳೆ, ಪೇಟ್ ಶಹಾಪುರ ಶಾಲೆಯ ಮುಖ್ಯಗುರು ಸುಭಾಷ್, ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮಿದೇವಿ ನಾಗರತ್ನ ಮಡಿವಾಳಮ್ಮ ಅಶ್ವಿನಿ ಸುಮಂಗಲ ಭಾಗ್ಯಶ್ರೀ ಸರೋಜಾ ಸೇರದಂತೆ ಅ0ಗನವಾಡಿ ಸಹಾಯಕಿಯರು ಗರ್ಭಿಣಿಯರು ಬಾಣಂತಿಯರು ಭಾಗವಹಿಸಿದ್ದರು.

About The Author