ಬಸವಂತಪುರ ಗ್ರಾಮದ ಮರೆಮ್ಮ ದೇವಸ್ಥಾನ ಹುಂಡಿ ಸೇರಿದಂತೆ ಬೈಕ್‌ ಕಳ್ಳತನ ಮಾಡುತ್ತಿದ್ದ ಮೂರು ಜನ ಆರೋಪಿಗಳ ಬಂಧನ 13 ಬೈಕ್ ಹುಂಡಿಯಿಂದ ಕದ್ದ 15 ಸಾವಿರ ಹಣ ವಶ

ಯಾದಗಿರಿ : ಜಿಲ್ಲೆಯ ವಿವಿಧ ಕಡೆ ಮೋಟರ್ ಬೈಕ್ ಕಳವು ಪ್ರಕರಣ ಬೇಧಿಸಿರುವ ಶಹಾಪುರ ಪೊಲೀಸರು 13 ಬೈಕ್‌ ಕಳವು ಮಾಡಿದ ಮೂರು ಜನ ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.ಅವರಿಂದ 8 ಲಕ್ಷ ಮೌಲ್ಯದ ಬೈಕ್ ಗಳು
ಹಾಗೂ ದೇವಸ್ಥಾನದ ಹುಂಡಿಯಲ್ಲಿ ಹಣ ಕದ್ದ 15 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ರಸ್ತಾಪುರ ಗ್ರಾಮದ ಸಂತೋಷ ಶರಣಗೌಡ ಅರಿಕೇರಿ, ಖಂಡಪ್ಪ ಮಲ್ಲಪ್ಪ ನಾಯ್ಕೋಡಿ ಹಾಗೂ ಮದ್ರಿಕಿ ಗ್ರಾಮದ ದೇವರಾಜ ಗುರುಲಿಂಗಪ್ಪ ಅಗಸರ ಬಂಧಿತ ಆರೋಪಿಗಳಾಗಿದ್ದಾರೆ.ಕಳ್ಳರ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಜಿ ಸಂಗೀತಾ ಸುರಪುರ ಡಿವೈಎಸ್ಪಿ ಜಾವಿದ್ ಇನಾಮದಾರ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು.

“ಇಂದಿನ ಮುಸ್ಸಂಜೆಯಲ್ಲಿ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾ ದೇವಸ್ಥಾನಗಳು ಕಂಡಿದ್ದು ಹೀಗೆ “

ನಗರದ ವಾಲ್ಮೀಕಿ ಚೌಕ ಹತ್ತಿರ 3 ಜನ ಅನುಮಾನಾಸ್ಪದವಾಗಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ತಿರುಗಾಡುತ್ತಿದ್ದನ್ನು ಕಂಡ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಶಹಾಪುರ, ವಡಿಗೇರಾ, ಸೈದಾಪುರ್ ಹಾಗೂ ಜೇವರ್ಗಿ ಹಲವು ಕಡೆ ಬೈಕ್ ಕಳ್ಳತನ ಕಳುವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ವಡಿಗೇರ ತಾಲೂಕಿನ ಬಸಂತಪೂರ ಗ್ರಾಮದಲ್ಲಿ ಇತ್ತೀಚೆಗೆ ಮರೆಮ್ಮ ದೇವಿ ದೇವಾಲಯದ ಹುಂಡಿ ಹಣ ಸಹ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಕದ್ದ ಹುಂಡಿ ಹಣದಲ್ಲಿ ಖರ್ಚು ಮಾಡಿ ಉಳಿದ 15 ಸಾವಿರ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಹಾಪುರ ಠಾಣೆಯ ಪಿಐ ಎಸ್ಎಂ ಪಾಟೀಲ್, ಪಿಎಸ್ಐ ಶಾಮ್ ಸುಂದರ್ ನಾಯಕ್, ಪೋಲಿ ಸಿಬ್ಬಂದಿಗಳಾದ ಸಿದ್ದರಾಮಯ್ಯ, ಲಕ್ಕಪ್ಪ, ರಾಮಚಂದ್ರ, ಶಿವಲಿಂಗ, ಧರ್ಮರಾಜ, ಜುಬೇರ್ ಪಟೇಲ್, ಮುತ್ತಪ್ಪ, ಮಹಾದೇವಪ್ಪ ತಂಡದಲ್ಲಿದ್ದರು.ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಸ್ ಪಿ ಹಾಗೂ ಡಿವೈಎಸ್ಪಿ ಅವರು ಅಭಿನಂದಿಸಿದ್ದಾರೆ.