MLA ಟಿಕೆಟ್ ಕೊಡಿಸುವುದಾಗಿ ನಂಬಿಸಿ ₹7 ಕೋಟಿ ವಂಚಿಸಿದ ಚೈತ್ರ ಕುಂದಾಪುರ ಬಂಧನ

ಉಡುಪಿ : ತಾನು ಆರ್ ಎಸ್ ಎಸ್ ಮತ್ತು ಹಿಂದೂ ಕಾರ್ಯಕರ್ತೆ ಎಂದು ಹೇಳಿಕೊಂಡು ರಾಜ್ಯಾದ್ಯಂತ ತನ್ನ ಹಿಂದೂ ಶೈಲಿಯ ಭಾಷಣದಿಂದಲೇ ಪ್ರಚಲಿತವಿದ್ದ ಉಡುಪಿಯ ಚೈತ್ರಾ ಕುಂದಾಪುರ ಬೈಂದೂರು ಕ್ಷೇತ್ರಕ್ಕೆ ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ಉಡುಪಿಯ ಉದ್ದಿಮೆಯಾದ ಗೋವಿಂದು ಬಾಬು ಪೂಜಾರಿ ಅವರಿಂದ ಏಳು ಕೋಟಿ ರೂಪಾಯಿ ತೆಗೆದುಕೊಂಡಿದ್ದರು.ಆದರೆ ಯಾವುದೇ ವಿಧಾನಸಭೆ ಟಿಕೆಟ್ ಸಿಗದ ಕಾರಣ ಗೋವಿಂದ್ ಪೂಜಾರಿ ಅವರು ಉಡುಪಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.ಇದನ್ನಾದರಿಸಿ ಇಂದು ಉಡುಪಿಯ ಕೃಷ್ಣ ಮಠದ ಪಾರ್ಕಿನಲ್ಲಿ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಮತ್ತು ಅವರ ಗ್ಯಾಂಗ್ ನ್ನು ಬಂಧನ ಮಾಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರಕ್ಕೆ ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ಚೈತ್ರ ಕುಂದಾಪುರ ಖ್ಯಾತ ಉದ್ಯಮಿಯಾದ ಗೋವಿಂದ್ ಬಾಬು ಪೂಜಾರಿ ಅವರಿಂದ ಏಳು ಕೋಟಿ ತೆಗೆದುಕೊಂಡಿದ್ದರು ಎಂಬ ಆರೋಪವಿದೆ. ಉದ್ಯಮಿ ಬಾಬು ಪೂಜಾರಿ ಉಡುಪಿ ಪೊಲೀಸ್ ಠಾಣೆಗೆ ಚೈತ್ರ ಕುಂದಾಪುರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಟಿಕೆಟ್ ಸಿಗದೇ ಕಂಗಾಲಾಗಿದ್ದ ಗೋವಿಂದು ಬಾಬು ಉಡುಪಿ ಪೊಲೀಸರಿಗೆ ದೂರು ದಾಖಲಿಸಿದ್ದರು ಇದನ್ನು ಆದರಿಸಿ ಚೈತ್ರ ಕುಂದಾಪುರವರನ್ನು ಬಂಧನ ಮಾಡಿದ್ದಾರೆ. ಈಕೆಯ ಜೊತೆಗೆ ಗಗನ್ ಕಡೂರು, ಶ್ರೀಕಾಂತ್, ನಾಯಕ್, ಪ್ರಸಾದ್, ಧನರಾಜ್ ರಮೇಶ್, ಸ್ವಾಮೀಜಿಯವರಾದ ಅಭಿನವ ಹಾಲಶ್ರೀ ಸ್ವಾಮಿಯವರು ಶಾಮೀಲಾಗಿದ್ದಾರೆ ಎಂದು ಹೇಳಲಾದಾಗಿದೆ.

About The Author