ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬಂಗಾರ ಬೆಳ್ಳಿ ಪದಕ ಶಾಸಕ ತುನ್ನೂರಿಂದ ಅಭಿನಂದನೆ

ವಡಗೇರ : ಪಟ್ಟಣದ ಕಸ್ತೂರಿ ಬಾ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರು ಗ್ಲೋಬಲ್ ಶೋಟೋಕಾನ್ ಕರಾಟೆ – ಡು- ಇಂಡಿಯಾ ವತಿಯಿಂದ ಹೈದ್ರಾಬಾದ್ನ ಕೋಟ್ಲಾ ವಿಜಯಭಾಸ್ಕರರೆಡ್ಡಿ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಐದನೇ ವರ್ಷದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ನಲ್ಲಿ ಹದಿನೇಳು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಅದರಲ್ಲಿ ಹನ್ನೆರೆಡು ವಿದ್ಯಾರ್ಥಿನಿಯರು ಜಯಶಾಲಿಯಾಗಿದ್ದಾರೆ. ಈ ಕರಾಟೆ ಸ್ಪರ್ಧೆಯಲ್ಲಿ ಅಯ್ಯಮ್ಮ ಹಾಗೂ ರೇಖಾ ಬಂಗಾರದ ಪದಕಗಳನ್ನು ಪಡೆದುಕೊಂಡಿದ್ದಾರೆ. ಮಯಮ್ಮ ಲಕ್ಷ್ಮಿ ಮರಿಲಿಂಗಮ್ಮ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಇನ್ನುಳಿದ ವಿದ್ಯಾರ್ಥಿಯರು ಮೂರು ನಾಲ್ಕನೇ ಸ್ಥಾನದಲ್ಲಿ ತಾಮ್ರ ಕಂಚಿನ ಪದಕಗಳನ್ನು ಪಡೆದಿದ್ದಾರೆ. ಮಕ್ಕಳ ಸಾಧನೆಗೆ ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಚನ್ನಾರೆಡ್ಡಿಗೌಡ ತುನ್ನೂರ ವಿದ್ಯಾರ್ಥಿನಿಯರಿಗೂ ಹಾಗೂ ಕರಾಟೆ ತರಬೇತಿದಾರಿಗೂ ಶಾಲಾ ಶಿಕ್ಷಕ‌ ಸಿಬ್ಬಂದಿ ವರ್ಗಕ್ಕೂ ಅಭಿನಂದನೆಗಳನ್ನು ತಿಳಿಸಿ ಮಾತನಾಡಿದರು.

ನನ್ನ ಕ್ಷೇತ್ರದ ಗ್ರಾಮೀಣ ಭಾಗದ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಂಗಾರ ಬೆಳ್ಳಿ ಹಾಗೂ ಕಂಚು ತಾಮ್ರದ ಪದಕಗಳನ್ನು ಗೆಲ್ಲುವ ಮೂಲಕ ದೇಶ ರಾಜ್ಯ ಜಿಲ್ಲೆ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.ನಾನೇ ಖುದ್ದಾಗಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸತ್ಕರಿಸಿ ಅಭಿನಂದಿಸುವುದಾಗಿ ತಿಳಿಸಿದ್ದಾರೆ. ಮಕ್ಕಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕಿ ಪಿಬಿ ಗಾಯಿತ್ರಿ ನಿಲಯ ಪಾಲಕಿ ಚಂದ್ರಕಲಾ ಕರಾಟೆ ಶಿಕ್ಷಕ ಸುನಿಲ್ ವಿಶ್ವಕರ್ಮ ತರಬೇತಿದಾರ ಶ್ರೀಕಾಂತ ಮಾಸ್ಟರ್ ಸಂಗೀತಾ ಶಾಂತಾ ಜಡಿ ದಿಲ್ಶಾದ್ ಪವಿತ್ರಾ  ಪಾಲಕ ಪೋಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.